ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನೆ ಬತ್ತಳಿಕೆ ಸೇರಿದ ಬಾಲಕೋಟ್ ದಾಳಿಗೆ ಬಳಸಿದ ಆಸ್ತ್ರ ಸ್ಪೈಸ್ ಬಾಂಬ್

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಸೆ. 16: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಬಾಲಕೋಟ್ ಮೇಲೆ ಭಾರತ ಪ್ರತಿ ದಾಳಿ ನಡೆಸಿತ್ತು. ಜೈಷ್ ಎ ಮೊಹಮ್ಮದ್ ಉಗ್ರರನ್ನು ಭಾರತೀಯ ವಾಯುಸೇನೆ ಧ್ವಂಸಗೊಳಿಸಿತ್ತು. ಉಗ್ರರ ದಮನಕ್ಕೆ ಅಂದು ಬಳಸಿದ್ದು ಸ್ಪೈಸ್ ಬಾಂಬ್. ಇಂದು ಇದೇ ಸ್ಪೈಸ್ ಬಾಂಬ್ ಗಳನ್ನು ಇಸ್ರೇಲ್ ದೇಶದಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ. ಹೊಸ ಸುಧಾರಿತ ಬಾಂಬ್ ಬಗ್ಗೆ ಮಾಹಿತಿ ಇಲ್ಲಿದೆ...

ಭಾರತೀಯ ಸೇನೆ ತನ್ನ ಬತ್ತಳಿಕೆಯನ್ನು ಇನ್ನಷ್ಟು ಬಲಗೊಳಿಸಿಕೊಳ್ಳಲು ಇಸ್ರೇಲ್ ಜತೆ ಒಪ್ಪಂದ ಮಾಡಿಕೊಂಡಿದ್ದು, 100 ಸ್ಪೈಸ್ ಬಾಂಬ್ ಖರೀದಿಗೆ ಜೂನ್ ತಿಂಗಳಲ್ಲಿ ಮುಂದಾಗಿತ್ತು. ತಿಂಗಳುಗಳ ಸ್ಪೈಸ್ ಬಾಂಬ್ 2000 ಮೊದಲ ಬ್ಯಾಚ್ ಗ್ವಾಲಿಯರ್ ಏರ್ ಬೇಸ್ ತಲುಪಿದೆ. ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಕೋಟ್ ನಲ್ಲಿದ್ದ ಜೈಷ್ ಎ ಮೊಹಮ್ಮದ್ ಉಗ್ರರ ನೆಲೆ ಮೇಲೆ ಯಶಸ್ವಿ ದಾಳಿಗೆ ಈ ಸುಧಾರಿತ ಬಾಂಬ್ ಸಹಕಾರಿಯಾಗಿತ್ತು,

ಬಾಲಕೋಟ್ ದಾಳಿ ನಂತರ ಮೊದಲ ಬಾರಿಗೆ ಪಾಕ್ ವಾಯುಮಾರ್ಗದಲ್ಲಿ ಮೋದಿ ಪ್ರಯಾಣಬಾಲಕೋಟ್ ದಾಳಿ ನಂತರ ಮೊದಲ ಬಾರಿಗೆ ಪಾಕ್ ವಾಯುಮಾರ್ಗದಲ್ಲಿ ಮೋದಿ ಪ್ರಯಾಣ

ಇಸ್ರೇಲ್ ದೇಶದ ರಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಉತ್ಪಾದಿಸುವ ಈ ಸ್ಪೈಸ್ ಬಾಂಬ್ ಕೃತಕ ಬುದ್ಧಿಮತ್ತೆ(AI) ಹೊಂದಿದ್ದು, ತನ್ನ ಗುರಿಯನ್ನು ಯಾವುದೆ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ತಲುಪಿ ಧ್ವಂಸಗೊಳಿಸಬಲ್ಲ ಸಾಮರ್ಥ್ಯ ಹೊಂದಿದೆ.

