ಹೊಸ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಲ್ಲಿ ಐಶ್ವರ್ಯಾ ರೈ

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,01: ನಮ್ಮ ದೇಶದಲ್ಲಿ ಸುದ್ದಿಗಳದ್ದೇ ಗದ್ದಲ. ಆತ್ಮಹತ್ಯೆ, ಅಪಘಾತ, ಹೊಡೆದಾಟ, ಉಗ್ರರ ಅಟ್ಟಹಾಸ, ಜವಾಹರಲಾಲ್ ವಿಶ್ವವಿದ್ಯಾಲಯದ ದೇಶ ವಿರೋಧಿ ಘೋಷಣೆ ಗಲಾಟೆ, ಬಿರು ಬೇಸಿಗೆಗೆ ಒಗ್ಗಿಕೊಳ್ಳಲಾಗದ ಜನರ ಪರದಾಟ, ಬರಿದಾದ ಕಡಲು...ಹೀಗೆ ನೂರಾರು, ಸಾವಿರಾರು ಸುದ್ದಿಗಳ ಬಾಣ ನಮ್ಮ ದೇಶದ ಬತ್ತಳಿಕೆಯಲ್ಲಿ ಇವೆ.

ದೇಶೀಯ-ವಿದೇಶೀ ಸುದ್ದಿಗಳಲ್ಲಿ ಕೆಲವನ್ನು ಮೆಲುಕು ಹಾಕುವುದಾದರೆ, ದೇಶ ವಿರೋಧಿ ಘೋಷಣೆ ಕೃತ್ಯದ ಮೂಲಕ ಜನರ ಚಿತ್ತವನ್ನು ತನ್ನತ್ತ ಸೆಳೆದಿರುವ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ದೇಶ ವಿರೋಧಿ ಘೋಷಣೆ ಕೂಗಿಲ್ಲ ಎಂದು ದೆಹಲಿ ಪೊಲೀಸರು ಹೈಕೋರ್ಟಿಗೆ ತಿಳಿಸಿದ್ದಾರೆ. ಆದರೆ ಜಾಮೀನು ಅರ್ಜಿಗೆ ವಿರೋಧ ವ್ಯಕ್ತ ಪಡಿಸಿದ್ದಾರೆ.[ಬಜೆಟ್ 2016 : ಉದ್ಯೋಗ ಕ್ಷೇತ್ರಕ್ಕೆ ಸಿಕ್ಕಿದ್ದೇನು?]

ಇನ್ನೊಂದೆಡೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ ಕೇಂದ್ರ ಬಜೆಟ್ ರೈತರು, ಬಡವರು, ಮಹಿಳೆಯರ ಮೊಗದಲ್ಲಿ ಮಂದಹಾಸ, ಸಾಕಷ್ಟು ಭರವಸೆ, ಆತ್ಮವಿಶ್ವಾಸ ಹುಟ್ಟಿಸಿದೆ. ಬಜೆಟ್ ಅಂಕಿ ಅಂಶ ಶ್ರೀಮಂತರಿಗೆ ಕಹಿ ಉಣಿಸಿದರೆ, ಮಿಕ್ಕ ವರ್ಗಗಳಿಗೆ ಸಿಹಿ ತಿನ್ನಿಸಿದೆ. ಮಥುರಾದಲ್ಲಿ ಜೈನ ಧರ್ಮಿಯರು ಮಹಾಮಜ್ಜನದ ಸಂಭ್ರಮದಲ್ಲಿ ಮಿಂದೆದಿದ್ದಾರೆ. ಇನ್ನಷ್ಟು ಸುದ್ದಿಗಳಿಗಾಗಿ ಈ ಕೆಳಗಿನ ಸ್ಲೈಡ್ ಓದಿ.

