ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 1ರಿಂದ ಹೊರರಾಜ್ಯಕ್ಕೆ 16 ರೈಲುಗಳ ಸಂಚಾರ

|
Google Oneindia Kannada News

ಬೆಂಗಳೂರು, ಮೇ 28: ಜೂನ್ 1 ರಿಂದ ಹೊರರಾಜ್ಯಗಳಿಗೆ 16 ರೈಲುಗಳು ಸಂಚಾರ ನಡೆಸಲಿವೆ.

Recommended Video

ಆರ್ಥಿಕ ಸುನಾಮಿ ದೇಶವನ್ನು ಸಂಕಷ್ಟಕ್ಕೆ ದೂಡಿದೆ ಎಂದ ಡಿಕೆಶಿ | DK Shivakumar | Oneindia Kannada

ಲಾಕ್‌ಡೌನ್ ಸಡಿಲಿಕೆ ಬಳಿಕ ರಾಜ್ಯದ ಎರಡು ಮಾರ್ಗಗಳಲ್ಲಿ ವಿಶೇಷ ರೈಲು ಕಾರ್ಯಾಚರಣೆ ಮಾಡುತ್ತಿರುವ ನೈಋತ್ಯ ರೈಲ್ವೆ, ಜೂನ್ 1ರಿಂದ ಹೊರರಾಜ್ಯಗಳು ಸೇರಿದಂತೆ ರಾಜ್ಯದ ವಿವಿಧ ಮಾರ್ಗಗಳಲ್ಲಿ ಒಟ್ಟು 16 ವಿಶೇಷ ರೈಲುಗಳನ್ನು ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದೆ.

ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?

ಜೂನ್‌ 1 ರಿಂದ ರೈಲು ಕಾರ್ಯಾಚರಿಸುವ ನಗರಗಳು: ಜೂನ್ 1 ರಿಂದ ಕೆಎಸ್‌ಆರ್ ಬೆಂಗಳೂರು-ಹುಬ್ಬಳ್ಳಿ, ಹುಬ್ಬಳ್ಳಿ-ಕೆಎಸ್‌ಆರ್‌ ಬೆಂಗಳೂರು, ಯಶವಂತಪುರ-ಶಿವಮೊಗ್ಗ ಟೌನ್, ವಾಸ್ಕೋಡ ಗಾಮ/ಹುಬ್ಬಳ್ಳಿ -ಹಜರತ್ ನಿಜಾಮುದ್ದೀನ್, ಕೆಎಸ್‌ಆರ್‌ ಬೆಂಗಳೂರು-ದಾನಾಪುರ, ಮುಂಬೈ ಕಂಟೋನ್ಮೆಂಟ್-ಕೆಎಸ್‌ಆರ್ ಬೆಂಗಳೂರು, ಮುಂಬೈ ಕಂಟೋನ್ಮೆಂಟ್-ಗದಗ ನಡುವೆ ವಿಶೇಷ ರೈಲುಗಳು ಸಂಚರಿಸಲಿದೆ.

South Western Railway To Run 16 Special Trains

ಜೂನ್ 2 ರಿಂದ ಶಿವಮೊಗ್ಗ ಟೌನ್-ಯಶವಂತಪುರ, ಯಶವಂತಪುರ-ಹಜರತ್ ನಿಜಾಮುದ್ದೀನ್(ಮಂಗಳವಾರ ಮತ್ತು ಗುರುವಾರ), ಕೆಎಸ್‌ಆರ್ ಬೆಂಗಳೂರು-ಮುಂಬೈ ಕಂಟೋನ್ಮೆಂಟ್, ಹೌರಾ-ಯಶವಂತಪುರ, ಗದಗ-ಮುಂಬೈ ಕಂಟೋನ್ಮೆಂಟ್ ನಡುವೆ ವಿಶೇಷ ರೈಲುಗಳು ದಿನವೂ ಸಂಚರಿಸಲಿದೆ.

ಜೂನ್ 3 ರಿಂದ ಹಜರತ್ ನಿಜಾಮುದ್ದೀನ್-ವಾಸ್ಕೋಡ ಗಾಮಾ/ಹುಬ್ಬಳ್ಳಿ ಹಾಗೂ ದಾನಪುರ-ಕೆಎಸ್ಆರ್ ಬೆಂಗಳೂರು ಮಧ್ಯೆ ರೈಲು ಓಡಾಟ ನಡೆಸಲಿದೆ.

ಜೂನ್ 4 ರಿಂದ ಯಶವಂತಪುರ-ಹೌರಾ ವಿಶೇಷ ರೈಲು ವಾರದಲ್ಲಿ ಐದು ದಿನ ಸಂಚರಿಸಲಿದೆ.ಜೂನ್ 5 ರಂದು ಹಜರತ್ ನಿಜಾಮುದ್ದೀನ್ -ಯಶವಂತಪುರ ನಡುವೆ ವಿಶೇಷ ರೈಲು ಬುಧವಾರ ಮತ್ತು ಶುಕ್ರವಾರ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

English summary
The Railway Ministry has announced 16 special trains to be run by South Western Railway out of the 200 trains that will run from June 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X