• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಜಾನ್ ಚರ್ಚೆ, ಸ್ಪೀಕರ್ ಬಳಕೆ ಬಗ್ಗೆ ಕೋರ್ಟ್ ನಿಯಮಗಳು ಏನು ಹೇಳುತ್ತವೆ?

By ವಿಕಾಸ್ ನಂಜಪ್ಪ
|

ಮುಂಬೈ, ಏಪ್ರಿಲ್ 18: ಗಾಯಕ ಸೋನು ನಿಗಮ್ ಸೋಮವಾರ ಮಾಡಿದ ಟ್ವೀಟ್ ಗಳಿಂದ ಭಾರೀ ಚರ್ಚೆ ಆರಂಭವಾಗಿದೆ. "ಆಜಾನ್ ನಿಂದ ಬೆಳಗ್ಗೆ ನಾನೇಕೆ ಏಳಬೇಕು?", "ಎಲ್ಲರನ್ನೂ ಆ ದೇವರು ಕಾಪಾಡಲಿ. ನಾನು ಮುಸ್ಲಿಮ್ ಅಲ್ಲ. ಆದರೂ ಆಜಾನ್ (ಬೆಳಗ್ಗಿನ ಪ್ರಾರ್ಥನೆ) ನಿಂದ ನಾನು ಎಚ್ಚರವಾಗಬೇಕು. ಭಾರತದಲ್ಲಿ ಇಂಥ ಬಲವಂತದ ಧಾರ್ಮಿಕತೆ ಎಂದಿಗೆ ಕೊನೆಯಾಗುತ್ತದೆ" ಎಂದು ಟ್ವೀಟ್ ಮಾಡಿದ್ದರು.

ಈ ಚರ್ಚೆ ಚಾಲ್ತಿಯಲ್ಲಿರುವಾಗಲೇ ಸುಪ್ರೀಂ ಕೋರ್ಟ್ ಹಾಗೂ ಬಾಂಬೆ ಹೈ ಕೋರ್ಟ್ ಈ ಬಗ್ಗೆ ನೀಡಿದ ಸೂಚನೆಗಳ ಬಗ್ಗೆ ತಿಳಿದುಕೊಳ್ಳಬೇಕು. 2005ರಲ್ಲಿ ಸುಪ್ರೀಂ ಕೋರ್ಟ್ ಕೆಲವು ಸೂಚನೆಗಳನ್ನು ನೀಡಿದೆ. ಅದರ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಮಿತಿ ವಿಧಿಸಲಾಗಿದೆ. ರಾತ್ರಿ ವೇಳೆಯಲ್ಲಿ ಅದರ ಶಬ್ದವನ್ನು ಕಡಿಮೆ ಮಾಡಿರಬೇಕು.[ಸೋನು 'ಅಜಾನ್' ವಿವಾದಕ್ಕೆ ಟ್ವಿಟ್ಟರಲ್ಲಿ ಮಿಶ್ರ ಪ್ರತಿಕ್ರಿಯೆ]

ಆಗಿನ ಮುಖ್ಯನ್ಯಾಯಮೂರ್ತಿ ಆರ್ ಸಿ ಲಹೋಟಿ ನೇತೃತ್ವದ ಪೀಠವು ನೀಡಿದ ತೀರ್ಪಿನ ಪ್ರಕಾರ, ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಗೆ ನಿಷೇಧವಿದೆ. ಈ ಬಗ್ಗೆ ಪೊಲೀಸರಿಗೂ ಕೋರ್ಟ್ ನಿಂದ ಸ್ಪಷ್ಟವಾದ ನಿರ್ದೇಶನವಿದೆ.