ರೈತರ ಮೊಗದಲ್ಲಿ ಮಂದಹಾಸ ತಂದ ಬಜೆಟ್

ರೈತರ ಮೊಗದಲ್ಲಿ ಮಂದಹಾಸ ತಂದ ಬಜೆಟ್

ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಬಜೆಟ್ ಅಂಕಿ ಅಂಶಗಳು ರೈತರಲ್ಲಿ ಸಾಕಷ್ಟು ಭರವಸೆ ಮೂಡಿಸಿದೆ. ಬರದಿಂದ ಕಂಗೆಟ್ಟ ರೈತರಿಗೆ ಈ ಬಜೆಟ್ ಆತ್ಮವಿಶ್ವಾಸ ತುಂಬಿದ್ದು, ಕತ್ತಲ ಹಾದಿಯಲ್ಲಿ ಸಣ್ಣ ದೀಪದ ಬೆಳಕು ಮಿರಿ ಮಿರಿ ಮಿನುಗಿ ದಾರಿ ತೋರುವಂತಾಗಿದೆ. 2020ರವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಪ್ರಕಟವಾಗುತ್ತಿದ್ದಂತೆ ಕೃಷಿ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಸಿಂಹಪಾಲು ದೊರೆತಿದೆ ಎಂಬ ಸಂತಸದಲ್ಲಿ ತಾನು ಬೆಳೆದ ಆರೈಕೆಗೆ ನಿಂತ ಬೆಂಗಳೂರು ರೈತ ಕಾಣಿಸಿದ್ದು ಹೀಗೆ.[ಚಿಂತೆ ಬಿಡಿ, ಪಿಪಿಎಫ್ ಮೇಲೆ ಯಾವುದೇ ತೆರಿಗೆ ಹಾಕುತ್ತಿಲ್ಲ]

ಹೊಸ ಸಿನಿಮಾದ ಮೊದಲ ಪೋಸ್ಟರ್

ಹೊಸ ಸಿನಿಮಾದ ಮೊದಲ ಪೋಸ್ಟರ್

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಹೊಸ ಸಿನಿಮಾ ಸರ್ಬ್ ಜಿತ್ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದರು.

ನಮ್ಮ ಹುಟ್ಟುಹಬ್ಬ ನಾಲ್ಕು ವರ್ಷಕೊಮ್ಮೆ

ನಮ್ಮ ಹುಟ್ಟುಹಬ್ಬ ನಾಲ್ಕು ವರ್ಷಕೊಮ್ಮೆ

ಫೆಬ್ರವರಿ 29 ಅಂದರೆ ಗರ್ಭಿಣಿಯರಿಗೆ ಕೊಂಚ ಬೇಸರ. ಏಕೆಂದರೆ ಅಧಿಕ ಮಾಸವಾದ ಫೆಬ್ರವರಿ 29ರಂದು ಮಕ್ಕಳು ಜನಿಸಿದರೆ ನಾಲ್ಕು ವರ್ಷಕೊಮ್ಮೆ ಹುಟ್ಟು ಹಬ್ಬ ಆಚರಿಸಬೇಕಲ್ವಾ. ಇದರ ನಡುವೆಯೇ ನಾವು ನಾಲ್ಕು ವರ್ಷಕೊಮ್ಮೆಯೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತೇವೆ ಎಂದು ನಿರ್ಧರಿಸಿದ 4 ಪುಟಾಣಿಗಳು ಹಿಮಾಚಲ ಪ್ರದೇಶದಲ್ಲಿನ ಶಿಮ್ಲಾದಲ್ಲಿ ಜನ್ಮ ತಾಳಿವೆ. ನಮ್ಮ ಹುಟ್ಟುಹಬ್ಬ ನಾಲ್ಕು ವರ್ಷಕೊಮ್ಮೆ ಎಂದು ನಗೆ ಬೀರುತ್ತಿವೆ.

ಈ ಬಾರಿ ನಮ್ಮ ಬದುಕು ಹಸನು

ಈ ಬಾರಿ ನಮ್ಮ ಬದುಕು ಹಸನು

ಅರುಣ್ ಜೇಟ್ಲಿ ಅವರು ಮಂಡಿಸಿದ ಬಜೆಟ್ ಸಾಮಾನ್ಯ ವರ್ಗದವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿವೆ. ಅಂದರೆ ಗ್ರಾಮೀಣ ಉದ್ಯೋಗ ಖಾತರಿ, ಊರಿನ ಮೂಲೆ ಮೂಲೆಗೂ ವಿದ್ಯುತ್ ಸಂಪರ್ಕ, ರಸ್ತೆ ಅಭಿವೃದ್ಧಿಗೆ ಆದ್ಯತೆ ಹೀಗೆ ಬಡವರ ಪರವಾದ ಬಜೆಟ್ ಅಂಕಿ ಅಂಶವನ್ನು ರೇಡಿಯೋ ಮೂಲಕ ಕೇಳಿಸಿಕೊಳ್ಳುತ್ತಿರುವ ತರಕಾರಿ ಮಾರಾಟಗಾರರು ಈ ಬಾರಿ ನಮ್ಮ ಬದುಕು ಹಸನಾಗಲಿವೆ ಎಂದು ನಗೆ ಬೀರಿದ್ದು ಹೀಗೆ.[ಕೇಂದ್ರ ಬಜೆಟ್ ಮಂಡನೆ ವಿವರ, ಮುಖ್ಯಾಂಶ]

