ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಋತ್ಯ ಮಾನ್ಸೂನ್ ಆರ್ಭಟಕ್ಕೆ ಸಿಲುಕಿ ಜಲಾವೃತವಾದ ನಗರಗಳು

By Nayana
|
Google Oneindia Kannada News

ಬೆಂಗಳೂರು, ಜೂನ್ 11: ನೈಋತ್ಯ ಮುಂಗಾರು ದೇಶದಾದ್ಯಂತ ಪ್ರಭಲವಾಗಿದೆ. ಕರ್ನಾಟಕದ ಕರಾವಳಿ ಭಾಗ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಆರಂಭವಾಗಿದೆ, ಅರೇಬಿಯನ್ ಸಮುದ್ರ, ಕೊಂಕಣದ ಕೆಲವು ಭಾಗ, ಮಧ್ಯ ಮಹಾರಾಷ್ಟ್ರ, ವಿದರ್ಭಾ, ಛತ್ತೀಸ್‌ಘಡ, ಒಡಿಶಾ ಪಶ್ಚಿಮ ಬಂಗಾಳದಲ್ಲಿ ಅದರ ಪ್ರಭಾವ ಗೋಚರಿಸಲಿದೆ.

ಕೊಂಕಣ, ಗೋವಾ, ಮಣಿಪುರ, ಮಿಜೋರಾಮ್‌, ಮಧ್ಯಪ್ರದೇಶ, ಅಸ್ಸಾಂ, ಮೇಘಾಲಯ, ಉತ್ತರಖಂಡ, ಭಾರಿ ಮಳೆಯಾಗುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ನೀಡಿದೆ. ಹವಾಮಾನ ಇಲಾಖೆ ಪ್ರಕಾರ ಕರಾವಳಿ ಕರ್ನಾಟಕ, ದಕ್ಷಿಣ ಕೊಂಕಣ್ ಮತ್ತು ಗೋವಾದಲ್ಲಿ ಕಳೆದ 24 ಗಂಟೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿದಿದೆ. ಉತ್ತರ ಕೊಂಕಣ್, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಕೇಂದ್ರ ಮಹಾರಾಷ್ಟ್ರ, ದಕ್ಷಿಣ ಒಳನಾಡು ಕರ್ನಾಟಕ ಮತ್ತು ಕೇರಳದಲ್ಲೂ ಭಾರೀ ಮಳೆಯಾಗಿದೆ.

ಮುಂಬೈನಲ್ಲಿ ಆಟಿಕೆಗಳಂತಾದ ರೈಲು, ಬಸ್ಸು, ಕಾರು, ಝಲ್ ಅಂತದೆ ಜನ ಜೀವನಮುಂಬೈನಲ್ಲಿ ಆಟಿಕೆಗಳಂತಾದ ರೈಲು, ಬಸ್ಸು, ಕಾರು, ಝಲ್ ಅಂತದೆ ಜನ ಜೀವನ

ಇದೇ ಸಂದರ್ಭದಲ್ಲಿ ಹವಾಮಾನ ಇಲಾಖೆ ಮುಂದಿನ 24 ಗಂಟೆಗಳಲ್ಲಿ ಕರಾವಳಿ, ಕರ್ನಾಟಕ, ಗೋವಾ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಕೊಂಕಣ್ ಪ್ರದೇಶ, ಮಣಿಪುರ, ಮಿಜೋರಾಂ, ತ್ರಿಪುರಾ, ಒಡಿಶಾ ಮತ್ತು ಕೇರಳದಲ್ಲಿ ಭಾರೀ ಮಳೆಯಾಗಬಹುದು ಎಂದು ಅಂದಾಜಿಸಿದೆ.

ಮುಂಗಾರು ಮಳೆ ವಿದರ್ಭ, ಛತ್ತೀಸ್ ಗಢ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ನಲ್ಲಿ ಮುಂದಿನ 48 ಗಂಟೆಗಳಲ್ಲಿ ಸುರಿಯಲಿದೆ ಎಂದು ಇಲಾಖೆ ಹೇಳಿದೆ. ಇದೇ ವೇಳೆ ಜಾರ್ಖಂಡ್ ಮತ್ತು ಬಿಹಾರಕ್ಕೂ ಮುಂಗಾರು ಕಾಲಿಡಲಿದ್ದು ಮುಂದಿನ 48 ಗಂಟೆಗಳಲ್ಲಿ ಮಳೆ ಹೊತ್ತು ತರಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಲಾಗಿದೆ.

