ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸ್ಪೈಸ್ ಜೆಟ್' ಉದ್ಯಮಿ ಅಜಯ್ ಸಿಂಗ್ ರಿಂದ 'ಎನ್‍ಡಿಟಿವಿ' ಖರೀದಿ?

By Sachhidananda Acharya
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: "ಭಾರತ ಪ್ರಪ್ರಥಮ ಖಾಸಗಿ ಇಂಗ್ಲೀಷ್ ಸುದ್ದಿ ವಾಹಿನಿ ಎನ್‍ಡಿಟಿವಿ ಮಾರಾಟವಾಗಲಿದೆ. ಸಂಸ್ಥೆಯನ್ನು 2014ರ ಲೋಕಸಭೆ ಚುನಾವಣೆ ವೇಳೆ 'ಆಪ್ ಕಿ ಬಾರ್, ಮೋದಿ ಸರ್ಕಾರ್' ಘೋಷಣೆ ನೀಡಿದ ಸ್ಪೈಸ್ ಜೆಟ್ ಸಹ ಸಂಸ್ಥಾಪಕ ಅಜಯ್ ಸಿಂಗ್ ಖರೀದಿಸಲಿದ್ದಾರೆ." ಹೀಗೊಂದು ಗಾಳಿ ಸುದ್ದಿ ಮಾಧ್ಯಮ ವಲಯದಲ್ಲಿ ಓಡಾಡುತ್ತಿದೆ.

ಈ ಸುದ್ದಿಯನ್ನು ಸುಳ್ಳು ಮತ್ತು ಸತ್ಯ ಎಂದು ಹಲವು ಮಾಧ್ಯಮಗಳು ಬೇರೆ ಬೇರೆ ವರದಿಗಳನ್ನು ಪ್ರಕಟಿಸಿವೆ.

'Spice Jet' Co-founder Ajay Singh to buy 'NDTV'?

ಇನ್ನು ಇದೇ ಎನ್‍ಡಿಟಿವಿಯ ಕಚೇರಿ ಮೇಲೆ ಕಳೆದ ಜುಲೈ 5ರಂದು ಸಿಬಿಐ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಎನ್‍ಡಿಟಿವಿಯ ಶೇ. 40 ಶೇರುಗಳನ್ನು ಅಜಯ್ ಸಿಂಗ್ ಖರೀದಿಸಲಿದ್ದಾರೆ ಮತ್ತು ಸಂಪಾದಕೀಯ ಹಕ್ಕುಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು 'ಇಂಡಿಯನ್ ಎಕ್ಸ್ ಪ್ರೆಸ್' ಉನ್ನತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಇನ್ನು ಚಾನಲ್ ನ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಶೇ. 20 ಶೇರುಗಳನ್ನು ತಮ್ಮ ಬಳಿಯಲ್ಲೇ ಇಟ್ಟುಕೊಳ್ಳಲಿದ್ದಾರೆ ಎಂದು ವರದಿ ಹೇಳಿದೆ.
ಎನ್‍ಡಿಟಿವಿಯ400 ಕೋಟಿ ಸಾಲದ ಹೊಣೆಯನ್ನು ಅಜಯ್ ಸಿಂಗ್ ಹೆಗಲೇರಿಸಿಕೊಳ್ಳಲಿದ್ದಾರೆ, ಒಟ್ಟಾರೆ 600 ಕೂಟಿ ರೂಪಾಯಿಯ ಡೀಲ್ ಇದು ಎಂದು 'ಇಂಡಿಯನ್ ಎಕ್ಸ್ ಪ್ರೆಸ್' ಹೇಳಿದೆ.

ಡೀಲ್ ಪ್ರಕಾರ ಸುಮಾರು 100 ಕೋಟಿ ರೂಪಾಯಿಯನ್ನು ರಾಯ್ ದಂಪತಿ ಪಡೆದುಕೊಳ್ಳಲಿದ್ದಾರೆ ಎಂದು ಅದು ಹೇಳಿದೆ.

ಆದರೆ, ಈ ಸುದ್ದಿ ಶುದ್ಧ ಸುಳ್ಳು ಎಂದು ಚಾನಲ್ ನ ಮೂಲಗಳು ಹೇಳಿದ್ದಾಗಿ 'ದಿ ಹಿಂದೂ' ವರದಿ ಮಾಡಿದೆ.

English summary
As per the report 'Spice Jet’ Co-founder Ajay Singh is planning to buy NDTV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X