ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋ 'ಜಿಎಸ್‌ಎಲ್‌ವಿ’ ಉಡಾವಣೆಯ ಅತ್ಯಾಕರ್ಷಕ ವಿಡಿಯೋ, ಚಿತ್ರಗಳು

By ವಿಕಾಸ್ ನಂಜಪ್ಪ
|
Google Oneindia Kannada News

ಶ್ರೀಹರಿಕೋಟಾ, ಜೂನ್ 6: ಸೋಮವಾರ ಉಡಾವಣೆಯಾದ 'ಜಿಎಸ್‌ಎಲ್‌ವಿ ಮಾರ್ಕ್-3' ರಾಕೆಟಿನ ಅಪರೂಪದ ವಿಡಿಯೋವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಿಡುಗಡೆ ಮಾಡಿದೆ. ವಿಜ್ಞಾನ ವಿಷಯ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಪಾಲಿಗೆ ಹಾಗೂ ಜನರ ಪಾಲಿಗೆ ಈ ವಿಡಿಯೋ ವಿಶೇಷವಾಗಿದೆ.

ರಾಕೆಟ್ ಉಡಾವಣೆ ಹೇಗಾಗುತ್ತದೆ? ರಾಕೆಟ್ ನಿಂದ ಉಪಗ್ರಹ ಹೇಗೆ ಬೇರೆಯಾಗುತ್ತದೆ? ಉಪಗ್ರಹ ಆಕಾಶದಲ್ಲಿ ಹೋಗಿ ಹೇಗೆ ಬಿಡಿಸಿಕೊಳ್ಳುತ್ತದೆ ಎಂಬುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.[ಇದೇ ಮಾಸಾಂತ್ಯಕ್ಕೆ ಇಸ್ರೋದಿಂದ ಹೊಸ ಉಪಗ್ರಹ ಉಡಾವಣೆ]

ಆನ್ ಬೋರ್ಡ್ ಕ್ಯಾಮೆರಾದಲ್ಲಿ 'ಜಿಎಸ್‌ಎಲ್‌ವಿ ಮಾರ್ಕ್-3' ಉಡಾವಣೆ, ರಾಕೆಟ್ ನಿಂದ 'ಜಿಸ್ಯಾಟ್-19' ಉಪಗ್ರಹ ಕಳಚಿಕೊಳ್ಳವುದು ಮತ್ತು ಆಕಾಶದಲ್ಲಿ ಉಪಗ್ರಹ ಬಿಡಿಸಿಕೊಳ್ಳುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ರಾಕೆಟ್ ನಿಂದ ಕಳಚಿಕೊಳ್ಳುವ ಉಪಗ್ರಹ

ರಾಕೆಟ್ ನಿಂದ ಕಳಚಿಕೊಳ್ಳುವ ಉಪಗ್ರಹ

ರಾಕೆಟ್ ಉಡಾವಣೆಯಾಗಿ 16 ನಿಮಿಷಗಳ ನಂತರ ಉಪಗ್ರಹ ರಾಕೆಟ್ ನಿಂದ ಕಳಚಿಕೊಳ್ಳುವ ದೃಶ್ಯ ಆನ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. 'ಜಿಸ್ಟಾಟ್ 19' ಉಪಗ್ರಹವನ್ನು ರಾಕೆಟ್ ಭೂಸ್ಥಿರ ಕಕ್ಷೆಗೆ ಸೇರಿಸಿತ್ತು. ಅಲ್ಲಿ ಉಪಗ್ರಹ ಬಿಸಿಕೊಳ್ಳುವ ದೃಶ್ಯವೂ ವಿಡಿಯೋದಲ್ಲಿದೆ.

ಬಾಹುಬಲಿ ಸಂಬಂಧ

ಬಾಹುಬಲಿ ಸಂಬಂಧ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ದೈತ್ಯ 'ಜಿಎಸ್‌ಎಲ್‌ವಿ ಮಾರ್ಕ್-3' ರಾಕೆಟನ್ನು ಯಶಸ್ವೀ ಪರೀಕ್ಷೆಗೊಳಪಡಿಸಿದೆ. ಬೃಹತ್ ರಾಕೆಟ್ ಉಡಾವಣೆ ಯಶಸ್ವಿಯಾಗುತ್ತಿದ್ದಂತೆ ಈ ರಾಕೆಟ್ ನ್ನು ವಿಜ್ಞಾನಿಗಳು ಇತ್ತೀಚೆಗೆ ಜನಪ್ರಿಯಗೊಂಡ ಸಿನಿಮಾ ಬಾಹುಬಲಿ ಜತೆ ಹೋಲಿಸಿದ್ದಾರೆ. ಬೃಹತ್ ರಾಕೆಟ್ ಆದ್ದರಿಂದ ಈ ಹೋಲಿಕೆ ಮಾಡಲಾಗಿದೆ.[ಇಸ್ರೋದ 'ಜಿಎಸ್‌ಎಲ್‌ವಿ ಮಾರ್ಕ್-3'ಗೂ ಬಾಹುಬಲಿಗೂ ಇದೇನಿದು ಸಂಬಂಧ!]

