ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು, ತಾಜ್ ಮಹಲನ್ನು ಯಾರೂ ಮುಟ್ಟೋ ಹಾಗಿಲ್ಲ!

ಮಾಲಿನ್ಯ ತಡೆಗಟ್ಟು ನಿರ್ಧಾರದಿಂದ ಈ ಹೆಜ್ಜೆಯನ್ನು ಇರಿಸಲಾಗಿದೆ ಎಂದು ಹೇಳಿರುವ ಇಲಾಖೆ, ಇನ್ನು, ಪ್ರವಾಸಿಗರು ತಾಜ್ ಮಹಲ್ ನೊಳಕ್ಕೆ ಬಂದರೂ ಅಲ್ಲಿನ ಗೋಡೆಗಳನ್ನು ಮುಟ್ಟುವ ಅವಕಾಶವಿರುವುದಿಲ್ಲ ಎಂದು ಎಎಸ್ಐ ಇಲಾಖೆ ಹೇಳಿದೆ.

|
Google Oneindia Kannada News

ನವದೆಹಲಿ, ಏಪ್ರಿಲ್ 6: ವಿಶ್ವವಿಖ್ಯಾತ ತಾಜ್ ಮಹಲ್ ನ ಸೌಂದರ್ಯ 'ತಾಜಾ' ಆಗಿಸಿರುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿರುವ ಭಾರತೀಯ ಪುರಾತತ್ವ ಸಂಸ್ಥೆ ಮುಂದಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ತಾಜ್ ಮಹಲ್ ನೋಡಲು ಆಗಮಿಸುವ ಪ್ರವಾಸಿಗಳು ಅದನ್ನು ಯಾವುದೇ ಕಾರಣಕ್ಕೂ ಮುಟ್ಟದಂತೆ ನಿಯಮ ರೂಪಿಸಲು ಮುಂದಾಗಿದೆ.

ಮಾಲಿನ್ಯ ತಡೆಗಟ್ಟು ನಿರ್ಧಾರದಿಂದ ಈ ಹೆಜ್ಜೆಯನ್ನು ಇರಿಸಲಾಗಿದೆ ಎಂದು ಹೇಳಿರುವ ಸಂಸ್ಥೆ, ಇನ್ನು, ಪ್ರವಾಸಿಗರು ತಾಜ್ ಮಹಲ್ ನೊಳಕ್ಕೆ ಬಂದರೂ ಅಲ್ಲಿನ ಗೋಡೆಗಳನ್ನು ಮುಟ್ಟುವ ಅವಕಾಶವಿರುವುದಿಲ್ಲ. ಸುಮಾರು ಒಂದು ಮೀಟರ್ ಅಂತರದಲ್ಲಿ ನಿಂತು ನೋಡಬಹುದಷ್ಟೇ ಎಂದು ಅವರು ತಿಳಿಸಿದ್ದಾರೆ.

Soon you may have to admire Taj Mahal from a metre away

ಅಲ್ಲದೆ, ವಿಶ್ವ ಸಂಸ್ಥೆಯ ವತಿಯಿಂದ ವಿಶ್ವ ಪಾರಂಪಕಿರ ತಾಣವೆಂದೂ ಘೋಷಿಸಲ್ಪಟ್ಟಿರುವುದರಿಂದ ತಾಜ್ ಮಹಲ್ ಅನ್ನು ಮತ್ತಷ್ಟು ಕಾಳಜಿಯಿಂದ ನೋಡಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಇಲಾಖೆ ಹೇಳಿದೆ.

ಇತ್ತೀಚೆಗೆ, ಮುಲ್ತಾನ್ ಮಟ್ಟಿಯ ಗೋಂದನ್ನು ತಯಾರಿಸಿ ಅದನ್ನು ತಾಜ್ ಮಹಲಿನ ಗೋಡೆಗಳಿಗೆ ಮೆತ್ತಿ ಆನಂತರ ತೊಳೆಯುವ ಮೂಲಕ ಆ ಕಟ್ಟಡಕ್ಕೆ ಉಪಯೋಗಿಸಿರುವ ಮಾರ್ಬಲ್ ಕಲ್ಲಿನ ಬಿಳುಪನ್ನು ಹಾಗೆಯೇ ಉಳಿಸಿಕೊಳ್ಳುವ ಯೋಜನೆಗೆ ಇಲಾಖೆ ಕೈ ಹಾಕಿತ್ತು. ಈಗ, ತಾಜ್ ಸೌಂದರ್ಯ ಕಾಪಾಡಲು ಅದು ಮತ್ತೊಂದು ಹೆಜ್ಜೆ ಇಟ್ಟಿದೆ.

English summary
In a desperate attempt to save the Taj Mahal from further degradation, the Archaeological Survey of India (ASI) is coming up with a new plan— no touching the monument anymore. The idea behind the plan is to prevent pollution of the Taj Mahal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X