ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ಸಾವಿರ ರುಪಾಯಿ ನೋಟಿನಲ್ಲಿ ಕಾಗುಣಿತ ತಪ್ಪು?

ನೋಟಿನಲ್ಲಿ ಎಲ್ಲ ಸರಿಯಾಗಿದೆಯಲ್ಲಾ? ಅಂತ ನಿರ್ಣಯಕ್ಕೆ ಬರುವ ಮುನ್ನ, ಜೋಪಾನವಾಗಿ ಜೇಬಿನಲ್ಲಿ ತೆಗೆದಿಟ್ಟುಕೊಳ್ಳುವ ಮುನ್ನ ದೇವನಾಗರಿ ಲಿಪಿಯಲ್ಲಿ ಎರಡು ಬಾರಿ ಮುದ್ರಿತವಾಗಿರುವ ಅಕ್ಷರಗಳತ್ತ ನೋಟ ಹರಿಸಿ. ಹೌದು, ಎರಡು ಬಾರಿ ಮುದ್ರಿತವಾಗಿದೆ.

By Prasad
|
Google Oneindia Kannada News

ಬೆಂಗಳೂರು, ನವೆಂಬರ್ 12 : ಹೊಚ್ಚಹೊಸ ಗರಿಗರಿ ಎರಡು ಸಾವಿರ ರುಪಾಯಿ ನೋಟು ಕೈಯಲ್ಲಿ ಬಂತಾ? ಅತ್ಯಮೂಲ್ಯ ವಸ್ತುವಂತಾಗಿರುವ ಈ ರುಪಾಯಿಯನ್ನು ಪಡೆಯಲು ಎಷ್ಟು ಗಂಟೆ ಕ್ಯೂನಲ್ಲಿ ನಿಂತಿದ್ರಿ? ನೀವೇ ನಿಂತಿದ್ರಾ ಅಥವಾ ಬೇರೆಯವರನ್ನು ನಿಲ್ಲಿಸಿದ್ರಾ?

ಅದೇನೇ ಇರಲಿ ಬಿಡಿ. ಕೈಗೆ ಸಿಕ್ಕಿರುವ 2 ಸಾವಿರ ರುಪಾಯಿ ನೋಟಿನಲ್ಲಿ ಏನೇನಿದೆ, ವಿಶೇಷಗಳು ಏನೇನಿವೆ, ಕನ್ನಡ ಚೆನ್ನಾಗಿ ಅಚ್ಚಾಗಿದೆಯಾ, ಗಾಂಧಿ ತಾತಾ ನಗುತ್ತಿದ್ದಾರಾ, ಇತ್ಯಾದಿ ನೋಡಿದ್ರಾ? ಹಂಗೇ ಸ್ವಲ್ಪ ಕನ್ನಡವೂ ಸೇರಿದಂತೆ ಹದಿನೈದು ಭಾಷೆಗಳಲ್ಲಿ ಎರಡು ಸಾವಿರ ರುಪಾಯಿಗಳು ಅಂತ ಬರೆದಿರುವತ್ತ ಗಮನ ಕೇಂದ್ರೀಕರಿಸಿ.

ನೋಟಿನಲ್ಲಿ ಎಲ್ಲ ಸರಿಯಾಗಿದೆಯಲ್ಲಾ? ಅಂತ ನಿರ್ಣಯಕ್ಕೆ ಬರುವ ಮುನ್ನ, ಜೋಪಾನವಾಗಿ ಜೇಬಿನಲ್ಲಿ ತೆಗೆದಿಟ್ಟುಕೊಳ್ಳುವ ಮುನ್ನ ದೇವನಾಗರಿ ಲಿಪಿಯಲ್ಲಿ ಎರಡು ಬಾರಿ ಮುದ್ರಿತವಾಗಿರುವ ಅಕ್ಷರಗಳತ್ತ ನೋಟ ಹರಿಸಿ. ಹೌದು, ಎರಡು ಬಾರಿ ಮುದ್ರಿತವಾಗಿದೆ. ಎರಡರಲ್ಲೊಂದು ತಪ್ಪಿಸಬೇಕು, ಅಲ್ವಾ?

