ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ಸೂರಿನಡಿ 15 ದಿನಕ್ಕೊಮ್ಮೆ ಮಗ್ಗಲು ಬದಲಿಸು!

By Srinath
|
Google Oneindia Kannada News

Spend 15 days alternately with wife and live-in partner Madya Pradesh Lok Adalat
ಖಾಂಡ್ವಾ (ಮಧ್ಯಪ್ರದೇಶ), ಡಿ.2: ಲಿವ್ ಇನ್‌ ಪಾಪವೂ ಅಲ್ಲ; ಅಪರಾಧವೂ ಅಲ್ಲ ಎಂದು ಗಂಡು-ಹೆಣ್ಣಿನ ಸಂಬಂಧಕ್ಕೆ ಹೊಸ ಕಾನೂನು ಚೌಕಟ್ಟು ತೊಡಿಸಲು ಸುಪ್ರೀಂಕೋರ್ಟ್ ಯತ್ನಿಸುತ್ತಿರುವುದರ ಬೆನ್ನಿಗೇ, ಇದಕ್ಕೆ ಪೂರಕವಾಗಿ ಇಲ್ಲಿನ ಲೋಕ ಅದಾಲತ್ ನ್ಯಾಯಾಲಯವೊಂದು ಕುತೂಹಲಕಾರಿ ತೀರ್ಪು ನೀಡಿದೆ.

ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಕಾಲಾಂತರದಲ್ಲಿ ಹೆಂಡತಿಯಿಂದ ವಿಮುಖನಾಗಿ ಪ್ರೇಯಸಿ ಸಂಗಕ್ಕೆ ಹಾತೊರೆದಿದ್ದ. ಈ ಪ್ರಸಂಗವು ಲೋಕ ಅದಾಲತ್ ಕಟೆಕಟೆಗೆ ಬಂದು ನಿಂತಾಗ...

ವಿನೂತನ (ವಿಚಿತ್ರ? ) ಒಪ್ಪಂದ ನ್ಯಾಯ : ಬಾಳಸಂಗಾತಿ ಯಾನಿ ಧರ್ಮಪತ್ನಿಯ ಜತೆ 15 ದಿನ ಸಾಂಗತ್ಯ ಅದಾದನಂತರ Live-in ಸಂಗಾತಿ ಜತೆ 15 ದಿನ ಇದ್ದುಬಿಡು ಎಂದು ವ್ಯಕ್ತಿಯೊಬ್ಬರಿಗೆ ಲೋಕ್ ಅದಾಲತ್‌ ನ್ಯಾಯಾಧೀಶೆ Ganga Charan Dube ಉಚಿತ ಸಲಹೆ/ ಸೂಚನೆ ನೀಡುವ ಮೂಲಕ ಇಬ್ಬರೂ ಮಹಿಳೆಯರಿಗೂ ನ್ಯಾಯ ದಕ್ಕಿಸಿಕೊಟ್ಟಿದ್ದಾರೆ.

'ನನ್ನ ಪತಿ ತನ್ನ ಸಂಗಾತಿ ಜತೆಯೇ ಹೆಚ್ಚಿನ ಸಮಯ ಕಳೆಯುತ್ತಾರೆ. ಅಲ್ಲದೇ ಆಕೆ ಜತೆಯೇ 2 ವರ್ಷದಿಂದ ನೆಲೆಸಿದ್ದಾರೆ. ನನಗೆ ನ್ಯಾಯ ದಕ್ಕಿಸಿಕೊಡಿ' ಎಂದು ವಿದ್ಯುತ್ ಇಲಾಖೆಯ ನಿವೃತ್ತ ನೌಕರ ಓಂಕಾರೇಶ್ವರ್ ಎಂಬುವವರ ಪತ್ನಿ ದೂರು ನೀಡಿದ್ದರು.

ಒಂದೇ ಸೂರಿನಡಿ 15 ಆ ಮಗ್ಗಲು 15 ದಿನ ಈ ಮಗ್ಗಲು :
'ಓಂಕಾರೇಶ್ವರ್ ಅವರ ಮನೆಯಲ್ಲಿ ಮೂರು ಕೊಠಡಿಗಳಿದ್ದು, ಮಧ್ಯದ ಕೊಠಡಿಯಲ್ಲಿ ಓಂಕಾರೇಶ್ವರ್ ವಾಸಿಸಬೇಕು. ಉಳಿದ ಎರಡು ಕೊಠಡಿಗಳಲ್ಲಿ ಪತ್ನಿ ಮತ್ತು ಸಂಗಾತಿ ಇರಬೇಕು. ಈತನ ಪ್ರೀತಿ ಇಬ್ಬರಿಗೂ ಸಲ್ಲಬೇಕು. ಹೀಗಾಗಿ ಪತ್ನಿ ಜತೆ 15 ದಿನ ಮತ್ತು ಸಂಗಾತಿ ಜತೆ 15 ದಿನ ವಾಸ ಮಾಡಬೇಕು' ಎಂದು ನ್ಯಾಯಾಧೀಶೆ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ನೀವೇನಂತೀರಿ!?

English summary
Spend 15 days alternately with wife and live-in partner Madya Pradesh Lok Adalat. A man has been ordered by Lok Adalat Judge Ganga Charan Dube to spend 15 days alternately with his wife and woman partner - both staying under the same roof.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X