ಮಂಗಳೂರಿನಲ್ಲಿ ಮಳೆಯ ಅಬ್ಬರ, ಅಮುದ್ರದ ಒಂದು ನೋಟ

ಮಂಗಳೂರಿನಲ್ಲಿ ಮಳೆಯ ಅಬ್ಬರ, ಅಮುದ್ರದ ಒಂದು ನೋಟ

ಮಂಗಳೂರಿನಲ್ಲಿ ಮುಂಗಾರು ಮಳೆಯ ಅಬ್ಬರ ಆರಂಭವಾಗಿದೆ, ಮುಂಗಾರು ಆರಂಭವಾದ ಮೊದಲ ದಿನವೇ ಪ್ರವಾಹವನ್ನು ತಂದು ನಿಲ್ಲಿಸಿತ್ತು, ಇದರಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇದೀಗ ಮತ್ತೆ ಮಳೆ ಆರಂಭವಾಗಿದೆ, ಮಳೆಯ ನಂತರ ಸಮುದ್ರ ಕಂಡಿದ್ದು ಹೀಗೆ.

ನಾಗಪುರದಲ್ಲಿ ಮಳೆಗೆ ಹೊಳೆಯಂತಾದ ರಸ್ತೆ

ನಾಗಪುರದಲ್ಲಿ ಮಳೆಗೆ ಹೊಳೆಯಂತಾದ ರಸ್ತೆ

ನಾಗಪುರದಲ್ಲಿ ಭಾರಿ ಮಳೆ ಆರಂಭವಾಗಿದ್ದು, ರಸ್ತೆಗಳೆಲ್ಲವೂ ನೀರಿನಿಂದ ತುಂಬಿ ಹೊಳೆಯಂತೆ ಗೋಚರಿಸುತ್ತಿದೆ, ಬೈಕ್‌ ಸವಾರರು ಆ ನೀರಿನ ಮಧ್ಯೆ ಚಲಿಸುತ್ತಿರುವ ದೃಶ್ಯ

ಅಲಹಬಾದ್‌ನಲ್ಲಿ ಭಾರಿ ಮಳೆ ವಾಹನ ಸಂಚಾರ ಅಸ್ತವ್ಯಸ್ತ

ಅಲಹಬಾದ್‌ನಲ್ಲಿ ಭಾರಿ ಮಳೆ ವಾಹನ ಸಂಚಾರ ಅಸ್ತವ್ಯಸ್ತ

ದೇಶಾದ್ಯಂತ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಅಲ್ಲಲ್ಲಿ ಭಾರಿ ಮಳೆ ಆರಂಭವಾಗಿದೆ, ಅಲಹಾಬಾದ್‌ನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಭಾನುವಾರ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಅಲಹಬಾದ್‌ನಲ್ಲಿ ಮಳೆ ತಂದ ಅವಾಂತರ

ಅಲಹಬಾದ್‌ನಲ್ಲಿ ಮಳೆ ತಂದ ಅವಾಂತರ

ನೈಋತ್ಯ ಮುಂಗಾರು ಪ್ರವೇಶಿಸುತ್ತಿದ್ದಂತೆ ಮಳೆಯೂ ಭಾರಿ ಪ್ರಮಾಣದಲ್ಲಿ ಆರಂಭವಾಗಿದೆ. ಅಂಡರ್‌ಪಾಸ್‌ಗಳಲ್ಲಿ ನೀರು ನಿಂತಿದೆ. ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಚೇರಿಗೆ ರಜೆ ಎಂದು ಶಾಪಿಂಗ್‌, ಸಿನಿಮಾ ನೋಡಲು ತೆರಳಿರುವ ಜನರಿಗೆ ಮಳೆ ಬೇಸರ ತಂದಿತ್ತು.

ಕೊಲ್ಕತ್ತದಲ್ಲಿ ಡ್ರಾಗನ್ ಬೋಟ್‌ ಫೆಸ್ಟಿವಲ್

ಕೊಲ್ಕತ್ತದಲ್ಲಿ ಡ್ರಾಗನ್ ಬೋಟ್‌ ಫೆಸ್ಟಿವಲ್

ಕೊಲ್ಕತ್ತಾದಲ್ಲಿ ಭಾನುವಾರ ನಡೆದ ಡ್ರಾಗನ್ ಬೋಟ್‌ ಹಬ್ಬದಲ್ಲಿ ಮಾಲ್ಗೊಂಡಿದ್ದ ಚೀನಿಯರು, ಬೋಟ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಡ್ರಾಗನ್ ಬೋಟ್‌ ಹಬ್ಬದಲ್ಲಿ ಚೀನೀಯರು ಡ್ರಾಗನ್ ರೀತಿಯ ಬಟ್ಟೆ ತೊಟ್ಟು ಸಂಭ್ರಮಿಸಿದರು.

English summary
Southwest monsoon hit across the country. IMD has warned heavy rainfall in Maharashtra, Vidarbha, Chattisgarh, Odisha and many states in next 24 hours. Here is story about rain hit areas in various state of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X