ಈ ಹೊಸ ನೋಟಿನಲ್ಲಿ ಅಕ್ಷರದೋಷವಿದೆ

ಈ ಹೊಸ ನೋಟಿನಲ್ಲಿ ಅಕ್ಷರದೋಷವಿದೆ

ಈ ಹೊಸ ನೋಟಿನಲ್ಲಿ ಅಕ್ಷರದೋಷವಿದೆ, ಕಾಗುಣಿತ ತಪ್ಪಿದೆ ಅಂತ 2000 ರುಪಾಯಿಗಳ ಮಾಲಿಕರು ಟ್ವಿಟ್ಟರಿನಲ್ಲಿ ದೇಶದ ಮುಖಂಡ ನರೇಂದ್ರ ಮೋದಿ ಅವರ ಗಮನಕ್ಕೆ ತರಲು ಪ್ರಯತ್ನಿಸಿದ್ದಾರೆ. ಹೌದು ಖಂಡಿತವಾಗಲೂ ತಪ್ಪಿದೆ ಅಂತ ಸತ್ಯಾಗ್ರಹ ಎಂಬ ವೆಬ್ ಸೈಟ್ ಕೂಡ ವರದಿ ಮಾಡಿತ್ತು.

ದೋನ್ ಹಜಾರ್ ರುಪಯಾ

ದೋನ್ ಹಜಾರ್ ರುಪಯಾ

ಆದರೆ, ಸರಿಯಾಗಿ ಗಮನಿಸಿ. ಅದು ತಪ್ಪಲ್ಲವೇ ಅಲ್ಲ. ಒಂದೆಡೆ 'ದೋನ್ ಹಜಾರ್ ರುಪಯಾ' ಅಂತ ಬರೆದಿದ್ದರೆ, ಮತ್ತೊಂದೆಡೆ 'ದೋನ್ ಹಜಾರ್ ರುಪಯೆ' ಅಂತ ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಇದೇ ಜನರನ್ನು ಕನ್ಫ್ಯೂಸ್ ಮಾಡಿದ್ದು.

ಬರೆದಿರುವುದು ಕೊಂಕಣಿ ಭಾಷೆಯಲ್ಲಿ

ಬರೆದಿರುವುದು ಕೊಂಕಣಿ ಭಾಷೆಯಲ್ಲಿ

ದೋನ್ ಹಜಾರ್ ರುಪಯೆ ಅಂತ ಬರೆದಿದ್ದು ಮರಾಠಿಯಲ್ಲಾದರೆ, ದೋನ್ ಹಜಾರ್ ರುಪಯಾ ಅಂತ ಬರೆದಿರುವುದು, ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ, ಗೋವಾದಲ್ಲಿ ಹೆಚ್ಚಾಗಿ ಮಾತನಾಡುವ ಕೊಂಕಣಿ ಭಾಷೆಯಲ್ಲಿ. ಕೊಂಕಣಿಗೂ ಮರಾಠಿಗೂ ಸಾಮ್ಯತೆ ಇರುವುದರಿಂದ ಈ ಗೊಂದಲ.

ಕೊಂಕಣಿ ಭಾಷೆಗೆ ಪ್ರತ್ಯೇಕ ಲಿಪಿ ಇಲ್ಲ

ಕೊಂಕಣಿ ಭಾಷೆಗೆ ಪ್ರತ್ಯೇಕ ಲಿಪಿ ಇಲ್ಲ

ಕೊಂಕಣಿ ಭಾಷೆಗೆ ಪ್ರತ್ಯೇಕ ಲಿಪಿ ಇಲ್ಲವಾದ್ದರಿಂದ, ಆ ಭಾಷೆಗೆ ಹತ್ತಿರವಾಗಿರುವ ಮರಾಠಿ ಲಿಪಿಯಲ್ಲಿಯೇ ಬರೆಯಲಾಗಿದೆ. ಮರಾಠಿ ಲಿಪಿಯೂ ದೇವನಾಗರಿ ಲಿಪಿಯೆ. ಆದರೆ, ಕರ್ನಾಟಕದಲ್ಲಿ ಮಾತ್ರ ಕೊಂಕಣಿಯನ್ನು ಕನ್ನಡದಲ್ಲಿಯೇ ಬರೆಯುತ್ತಾರೆ.

English summary
The new currency notes are sure giving many people sleepless nights. In the midst of all this panic a rumour did the rounds that one website reported that there was a mistake in which 'do hazaae rupaiye' was written. But, it is not a mistake. One is written in Konkani and another one in Marathi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X