Spice-2000 bombs and the Balakot connection; What’s new about these upgraded building blasters

ರಿಯಲ್ ಟೈಮ್ ನಲ್ಲಿ ಎಲೆಕ್ಟ್ರೋ ಆಪ್ಟಿಕಲ್ ಇಮೇಜ್ ನೊಂದಿಗೆ ಹೊಂದಾಣಿಕೆ ನಡೆಸಿ ಸುಮಾರು 60 ಕಿ.ಮೀ ದೂರದ ಗುರಿಯನ್ನು ನಿಖರವಾಗಿ ಧ್ವಂಸಗೊಳಿಸಬಲ್ಲ ಸಾಮರ್ಥ್ಯ ಈ ಸ್ಪೈಸ್ ಬಾಂಬ್ ಗಿದೆ. ಬಾಂಬಿನ ಕಂಪ್ಯೂಟರ್ ಮೆಮೋರಿಯಲ್ಲಿ ಗುರಿ, ಗುರಿ ಸಾಗಬೇಕಾದ ಪಥ ಸೇರಿದಂತೆ ಹಲವು ರಿಫರೆನ್ಸ್ ಮಾಹಿತಿಯನ್ನು ಫೀಡ್ ಮಾಡಲಾಗಿರುತ್ತದೆ. ಗುರಿ ಸಾಗುವ ಹಾದಿಯನ್ನು ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಲ್ಲ ನಿಪುಣ ಬಾಂಬ್ ಇದಾಗಿದೆ.

ಬಾಲಾಕೋಟ್ ದಾಳಿಯಲ್ಲಿ ಪಾಲ್ಗೊಂಡಿದ್ದ ಐವರು ಪೈಲಟ್ ಗಳಿಗೆ ಗ್ಯಾಲಂಟ್ರಿ ಪದಕಬಾಲಾಕೋಟ್ ದಾಳಿಯಲ್ಲಿ ಪಾಲ್ಗೊಂಡಿದ್ದ ಐವರು ಪೈಲಟ್ ಗಳಿಗೆ ಗ್ಯಾಲಂಟ್ರಿ ಪದಕ

ಸ್ಪೈಸ್ ಬಾಂಬ್ ಗಳು ಮೂರು ವಿಧಗಳಲ್ಲಿ ಲಭ್ಯವಿದ್ದು, ಸ್ಪೈಸ್ 2000, ಸ್ಪೈಸ್ 1000 ಹಾಗೂ ಸ್ಪೈಸ್ 250. ಈ ಸ್ಪೈಸ್ 2000 ಬಿಲ್ಡಿಂಘ್ ಬ್ಲಾಸ್ಟರ್ ಬಾಂಬ್ ಗಳಾಗಿದ್ದು, ಒಂದು ದೊಡ್ಡ ಕಟ್ಟಡವನ್ನೇ ಧ್ವಂಸಗೊಳಿಸಬಲ್ಲವು. ಭಾರತೀಯ ವಾಯುಸೇನೆ ಸೇರಿರುವ ಈ ಸ್ಪೈಸ್ ಬಾಂಬ್ ಜೊತೆಗೆ ಎಂಕೆ84, ಬಿಎಲ್ ಯು 109, ಎಪಿಡಬ್ಲ್ಯೂ ಹಾಗೂ ಆರ್ ಎಪಿ2000 ಆಡ್ ಆನ್ ಕಿಟ್ ಇದೆ.

ಐಎಎಫ್ ನ ಯುದ್ಧ ವಿಮಾನ ಮಿರಾಜ್ 2000 ನೊಂದಿಗೆ ಸ್ಪೈಸ್ 2000 ಬಾಂಬ್ ಹೊಂದಿಸಲಾಗಿದೆ. SPICE (smart precise impact and cost-effective) ಅಣ್ವಸ್ತ್ರ ರಹಿತ ಅತ್ಯಂತ ಪ್ರಬಲ ಬಾಂಬ್ ಎಂದು ಪರಿಗಣಿಸಲಾಗಿದೆ.

English summary
The first batch of the advanced version of Spice-2000 'building blasters' bombs, for which the order was placed with Israel in June, have reportedly arrived at IAF's Gwalior base.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X