ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲು ಸೇವೆ ಆರಂಭ; ಪ್ರಯಾಣಿಕರಿಗೆ ಮಾರ್ಗಸೂಚಿಗಳು

|
Google Oneindia Kannada News

ನವದೆಹಲಿ, ಮೇ 11 : ಲಾಕ್ ಡೌನ್ ಬಳಿಕ ಸ್ಥಗಿತಗೊಂಡಿದ್ದ ಪ್ರಯಾಣಿಕರ ರೈಲು ಸೇವೆಯನ್ನು ರೈಲ್ವೆ ಇಲಾಖೆ ಮಂಗಳವಾರದಿಂದ ಆರಂಭಿಸಲಿದೆ. ರೈಲಿನಲ್ಲಿ ಪ್ರಯಾಣ ಮಾಡುವವರು ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ.

ಸೋಮವಾರ ಕೇಂದ್ರ ಗೃಹ ಇಲಾಖೆ ರೈಲಿನಲ್ಲಿ ಸಂಚಾರ ನಡೆಸುವ ಜನರಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಪ್ರಯಾಣ ಮಾಡುವಾಗ ನಿಗದಿತ ಕಾರ್ಯಾಚರಣೆ ವಿಧಿವಿಧಾನ (ಎಸ್‌ಓಪಿ) ಅನುಸರಿಸುವುದು ಕಡ್ಡಾಯ.

ಮೇ 12ರಿಂದ ಸಂಚರಿಸಲಿರುವ ರೈಲುಗಳ ಸಮಗ್ರ ಪಟ್ಟಿಮೇ 12ರಿಂದ ಸಂಚರಿಸಲಿರುವ ರೈಲುಗಳ ಸಮಗ್ರ ಪಟ್ಟಿ

ಆನ್‌ ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಯೂ ಅದು ಖಚಿತವಾಗಿಲ್ಲ ಎಂದರೆ ನೀವು ರೈಲ್ವೆ ನಿಲ್ದಾಣವನ್ನು ಪ್ರವೇಶಿಸುವಂತಿಲ್ಲ. ಆರೋಗ್ಯ ಇಲಾಖೆ, ರೈಲ್ವೆ ಇಲಾಖೆ ಮತ್ತು ಗೃಹ ಇಲಾಖೆ ಸೇರಿ ಮಾರ್ಗಸೂಚಿಯನ್ನು ಅಂತಿಮಗೊಳಿಸಿವೆ.

ರೈಲು ಸಂಚಾರದ ಸಮಯ, ಟಿಕೆಟ್ ಬುಕ್ಕಿಂಗ್, ನಿಲ್ದಾಣಕ್ಕೆ ಬರುವುದು, ನಿಲ್ದಾಣದಿಂದ ವಾಪಸ್ ಹೋಗುವುದು. ಬೋಗಿ ಹೇಗಿರಬೇಕು? ಎಂಬ ಎಲ್ಲಾ ಅಂಶಗಳಿಗೂ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಯಾರು ನಿಲ್ದಾಣಕ್ಕೆ ಬರಬಹುದು?

ಯಾರು ನಿಲ್ದಾಣಕ್ಕೆ ಬರಬಹುದು?

ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದೇನೆ ಎಂದು ರೈಲು ನಿಲ್ದಾಣಕ್ಕೆ ಬರುವಂತಿಲ್ಲ. ನಿಮ್ಮ ಟಿಕೆಟ್ ಖಚಿತವಾಗಿದ್ದರೆ ಮಾತ್ರ ನಿಲ್ದಾಣಕ್ಕೆ ಬರಬಹುದಾಗಿದೆ. ರೈಲು ನಿಲ್ದಾಣಕ್ಕೆ ಹೋಗಿ ಬಳಿಕ ಸೀಟು ಹುಡುಕಿಕೊಳ್ಳುವಂತಿಲ್ಲ ಎಂದು ಗೃಹ ಇಲಾಖೆ ಹೇಳಿದೆ. ಖಚಿತವಾದ ಟಿಕೆಟ್ ಇದ್ದರೆ ಮಾತ್ರ ಪ್ರಯಾಣಿಕರು ಬರುವ ಆಟೋ, ಕ್ಯಾಬ್ ನಿಲ್ದಾಣದ ಒಳಗೆ ಬಿಡಲಾಗುತ್ತದೆ.

ಸ್ಕ್ರೀನಿಂಗ್ ಕಡ್ಡಾಯ

ಸ್ಕ್ರೀನಿಂಗ್ ಕಡ್ಡಾಯ

ರೈಲು ನಿಲ್ದಾಣಕ್ಕೆ ಬರುವ ಎಲ್ಲಾ ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಲಾಗುತ್ತದೆ. ಕೊರೊನಾದ ಯಾವುದೇ ಲಕ್ಷಣಗಳು ಇಲ್ಲದಿದ್ದರೆ ಮಾತ್ರ ರೈಲು ಹತ್ತಲು ಅವಕಾಶ ನೀಡಲಾಗುತ್ತದೆ. ಪ್ರಯಾಣಿಕರು ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ.

ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?

ಮಾಸ್ಕ್ ಧರಿಸುವುದು ಕಡ್ಡಾಯ

ಮಾಸ್ಕ್ ಧರಿಸುವುದು ಕಡ್ಡಾಯ

ರೈಲ್ವೆ ನಿಲ್ದಾಣದ ಒಳ ಹೋಗುವಾಗ, ಹೊರ ಬರುವಾಗ ಮತ್ತು ರೈಲನ್ನು ಹತ್ತುವಾಗ, ಇಳಿಯುವಾಗ ಹ್ಯಾಂಡ್ ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು ಕಡ್ಡಾಯ. ಪ್ರಯಾಣದ ಅವಧಿಯಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

ಸಿಬ್ಬಂದಿ ಮತ್ತು ಪ್ರಯಾಣಿಕರು

ಸಿಬ್ಬಂದಿ ಮತ್ತು ಪ್ರಯಾಣಿಕರು

ಗೃಹ ಇಲಾಖೆಯ ಮಾರ್ಗಸೂಚಿಯನ್ನು ಎಲ್ಲರಿಗೂ ಕಳಿಸಲಾಗಿದೆ. ರೈಲ್ವೆ ನಿಲ್ದಾಣ, ರೈಲಿನ ಸಿಬ್ಬಂದಿಗಳು ಸಹ ಹಲವು ನಿಯಮಗಳನ್ನು ಪಾಲನೆ ಮಾಡಬೇಕು. ನಿಲ್ದಾಣಗಳಲ್ಲಿ ಇಳಿದ ಬಳಿಕ ಆಯಾ ರಾಜ್ಯ, ಕೇಂದ್ರಾಡಳಿತ ಪ್ರದೇಶದ ನಿಯಮಗಳನ್ನು ಪ್ರಯಾಣಿಕರು ಪಾಲನೆ ಮಾಡಲೇಬೇಕು.

English summary
Ministry of Home Affairs has issued the SOP for the movement of persons by trains. Passengers with confirmed e-tickets shall be allowed to enter the railway station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X