India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೈಸ್ ಜೆಟ್ ವಿಮಾನದಲ್ಲಿ ಬೆಂಕಿ; 185 ಜೀವ ಉಳಿಸಿದ ಪೈಲೆಟ್

|
Google Oneindia Kannada News

ಪಾಟ್ನಾ ಜೂ.20: ಪಾಟ್ನಾದಿಂದ ದೆಹಲಿಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ಬೋಯಿಂಗ್ 737 ವಿಮಾನದಲ್ಲಿ ಆಕಸ್ಮಿಕ ಬೆಂಕಿ ಕಂಡು ಬಂದ ಹಿನ್ನೆಲೆ ಟೇಕ್ ಆಫ್ ಕೆಲವೇ ನಿಮಿಷಗಳಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಅದೃಷ್ಟವಶಾತ್ ಪೈಲೆಟ್‌ ಸಮಯ ಪ್ರಜ್ಞೆಯಿಂದ ಯಾವುದೇ ಹಾನಿಯಾಗಿಲ್ಲ.

ಈ ಘಟನೆಯಲ್ಲಿ ಸ್ಪೈಸ್ ಜೆಟ್ ಬೋಯಿಂಗ್ 737 ಪೈಲಟ್ ಕ್ಯಾಪ್ಟನ್ ಮೋನಿಕಾ ಖನ್ನಾ ಅವರ ಸಮಯಪ್ರಜ್ಞೆಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಸುಮಾರು 185 ಪ್ರಯಾಣಿಕರ ಜೀವ ಉಳಿದ ಘಟನೆ ಭಾನುವಾರ ನಡೆದಿದೆ.

ಪಾಟ್ನಾದಿಂದ ದೆಹಲಿಗೆ ತೆರಳುವ ಸ್ಪೈಸ್ ಜೆಟ್ 737 ವಿಮಾಣ ಬೆಳಗ್ಗೆ ಪಾಟ್ನಾದಿಂದ ಟೇಕ್ಆಫ್‌ ಆಗಿತ್ತು. ನಂತರ ಕೆಲವೇ ನಿಮಿಷಗಳಲ್ಲಿ ವಿಮಾನದ ಇಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಪೈಲಟ್ ಗಮನಕ್ಕೆ ಬಂದಿದೆ. ಕೂಡಲೇ ಸಮಯಪ್ರಜ್ಞೆ ಮೆರೆದ ಮೋನಿಕಾ ಖನ್ನಾ ಮರಳಿ ಪಾಟ್ನಾ ಏರ್‌ ಪೋರ್ಟ್‌ಗೆ ವಿಮಾನ ವಾಪಸ್ ತಂದರು.

ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ವಿಮಾನ ತುರ್ತು ಭೂ ಸ್ಪರ್ಶದ ಮೂಲಕ ನೂರಾರು ಪ್ರಯಾಣಿಕರ ಜೀವ ರಕ್ಷಣೆಗೆ ಕಾರಣರಾದ ಪೈಲಟ್ ಮೋನಿಕಾ ಖನ್ನಾ ಕಾರ್ಯವನ್ನು ಸಾರ್ವಜನಿಕರು ಮತ್ತು ಅಧಿಕಾರಿಗಳು ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ ಟ್ಯಾಗ್ ಬಳಸಿ ಮೊನಿಕಾ ಖನ್ನಾ ಎಂದು ಪೋಸ್ಟ್‌ ಹಾಕಿ ಪ್ರಶಂಸಿದ್ದಾರೆ.

ಪ್ರಯಾಣಿಕರ ಸ್ಥಳಾಂತರ; ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ಬೆಂಕಿ ಕಂಡು ಬಂದ ಪರಿಣಾಮ ಪೈಲಟ್ ವಿಮಾನದ ಒಂದು ಇಂಜಿನ್‌ ಅನ್ನು ಸ್ಥಗಿತಗೊಳಿಸಿದ್ದಾರೆ. ನಂತರ ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಒಂದೇ ಇಂಜಿನ್‌ ಸಹಾಯದಿಂದ ಪುನಃ ಪಾಟ್ನಾದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ.

Spice Jet Pilot Monica Khanna Saved 185 People Lives

ಇದರಿಂದ ಸಂಭವನೀಯ ಬೃಹತ್ ಅವಘಡವೊಂದು ತಪ್ಪಿದೆ. ಪ್ರಯಾಣಿಕರಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅವರೆಲ್ಲರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಏರ್‌ಪೋರ್ಟ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಮಾನ ಲ್ಯಾಂಡ್ ಆಗುವಾಗ ಇಂಜಿನ್‌ ಭಾಗದಲ್ಲಿ ಸಣ್ಣಗೆ ಹೊಗೆ ಕಂಡು ಬಂದಿರುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಎಲ್ಲೆಡೆ ಹರಿದಾಡುತ್ತಿದೆ.

English summary
Fire incident on a Spice Jet flight frotm Patna to Delhi. Pilots time conscious flight took emergency landing. Tribute to khanna pilot who saved 185passangers lives
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X