ಬಾಂಬೆ ಹೈಕೋರ್ಟ್ ತೀರ್ಪಿನ ಸಾರಾಂಶ

2014ರಲ್ಲಿ ಇಂಥದ್ದೇ ಪ್ರಕರಣ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಸಂತೋಷ್ ಪಚಲಗ್ ಎಂಬುವವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ತಾವು ನೆಲೆಸಿರುವ ಪ್ರದೇಶದ ಮಸೀದಿಗಳಲ್ಲಿ ಅನಧಿಕೃತವಾಗಿ ಬಳಸುತ್ತಿರುವ ಲೌಡ್ ಸ್ಪೀಕರ್ ಗಳ ವಿರುದ್ಧ ಅವರು ಪ್ರಕರಣಾ ದಾಖಲಿಸಿದ್ದರು.

ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾದ ಮಾಹಿತಿಯ ಪ್ರಕಾರ 49 ಮಸೀದಿಗಳ 45ರಲ್ಲಿ ಅನಧಿಕೃತವಾಗಿ ಲೌಡ್ ಸ್ಪೀಕರ್ ಬಳಸುತ್ತಿದ್ದಾರೆ ಎಂಬದು ಬಹಿರಂಗವಾಗಿತ್ತು. ಅವುಗಳಿಗೆ ಅನುಮತಿ ಪಡೆದಿಲ್ಲ ಎಂಬುದು ತಿಳಿಯುತ್ತಿದ್ದಂತೆ ಅನಧಿಕೃತವಾಗಿರುವ ಎಲ್ಲವನ್ನೂ ತೆಗೆದು ಹಾಕುವಂತೆ ಪೊಲೀಸರಿಗೆ ಕೋರ್ಟ್ ನಿರ್ದೇಶನ ನೀಡಿತ್ತು.[ನಾನು ಮುಸ್ಲಿಂ ಅಲ್ಲ ಅಜಾನ್ ಸಮಯಕ್ಕೆ ಏಕೆ ಎಚ್ಚರಗೊಳ್ಳಲಿ: ಸೋನು ನಿಗಮ್]

ನಿಯಮಾವಳಿ ಪ್ರಕಾರ ಶಬ್ದವನ್ನು ಅಳೆಯುವ ಡೆಸಿಬಲ್ ಮಾನದಂಡದಿಂದ ಆಗಾಗ ಪರಿಶೀಲನೆ ನಡೆಸಬೇಕು. ನಿಯಮದ ಪ್ರಕಾರ ಇಷ್ಟೇ ಡೆಸಿಬಲ್ ಮಟ್ಟದಲ್ಲಿ ಶಬ್ದ ಇರಬೇಕು. ಹಗಲಿನ ವೇಳೆ 50, ರಾತ್ರಿ 40 ಡೆಸಿಬಲ್ ಇರಬಹುದು. ಶಾಂತ ವಲಯದಲ್ಲಿ ಹಗಲು 55, ರಾತ್ರಿ 45 ಡೆಸಿಬಲ್ ಎಂದು ಮಿತಿ ನಿಗದಿಯಾಗಿದೆ.

ಇನ್ನು ಆಜಾನ್ ವಿಚಾರಕ್ಕೆ ಬಂದರೆ ನಿಯಮ ಏನು ಹೇಳುತ್ತದೆ ಅಂದರೆ ಎರಡರಿಂದ ಮೂರು ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು. ಕೆಲವು ಪ್ರದೇಶದಲ್ಲಿ ಅಜಾನ್ ಸಮಯ ದೀರ್ಘಾವಧಿಯದಾಗಿರುತ್ತದೆ. ಸ್ಪರ್ಧೆಯ ಕಾರಣಕ್ಕೆ ಹೀಗೆ ಮಾಡುತ್ತಾರೆ ಎಂಬ ದೂರುಗಳು ಕೇಳಿಬಂದಿವೆ.

English summary
Azan statement by siger Sonu Nigam is most discussing. It would be interesting to look into guidelines issued by both the Supreme Court as well as the Bombay HC. In the year 2005, the SC of India had issued guidelines which included restrictions on the use of loudspeakers in public spaces at night to bring down the decibel levels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X