ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ ತಿಂಗಳಿನಲ್ಲಿ ಹೇಗಿರಲಿದೆ ಮುಂಗಾರು? ಎಷ್ಟು ಮಳೆಯಾಗಲಿದೆ?

|
Google Oneindia Kannada News

ನವದೆಹಲಿ, ಜುಲೈ 02: ಕಳೆದ ಒಂದು ವಾರದಿಂದ ದೇಶದಾದ್ಯಂತ ಮುಂಗಾರು ಕ್ಷೀಣಿಸಿದ್ದು, ಜುಲೈ ಮೊದಲ ವಾರದ ನಂತರವಷ್ಟೆ ಮುಂಗಾರು ಮತ್ತೆ ಚುರುಕಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಜುಲೈ ತಿಂಗಳ ಮೊದಲ ವಾರ ಅಷ್ಟು ಉತ್ತಮವಾಗಿ ಮಳೆಯಾಗುವುದಿಲ್ಲ. ಎರಡನೇ ವಾರದಲ್ಲಿ ನೈಋತ್ಯ ಮುಂಗಾರು ಚುರುಕು ಪಡೆಯಲಿದೆ. ಆಗ ದೇಶಾದ್ಯಂತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ತಿಳಿಸಿದ್ದಾರೆ. ಮುಂದೆ ಓದಿ...

Southwest Monsoon In India Likely To Be Normal In July Predicted IMD

ಜುಲೈನಲ್ಲಿ ಹೇಗಿರಲಿದೆ ಮುಂಗಾರು?

ಜುಲೈನಲ್ಲಿ ಹೇಗಿರಲಿದೆ ಮುಂಗಾರು?

ಜುಲೈ ತಿಂಗಳಿನಲ್ಲಿ ಮುಂಗಾರು ಮಳೆ ಸಹಜವಾಗಿರಲಿದೆ. ಜುಲೈನಲ್ಲಿ 94 ರಿಂದ 106% (ದೀರ್ಘಾವಧಿ ಸರಾಸರಿ) ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಅಂದಾಜಿಸಿದೆ. ವಾಯವ್ಯ ಭಾರತದ ಅನೇಕ ಪ್ರದೇಶಗಳಲ್ಲಿ ಮತ್ತು ದಕ್ಷಿಣ ಭಾಗ, ಮಧ್ಯ, ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.

ಜೂನ್ ತಿಂಗಳಿನಲ್ಲಿ ಶೇ10ರಷ್ಟು ಹೆಚ್ಚು ಮಳೆ ದಾಖಲು

ಜೂನ್ ತಿಂಗಳಿನಲ್ಲಿ ಶೇ10ರಷ್ಟು ಹೆಚ್ಚು ಮಳೆ ದಾಖಲು

ಜೂನ್ ತಿಂಗಳಿನಲ್ಲಿ ಭಾರತದಲ್ಲಿ ಸಾಮಾನ್ಯಕ್ಕಿಂತ ಶೇಕಡಾ 10ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ. ಜುಲೈ ಮಧ್ಯದಲ್ಲಿ ನೈಋತ್ಯ ಮುಂಗಾರು ಬರ್ಮರ್, ಬಿಲ್ವಾರಾ, ಧೋಲ್ಪುರ, ಅಲಿಗಾರ್, ಮೀರಟ್, ಅಂಬಾಲಾ, ಅಮೃತಸರ ಮೂಲಕ ಹಾದುಹೋಗಲಿದೆ ಎಂದು ತಿಳಿಸಿದೆ. ಜುಲೈ 10ರ ನಂತರ ಮಳೆ ಹೆಚ್ಚಾಗಲಿದೆ. ದೇಶಾದ ಎಲ್ಲಾ ಭಾಗದಲ್ಲಿಯೂ ಮುಂಗಾರು ಅನುಭವವಾಗಲಿದೆ ಎಂದು ತಿಳಿಸಿದೆ.

