ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ಪ್ರಯಾಣಕ್ಕಿನ್ನು ಮೊಬೈಲ್ ನಂಬರ್ ಸಾಕು?

By ವಿಕಾಸ್ ನಂಜಪ್ಪ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 26: ವಿಮಾನ ಸೇವೆಗಳಲ್ಲಿ 'ಡಿಜಿ ಯಾತ್ರಾ' ಎಂಬ ಪರಿಕಲ್ಪನೆಯಡಿ ನಾಗರಿಕರಿಗೆ ಪೇಪರ್ ಮುಕ್ತ ಸೇವೆಗಳನ್ನು ನೀಡಲು ಸಜ್ಜಾಗಿರುವ ನಾಗರಿಕ ವಿಮಾನ ಖಾತೆ ಇಲಾಖೆ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.

ಇನ್ನು, ವಿಮಾನ ಟಿಕೆಟ್ ಪಡೆಯುವ ಬದಲು ಕೌಂಟರ್ ನಲ್ಲಿ ಕೇವಲ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ ವಿಮಾನದೊಳಗಿನ ಆಸನವನ್ನು ಕಾಯ್ದಿರಿಸುವಂಥ ಸೌಲಭ್ಯವನ್ನು ಜಾರಿಗೊಳಿಸಲು ಇಲಾಖೆ ಯೋಜಿಸಿದೆ.

Soon board flight using just your mobile number

ಪ್ರಯಾಣಿಕರಿಗೆ ಸಂಬಂಧಿಸಿದ ಆಧಾರ್ ಕಾರ್ಡ್ ಸಂಖ್ಯೆ, ಪಾಸ್ ಪೋರ್ಟ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತಿತರ ಮಾಹಿತಿಗಳನ್ನು ಒಮ್ಮೆ ನೀಡಿದರಾಯ್ತು. ಇದರ ಜತೆಗೆ ಪ್ರತಿಯೊಬ್ಬ ಪ್ರಯಾಣಿಕರ ಬಯೋ ಮೆಟ್ರಿಕ್ ಮಾಹಿತಿಯನ್ನೂ ಇಲಾಖೆ ಸಂಗ್ರಹಿಸುತ್ತದೆ. ಆನಂತರ ಈ ಮಾಹಿತಿಯು ದೇಶದಲ್ಲಿ ವೈಮಾನಿಕ ಸೇವೆ ನೀಡುವ ಎಲ್ಲಾ ಸಂಸ್ಥೆಗಳ ನಡುವೆ ವಿನಿಮಯವಾಗುತ್ತದೆ.

ಹಾಗಾಗಿ, ದೇಶದ ಯಾವುದೇ ಏರ್ ಪೋರ್ಟ್ ಗೆ ಹೋದಾಗ ಟಿಕೆಟ್ ಕೌಂಟರಿಗೆ ತೆರಳಿ ತಮ್ಮ ಮೊಬೈಲ್ ಸಂಖ್ಯೆಯನ್ನು ತಿಳಿಸಿ, ಅಲ್ಲಿ ನಡೆಸಲಾಗುವ ಬಯೋಮೆಟ್ರಿಕ್ ಪರೀಕ್ಷೆಗೆ ತಮ್ಮ ಒಗ್ಗಿಕೊಂಡರಾಯ್ತು.

ನೀವು ನೀಡಿದ್ದ ಹಿಂದಿನ ಮಾಹಿತಿಯು ಈಗ ನೀವು ತೋರುತ್ತಿರುವ ಮಾಹಿತಿಯು ಹೊಂದಾಣಿಕೆ ಆದ ತಕ್ಷಣನೇ ನಿಮ್ಮ ಮೊಬೈಲ್ ಗೆ ನೀವು ಪ್ರಯಾಣಿಸಬೇಕಾದ ವಿಮಾನ, ಆಸನ ಸಂಖ್ಯೆ ಸೇರಿದಂತೆ ಇತರ ಎಲ್ಲಾ ಮಾಹಿತಿಗಳೂ ರವಾನೆಯಾಗುತ್ತದೆ.

ಇಂಥದ್ದೊಂದು ಹೊಸ ವ್ಯವಸ್ಥೆಯ ಜಾರಿಗೆ ವಿಮಾನ ಇಲಾಖೆ ಮುಂದಾಗಿದೆ.

English summary
Soon you will need only a mobile phone before you board a flight. Work is underway to ensure paperless boarding.This is the nearby plan of Civil Aviation Ministry in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X