ಮಹಾಮಜ್ಜನದ ಸಂತಸದಲ್ಲಿ ಜೈನ ಧರ್ಮೀಯರು

ಮಹಾಮಜ್ಜನದ ಸಂತಸದಲ್ಲಿ ಜೈನ ಧರ್ಮೀಯರು

ಜೈನ ಧರ್ಮೀಯರ ದೇವರಾದ ಜಂಬು ಸ್ವಾಮಿಯ 1008 ವರ್ಷದ ಸಂಭ್ರಮದಲ್ಲಿ ಜೈನ ಧರ್ಮದ ಸಾಕಷ್ಟು ಶ್ರಾವಕ ಶ್ರಾವಕಿಯರು, ಮುನಿಗಳು ಪಾಲ್ಗೊಂಡಿದ್ದು, ಮಥುರಾದ ಚೌರಿ ಬಸದಿಯಲ್ಲಿ ಜಂಬು ಸ್ವಾಮಿಯ ಮಹಾಮಜ್ಜನ ನೆರವೇರಿತು.

ಕೇಂದ್ರ ಬಜೆಟ್ ವಿರೋಧಿಸಿದ ಕಾಂಗ್ರೆಸ್

ಕೇಂದ್ರ ಬಜೆಟ್ ವಿರೋಧಿಸಿದ ಕಾಂಗ್ರೆಸ್

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸೋಮವಾರ ಮಂಡಿಸಿದ ಕೇಂದ್ರ ಬಜೆಟ್ ವಿರೋಧಿಸಿದ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆಯಲ್ಲಿ ನಿಂತು ಪ್ರತಿಭಟನೆ ಮಾಡಿದರು.["ಜೇಬಿಗೆ ಬೆಂಕಿ ಇಟ್ರು.. ಪ್ರೀತಿಗೂ ಕೊಳ್ಳಿ ಇಟ್ರು"..!]

ಕೇಜ್ರಿವಾಲ್ ಕಾರನ್ನು ಹಾಳು ಮಾಡಿದ ದುಷ್ಕರ್ಮಿಗಳು

ಕೇಜ್ರಿವಾಲ್ ಕಾರನ್ನು ಹಾಳು ಮಾಡಿದ ದುಷ್ಕರ್ಮಿಗಳು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಾರಿಗೆ ಕಲ್ಲು ಹೊಡೆದ ದುಷ್ಕರ್ಮಿಗಳು ಕಾರಿನ ಮುಂದಿನ ಕಿಟಕಿಯನ್ನು ಹಾಳು ಮಾಡಿದ್ದಾರೆ. ಈ ಘಟನೆ ಪಂಜಾಬಿನ ಲುದಿಯಾನದಲ್ಲಿ ನಡೆದಿದೆ.

ಚರ್ಚೆಯಲ್ಲಿ ಸಿಬಿಎಸ್ ಇ ವಿದ್ಯಾರ್ಥಿಗಳು

ಚರ್ಚೆಯಲ್ಲಿ ಸಿಬಿಎಸ್ ಇ ವಿದ್ಯಾರ್ಥಿಗಳು

ನವದೆಹಲಿಯಲ್ಲಿ ಸಿಬಿಎಸ್ ಇನಲ್ಲಿ ಓದುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿದ್ದು, ಪರೀಕ್ಷೆ ಮುಗಿದ ಬಳಿಕ ಗಾಢವಾದ ಚರ್ಚೆಯಲ್ಲಿ ತೊಡಗಿದ್ದು ಹೀಗೆ.

ಚಳಿಗಾಲದ ರಜೆ ಪೂರೈಸಿದ ಶಾಲಾ ಮಕ್ಕಳು

ಚಳಿಗಾಲದ ರಜೆ ಪೂರೈಸಿದ ಶಾಲಾ ಮಕ್ಕಳು

ಮೂರು ತಿಂಗಳ ಚಳಿಗಾಲದ ರಜೆಯನ್ನು ಮುಗಿಸಿಕೊಂಡ ಶಾಲಾ ಮಕ್ಕಳು ಸಂತಸದಿಂದ ಶಾಲೆಯತ್ತ ಹೆಜ್ಜೆ ಹಾಕಿದರು. ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಚಳಿಗಾಲ ಮುಗಿಯುವವರೆಗೂ ಶಾಲೆ ಕಾಲೇಜುಗಳಿಗೆ ರಜೆ ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Special News digest of India on March 01st. Agriculture has received lion's share in the Union financial budget 2016 that was presented by the finance minister Arun Jaitley in Delhi. Newborn babies on 29th February at the children's ward of a hospital in Shimla, Jain Devotees offer 1008 vessels of water to Lord Jambu Swami during Mahamastakabhisheka festival at Jain Chaursi temple in Mathura on Monday
Please Wait while comments are loading...