ಜೂನ್ 19ರ ನಂತರ ಕ್ಷೀಣಿಸಿದ್ದ ಮುಂಗಾರು

ಜೂನ್ 19ರ ನಂತರ ಕ್ಷೀಣಿಸಿದ್ದ ಮುಂಗಾರು

ಜೂನ್ 3ರಂದು ಕೇರಳ ಪ್ರವೇಶಿಸುವ ಮೂಲಕ ದೇಶದಲ್ಲಿ ಮುಂಗಾರು ಆರಂಭವಾಯಿತು. ಜೂನ್ 19ರ ನಂತರ ಮುಂಗಾರು ಕ್ಷೀಣಿಸಿದ್ದು, ಜೂನ್ 3-19ರವರೆಗೆ ಮುಂಗಾರು ಮಳೆ ದಾಖಲಾಗಿದೆ. ಒಟ್ಟಾರೆ ಜೂನ್ ತಿಂಗಳಿನಲ್ಲಿ ಸಾಮಾನ್ಯ ಅವಧಿಗಿಂತ ಶೇ 10ರಷ್ಟು ಹೆಚ್ಚು ಮಳೆ ದಾಖಲಾಗಿದೆ ಹವಾಮಾನ ಇಲಾಖೆ ತಿಳಿಸಿದೆ.
ರಾಜಸ್ಥಾನ, ದೆಹಲಿ, ಹರಿಯಾಣ ಮತ್ತು ಪಂಜಾಬ್‌ನ ಉಳಿದ ಭಾಗಗಳಲ್ಲಿ ನೈಋತ್ಯ ಮುಂಗಾರು ಜುಲೈ 7ರವರೆಗೂ ಚುರುಕು ಪಡೆಯುವ ಸಾಧ್ಯತೆಯಿಲ್ಲ ಎಂದು ತಿಳಿಸಿದೆ.

ಜುಲೈವರೆಗೂ ಮುಂಗಾರು ಚುರುಕಾಗುವುದಿಲ್ಲ ಎಂದ ಹವಾಮಾನ ಇಲಾಖೆ
ಹವಾಮಾನ ಇಲಾಖೆ ಮುಂಗಾರು ಮುನ್ಸೂಚನೆ

ಹವಾಮಾನ ಇಲಾಖೆ ಮುಂಗಾರು ಮುನ್ಸೂಚನೆ

ನೈಋತ್ಯ ಮುಂಗಾರು ದಕ್ಷಿಣ ಭಾರತ ಹಾಗೂ ಉತ್ತರ ಭಾರತದಲ್ಲಿ ಸಾಮಾನ್ಯ ರೀತಿಯಲ್ಲಿ ಇರಲಿದ್ದು ಕೇಂದ್ರ ಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ. ಆದರೆ ಭಾರತ ಪೂರ್ವ ಭಾಗದಲ್ಲಿ ಮತ್ತು ಈಶಾನ್ಯ ಭಾರತದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಮಟ್ಟದಲ್ಲಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ನೈಋತ್ಯ ಮುಂಗಾರಿನ ಕಾಲಾವಧಿಯಲ್ಲಿ(ಜೂನ್‌ನಿಂದ-ಸೆಪ್ಟೆಂಬರ್) ದೇಶಾದ್ಯಂತ ಮಳೆಯ ಪ್ರಮಾಣ ಸಾಮಾನ್ಯ ಪ್ರಮಾಣದಲ್ಲಿ ಇರಲಿದೆ. 96-104 ಶೇಕಡಾ ಪ್ರಮಾಣದ ಮಳೆಯಾಗಬಹುದು. ದೀರ್ಘಾವಧಿಯ ಸರಾಸರಿಯಲ್ಲಿ ಮಳೆಯ ಪ್ರಮಾಣ ನೈಋತ್ಯ ಮುಂಗಾರಿನಲ್ಲಿ 101 ಶೇಕಡಾದಷ್ಟು ಬೀಳುವ ಸಾಧ್ಯತೆಯಿದೆ ಎಂದು ತಿಳಿಸಿತ್ತು.

English summary
Southwest Monsoon In India Likely To Be Normal In July Predicted IMD
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X