ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುರ್ತು ಪರಿಸ್ಥಿತಿ ಬಂದಾಗ 112 ಸಂಖ್ಯೆಗೆ ಕರೆ ಮಾಡಿ

By Mahesh
|
Google Oneindia Kannada News

ನವದೆಹಲಿ, ಏ.8: ಎಲ್ಲಾ ತುರ್ತು ಸೇವೆಗಳ ಸಂಖ್ಯೆಯನ್ನು ಒಗ್ಗೂಡಿಸಿಸ್ ಒಂದೇ ಸಂಖ್ಯೆಯನ್ನು ಜಾರಿಗೆ ತರುವ ಪ್ರಯತ್ನಕ್ಕೆ ಮತ್ತೊಮ್ಮೆ ಚಾಲನೆ ಸಿಕ್ಕಿದೆ. ಅಮೆರಿಕದಲ್ಲಿ ಚಾಲನೆಯಲ್ಲಿರುವ 911 ಸಂಖ್ಯೆಯಂತೆ ಭಾರತದಲ್ಲಿ ಇನ್ಮುಂದೆ 112 ಸಂಖ್ಯೆ ಬಳಕೆಗೆ ಬರುವ ಸೂ‌ಚನೆ ಟೆಲಿಕಾಂ ಇಲಾಖೆಯಿಂದ ಸಿಕ್ಕಿದೆ.

ದೇಶದೆಲ್ಲೆಡೆ 112 ನಂಬರ್ ನ್ಯಾಷನಲ್ ಎಮರ್ಜೆನ್ಸಿ ನಂಬರ್ ಆಗಿ ಬಳಸಲು ಅನುಮತಿ ಕೋರಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. [ಉತ್ತರ ಕರ್ನಾಟಕದಲ್ಲಿ ನೀರಿನ ಸಮಸ್ಯೆಗೆ ಹೆಲ್ಪ್ ಲೈನ್]

ಪೊಲೀಸ್, ಅಗ್ನಿಶಾಮಕದಳ, ಮಹಿಳೆಯರು ಮತ್ತು ಮಕ್ಕಳ ಸಹಾಯವಾಣಿ ಈ ದೂರವಾಣಿ ಸಂಖ್ಯೆಯನ್ನು ಹಂತಹಂತವಾಗಿ ಸೇರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಹೀಗಾಗಿ ಇನ್ಮುಂದೆ 100,101,102 ಹಾಗೂ 108 ಸಂಖ್ಯೆ ಎಲ್ಲವೂ 112ಗೆ ರೀಡೈರೆಕ್ಟ್ ಆಗಲಿದೆ. [ತುರ್ತು ಸಂಖ್ಯೆ: ಅಮೆರಿಕಕ್ಕೆ 911; ಭಾರತಕ್ಕೆ 2611]

ಸಾರ್ವಜನಿಕ ಜಾಗೃತಿ ಅಭಿಯಾನದ ಮೂಲಕ 112 ಸಂಖ್ಯೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬಹುದು. 100,101,102 ಹಾಗೂ 108 ಸಂಖ್ಯೆಗಳನ್ನು ಸಂಪೂರ್ಣವಾಗಿ ಕಿತ್ತು ಹಾಕದೆ ಎರಡನೇ ಲೈನ್ ನಂಬರ್ ಆಗಿ ಬಳಸಬಹುದಾಗಿದೆ. ಈ ಸಂಖ್ಯೆಗಳಿಗೆ ಕರೆ ಮಾಡಿದಾಗ 112 ಕಂಟ್ರೋಲ್ ರೂಮಿಗೆ ಕರೆ ಹೋಗುವಂತೆ ಮಾಡಬಹುದು ಎಂದು ಟ್ರಾಯ್ ಅಧಿಕಾರಿಗಳು ಹೇಳಿದ್ದಾರೆ.

Any emergency? Soon '112' will rescue you from all troubles

ಮೊಬೈಲಿನಿಂದ ಕರೆ ಸಾಧ್ಯವೇ? : ಮೊಬೈಲ್ ಫೋನ್, ಲ್ಯಾಂಡ್ ಲೈನ್ ನಿಂದ 112 ಸಂಖ್ಯೆಗೆ ನೇರವಾಗಿ ಕರೆ ಮಾಡಬಹುದು. ಜೊತೆಗೆ ನಿಮ್ಮ ಫೋನಿನಿಂದ ಹೊರ ಹೋಗುವ ಕರೆಗಳು ನಿರ್ಬಂಧಿಸಿದ್ದರೂ 112ಗೆ ಕರೆ ಸಾಧ್ಯವಾಗಲಿದೆ.ಇದರ ಜೊತೆಗೆ ಎಸ್ಎಂಎಸ್ ಮೂಲಕ ವ್ಯಕ್ತಿ ಇರುವ ಸ್ಥಳದ ಗುರುತು ಪತ್ತೆ ಮಾಡುವ ವಿಧಾನವನ್ನು ಟೆಲಿಕಾಂ ಇಲಾಖೆ ಬಳಸಲು ಯತ್ನಿಸುತ್ತಿದೆ. [ಮಹಿಳೆಯರಿಗಾಗಿ 24 X 7 ಸಹಾಯವಾಣಿ]

ಸಾರ್ವಜನಿಕರ ಕರೆಗೆ ಪ್ರತ್ಯೇಕ ವಿಭಾಗ: ಸಾರ್ವಜನಿಕ ಸುರಕ್ಷಿತ ಕೇಂದ್ರಗಳು ಹಿಂದಿ, ಇಂಗ್ಲೀಷ್ ಅಲ್ಲದೆ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲಿ ವ್ಯವಹರಿಸಲಿದೆ. ಪಿಸಿಆರ್ ವಾಹನ, ಅಗ್ನಿ ಶಾಮಕ ದಳ, ಆಂಬುಲೆನ್ಸ್ ವಾಹನಗಳಿಗೆ ಜಿಪಿಎಸ್ ಬಳಕೆ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ.

ಕರೆ ಮಾಡಿದ ವ್ಯಕ್ತಿಯ ವಿವರಗಳನ್ನು ಸಂಗ್ರಹಿಸಿ, ಶೇಖರಿಸಿ ತುರ್ತು ಸಮಯದಲ್ಲಿ ಕೇಂದ್ರಕ್ಕೆ ಕಳಿಸುವ ಹೊಣೆಯನ್ನು ಬಿಎಸ್ ಎನ್ ಎಲ್ ಗೆ ನೀಡಲಾಗಿದೆ. (ಒನ್ ಇಂಡಿಯಾ ಸುದ್ದಿ)

English summary
A new number ‘112', replacing all existing emergency numbers may be launched soon. Reportedly, the telecom regulator Trai has suggested that there should be a single number across the country which will serve all emergency purposes, including police, fire and ambulance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X