ಹೆಮ್ಮೆಯ ಕ್ಷಣ

ಹೆಮ್ಮೆಯ ಕ್ಷಣ

ಉಡಾವಣೆ ಯಶಸ್ವಿಯಾಗುತ್ತಿದ್ದಂತೆ ಮಾತನಾಡಿದ ಸ್ಪೇಸ್ ಅಪ್ಲಿಕೇಶನ್ ಸೆಂಟರ್ ನಿರ್ದೇಶಕ ತಪನ್ ಮಿಶ್ರಾ "ಇಸ್ರೋ ಬಾಹುಬಲಿಗೆ ಜನ್ಮ ನೀಡಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ" ಎಂದು ಹೇಳಿದ್ದಾರೆ.

ಗೇಮ್ ಚೇಂಜರ್ ರಾಕೆಟ್

ಗೇಮ್ ಚೇಂಜರ್ ರಾಕೆಟ್

ಇನ್ನು ಇದೊಂದು 'ಗೇಮ್ ಚೇಂಜರ್ ರಾಕೆಟ್' ಎಂದು ಇಸ್ರೋದ ಪ್ರೊಪಲ್ಶನ್ ಕಾಂಪ್ಲೆಕ್ಸ್ ನಿರ್ದೇಶಕ ಪಿವಿ ವೆಂಕಿಟ ಕೃಷ್ಣನ್ ಹೇಳಿದ್ದಾರೆ.[ಇಸ್ರೋದಿಂದ 'ಜಿಎಸ್‌ಎಲ್‌ವಿ ಮಾರ್ಕ್-3' ಯಶಸ್ವೀ ಉಡಾವಣೆ]

ವಿಧೇಯ ವಿದ್ಯಾರ್ಥಿ

ವಿಧೇಯ ವಿದ್ಯಾರ್ಥಿ

ಇದೇ ವೇಳೆ ಯೋಜನೆಯಲ್ಲಿ ಪಾಲ್ಗೊಂಡಿದ್ದ ಇನ್ನೊಬ್ಬರು ಕ್ರಯೋಜನಿಕ್ ವಿಜ್ಞಾನಿ ಉಡಾವಣಾ ವಾಹಕವನ್ನು 'ಸ್ಮಾರ್ಟ್ ಮತ್ತು ವಿಧೇಯ ವಿದ್ಯಾರ್ಥಿ' ಎಂದು ಬಣ್ಣಿಸಿದ್ದಾರೆ. ಇಸ್ರೋದ ಕ್ರಯೋಜನಿಕ್ ಇಂಜಿನ್ ಕೈಕೊಟ್ಟ ಉದಾಹರಣೆಯೇ ಇಲ್ಲ. ಇದೇ ಎಂಜಿನ್ ಮೂಲಕ ಇಸ್ರೋ ಸತತ ಯಶಸ್ವೀ ಉಡಾವಣೆಗಳನ್ನು ನಡೆಸಿದೆ. ಹೀಗಾಗಿ ಈ ವಿಧೇಯ ವಿದ್ಯಾರ್ಥಿ ಹೆಸರಿಟ್ಟಿದ್ದಾರೆ.

ದೇಸಿ ಮಂತ್ರ

ದೇಸಿ ಮಂತ್ರ

ರಾಕೆಟಿಗೆ ಹೆಚ್ಚಾಗಿ ಸ್ವದೇಶಿ ಉತ್ಪನ್ನಗಳನ್ನೇ ಬಳಸಲಾಗಿದೆ. ಕೆಲವನ್ನಷ್ಟೆ ವಿದೇಶದಿಂದ ತರಿಸಿಕೊಳ್ಳಲಾಗಿದೆ. ಸ್ವದೇಶಿ ತಂತ್ರಜ್ಞಾನಗಳನ್ನೇ ಬಳಸಿಕೊಂಡು, ಹಾಲಿ ಉಡಾವಣಾ ವಾಹಕಗಳಿಗಿಂತ ಎರಡು ಪಟ್ಟು ತೂಕದ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯದ ರಾಕೆಟನ್ನು ವಿಜ್ಞಾನಿಗಳು ತಯಾರಿಸಿ ಯಶಸ್ವಿಯಾಗಿ ಉಡಾವಣೆಯೂ ಮಾಡಿದ್ದಾರೆ.[ಇಸ್ರೊ ಅಂಗ ಸಂಸ್ಥೆ ಎನ್‍ ಆರ್‍ ಎಸ್‍ ಸಿಯಲ್ಲಿ ವಿವಿಧ ಉದ್ಯೋಗಾವಕಾಶಗಳು]

ಅತ್ಯುನ್ನತ ಪ್ರದರ್ಶನ

ಅತ್ಯುನ್ನತ ಪ್ರದರ್ಶನ

ಸೋಮವಾರದ ಉಡಾವಣೆಯೊಂದಿಗೆ ಅತ್ಯುನ್ನತ ದರ್ಜೆಯ ಸಂಕೀರ್ಣ ಕ್ರಯೋಜನಿಕ್ ಎಂಜಿನ್ ತಂತ್ರಜ್ಞಾನದಲ್ಲಿ ಭಾರತ ಪರಿಣತಿ ಸಾಧಿಸಿದೆ. ಈ ಮೂಲಕ ಈ ರೀತಿಯ ತಂತ್ರಜ್ಞಾನ ಹೊಂದಿರುವ ವಿಶ್ವದ ಕೆಲವೇ ದೇಶಗಳ ಪಟ್ಟಿಗೆ ಭಾರತವೂ ಸೇರ್ಪಡೆಯಾಗಿದೆ.

English summary
The Indian Space Research Organisation has released footage from the cameras onboard the GSLV MK III, which placed the GSAT-19 communication satellite in orbit on June 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X