ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗಿಗೆ ಆಧಾರ್ ಕಡ್ದಾಯ!

ರೈಲು ಟಿಕೆಟ್ ಗಳನ್ನು ಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸುವ ಬಗ್ಗೆ ಭಾರತೀಯ ರೈಲ್ವೆ ಇಲಾಖೆ 2016 ರೂಪಿಸಿದ್ದ ಹೊಸ ನೀತಿಯನ್ನು ಕೊನೆಗೂ ಅನುಷ್ಠಾನಗೊಳಿಸುತ್ತಿದೆ.

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 02: ರೈಲು ಟಿಕೆಟ್ ಗಳನ್ನು ಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸುವ ಬಗ್ಗೆ ಭಾರತೀಯ ರೈಲ್ವೆ ಇಲಾಖೆ 2016 ರೂಪಿಸಿದ್ದ ಹೊಸ ನೀತಿಯನ್ನು ಕೊನೆಗೂ ಅನುಷ್ಠಾನಗೊಳಿಸುತ್ತಿದೆ.

ಏಪ್ರಿಲ್ 01 ರಿಂದ ಈ ಹೊಸ ನೀತಿ ಜಾರಿಗೆ ಬರಲಿದ್ದು, ಆನ್ ಲೈನ್ ಮೂಲಕ ಟಿಕೆಟ್ ಪಡೆಯಲು ಆಧಾರ್ ಕಡ್ಡಾಯವಾಗಲಿದೆ. ಇದರ ಜತೆಗೆ ಅನೇಕ ರಿಯಾಯಿತಿ ಸೌಲಭ್ಯಗಳನ್ನು ಪ್ರಯಾಣಿಕರಿಗೆ ನೀಡಲಾಗುವುದು ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರದಂದು ಘೋಷಿಸಿದರು.

ಆನ್ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗಿಗೆ ಆಧಾರ್ ಕಡ್ದಾಯ!

ಹೊಸ ನೀತಿ ನಂತರದ ಬದಲಾವಣೆಗಳು:

* ರೈಲು ಟಿಕೆಟ್‌ಗೆ ಆಧಾರ್ ಕಾರ್ಡ್ ಜೋಡಿಸುವ ಯೋಜನೆ ಏಪ್ರಿಲ್ 1 ರಿಂದ ಮೂರು ತಿಂಗಳುಗಳ ಕಾಲ ಪ್ರಾಯೋಗಿಕವಾಗಿ ಜಾರಿಯಲ್ಲಿರುತ್ತದೆ.
* ದೇಶದೆಲ್ಲೆಡೆ 6 ಸಾವಿರಕ್ಕೂ ಅಧಿಕ ಟಿಕೆಟ್ ಮಾರಾಟ ಯಂತ್ರ ಹಾಗೂ 1 ಸಾವಿರಕ್ಕೂ ಅಧಿಕ ಸ್ವಯಂ ಚಾಲಿತ ಯಂತ್ರಗಳನ್ನು ಅಳವಡಿಸಲಾಗುವುದು.
* ಶೀಘ್ರದಲ್ಲೇ ಟಿಕೆಟ್ ಬುಕ್ಕಿಂಗ್ ಗೆ ಭೀಮ್ ಮಾದರಿಯಲ್ಲಿ ಹೊಸ ಅಪ್ಲಿಕೇಷನ್ ಹೊರತರಲಾಗುವುದು.
* ಈ ಯೋಜನೆ ಅನುಷ್ಠಾನಗೊಂಡರೆ ಕಾಯ್ದಿರಿಸುವ ಹಾಗೂ ಕಾಯ್ದಿರಸಲಾಗದ ಟಿಕೆಟ್‌ಗಳನ್ನು ಆನ್‌ಲೈನ್‌ ನಲ್ಲಾಗಲಿ ಅಥವಾ ರಿಸರ್ವೇಷನ್ ಟಿಕೆಟ್ ಕೌಂಟರ್‌ನಲ್ಲಾಗಲಿ ಆಧಾರ್ ಕಾರ್ಡ್ ಮಾಹಿತಿಯನ್ನು ನೀಡಿಯೇ ಪಡೆದುಕೊಳ್ಳಬೇಕಾಗುತ್ತದೆ.
* ಈ ಯೋಜನೆಯಿಂದಾಗಿ ರೈಲ್ವೆ ಟಿಕೆಟ್ ಮೇಲೆ ರಿಯಾಯಿತಿ ಪಡೆಯಲು ಅನುಕೂಲವಾಗಲಿದೆ. ಸುಮಾರು 50 ಕ್ಕೂ ವಿಷಯಗಳಲ್ಲಿ ರಿಯಾಯಿತಿ ಸಿಗುತ್ತದೆ. ಜೊತೆಗೆ ಅಧಿಕೃತ ಬುಕ್ಕಿಂಗ್ ಸೆಂಟರ್ ನಿಂದ ಟಿಕೆಟ್ ಬುಕ್ ಆಗಿದ್ದಕ್ಕೆ ಖಾತ್ರಿ ಸಿಗಲಿದೆ.

* ಆನ್ ಲೈನ್ ಬುಕ್ಕಿಂಗ್ ಮಾಡಿದವರಿಗೆ ಸಿಗುತ್ತಿದ್ದ ವಿಮೆಯ ಬಗ್ಗೆ ಇಲಾಖೆಗೆ ಪಾರದರ್ಶಕತೆ ಸಿಗಲಿದೆ ಎಂದು ಐಆರ್ ಸಿ ಟಿಸಿ ಚೇರ್ಮನ್ ಮೊನೊಚಾ ಹೇಳಿದ್ದಾರೆ.

ಆಧಾರ್ ಆಧಾರಿತ ಟಿಕೆಟ್ ಬುಕ್ ಮಾಡುವ ಪುರುಷರ ಹಿರಿಯ ನಾಗರಿಕರಿಗೆ ಶೇ 40 ಹಾಗೂ ಮಹಿಳಾ ಹಿರಿಯ ನಾಗರಿಕರಿಗೆ ಶೇ 50 ರಷ್ಟು ರಿಯಾಯಿತಿ ಸಿಗುತ್ತಿದೆ.ಇದನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

English summary
The railways will soon move towards Aadhaar-based online ticketing system to prevent touts from blocking bulk tickets, end fraudulent bookings and curb cases of impersonation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X