ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್‌ಐಎಸ್‌ ಜೊತೆ ಇದ್ದ ಕೇರಳ ಯುವತಿ ಅಫ್ಗಾನ್‌ನಲ್ಲಿ ಶರಣು

|
Google Oneindia Kannada News

ನವದೆಹಲಿ, ನವೆಂಬರ್ 26 : ಐಎಸ್‌ಐಎಸ್ ಉಗ್ರ ಸಂಘಟನೆ ಸೇರಿದ್ದ ಕೇರಳ ಮೂಲದ ಯುವತಿ ಅಫ್ಗಾನಿಸ್ತಾನದಲ್ಲಿ ಶರಣಾಗಿದ್ದಾಳೆ. 2016ರಲ್ಲಿ ಈಕೆ ಕೇರಳದಿಂದ ಅಫ್ಗಾನಿಸ್ತಾನಕ್ಕೆ ಪರಾರಿಯಾಗಿದ್ದಳು ಎಂಬ ಮಾಹಿತಿ ಸಿಕ್ಕಿದೆ.

ಸೋನಿಯಾ ಸೆಬಾಸ್ಟಿಯನ್ ಅಲಿಯಾಸ್ ಆಯೇಷಾ ಎಂಬ ಯುವತಿ ಅಫ್ಗಾನಿಸ್ತಾನದಲ್ಲಿ ಕಾನೂನು ನಿರ್ದೇಶನಾಲಯದ ಮುಂದೆ ಶರಣಾಗಿದ್ದಾಳೆ. ಕೇರಳ ಮಾದರಿ ಐಎಸ್‌ಐಎಸ್ ಭಾಗವಾಗಿದ್ದ 21 ಜನರು 2016ರಲ್ಲಿ ಅಫ್ಗಾನಿಸ್ತಾನಕ್ಕೆ ತೆರಳಿದ್ದರು.

ಭಟ್ಕಳ ಮೂಲದ ಐಎಸ್‌ಐಎಸ್ ಉಗ್ರ ಶಫಿ ಅರ್ಮರ್ ಸಾವು ಭಟ್ಕಳ ಮೂಲದ ಐಎಸ್‌ಐಎಸ್ ಉಗ್ರ ಶಫಿ ಅರ್ಮರ್ ಸಾವು

ಐಎಸ್ಐಎಸ್ ಉಗ್ರ ಸಂಘಟನೆಗೆ ಕೇರಳದವರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಉಗ್ರನನ್ನು ಜೂನ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಅಫ್ಗಾನಿಸ್ತಾನದಲ್ಲಿ ಅಡಿಗಿ ಅಲ್ಲಿಂದಲೇ ಸಂಘಟನೆಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದ ರಶೀದ್ ಅಬ್ದುಲ್ಲಾನನ್ನು ವೈಮಾನಿಕ ದಾಳಿ ನಡೆಸಿ ಕೊಂದು ಹಾಕಲಾಗಿತ್ತು.

ಕೇರಳದ ಎಂಟೆಕ್ ವಿದ್ಯಾರ್ಥಿ ನಾಪತ್ತೆ, ಐಎಸ್‌ಐಎಸ್ ಸೇರಿರುವ ಶಂಕೆಕೇರಳದ ಎಂಟೆಕ್ ವಿದ್ಯಾರ್ಥಿ ನಾಪತ್ತೆ, ಐಎಸ್‌ಐಎಸ್ ಸೇರಿರುವ ಶಂಕೆ

Sonia Sebastin Member Of Kerala ISIS Module Surrenders

ಅಮೆರಿಕದ ಭದ್ರತಾ ಪಡೆಗಳು ನಡೆಸಿದ ನಿರಂತರ ದಾಳಿಯಲ್ಲಿ ರಶೀದ್ ಅಬ್ದುಲ್ಲಾ ಮೃತಪಟ್ಟಿದ್ದಾನೆ ಎಂದು ಸಂಘಟನೆಯ ಸದಸ್ಯರೊಬ್ಬರು ಟೆಲಿಗ್ರಾಂನದಲ್ಲ ಕಳುಹಿಸಿದ ಸಂದೇಶ ವೈರಲ್ ಆಗಿತ್ತು. ಕೇರಳದಿಂದ 21 ಜನರ ತಂಡವನ್ನು ಅಫ್ಗಾನಿಸ್ತಾನಕ್ಕೆ ಕರೆದುಕೊಂಡು ಹೋಗಿ ಆತ ತರಬೇತಿ ನೀಡುತ್ತಿದ್ದ.

ಅಫ್ಘಾನ್ ಉಗ್ರರು ಒಳ ನುಸುಳಿರುವ ಮಾಹಿತಿ: ಮಧ್ಯಪ್ರದೇಶದಲ್ಲಿ ಹೈ ಅಲರ್ಟ್ ಅಫ್ಘಾನ್ ಉಗ್ರರು ಒಳ ನುಸುಳಿರುವ ಮಾಹಿತಿ: ಮಧ್ಯಪ್ರದೇಶದಲ್ಲಿ ಹೈ ಅಲರ್ಟ್

ರಶೀದ್ ಅಯೇಷಾಳನ್ನು ಯುಎಇಗೆ ಮೊದಲು ಕರೆದುಕೊಂಡಿ ಹೋಗಿದ್ದ. ಬಳಿಕ ಅವರು ತೆಹ್ರಾನ್‌ಗೆ ತೆರಳಿದ್ದರು, ಅಲ್ಲಿಂದ ಅಫ್ಗಾನಿಸ್ತಾನಕ್ಕೆ ಕರೆದುಕೊಂಡು ಹೋಗಲಾಗಿತ್ತು. 21 ಜನರ ಗುಂಪಿನಲ್ಲಿದ್ದ ಆಯೇಷಾ ಈಗ ಶರಣಾಗಿದ್ದಾಳೆ.

ಕೇರಳ ಮಾದರಿ ಐಎಸ್‌ಐಎಸ್ ನೇಮಕಾತಿ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ. ಕೇರಳದಿಂದ ಹೋದ 21 ಜನರು ಅಫ್ಗಾನಿಸ್ತಾನದಲ್ಲಿದ್ದಾರೆ ಎಂಬ ಬಗ್ಗೆ ಎನ್‌ಐಎಗೆ ಮಾಹಿತಿ ಸಿಕ್ಕಿತ್ತು. ಭಾರತದಲ್ಲಿ ದಾಳಿಗಳನ್ನು ಮಾಡಲು ತರಬೇತಿ ನೀಡಲಾಗುತ್ತಿತ್ತು.

English summary
Sonia Sebastin alias Ayesha member of the ISIS from Kerala has surrendered in Afghanistan before the law enforcement agencies. Ayesha was among the 21 persons from Kerala who left for Afghanistan in 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X