ಅನಾರೋಗ್ಯ ಪೀಡಿತ ಅಮ್ಮನಿಗಾಗಿ ರಾಹುಲ್ ವಿದೇಶಕ್ಕೆ

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 16: ಅನಾರೋಗ್ಯಪೀಡಿತರಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಗಾಂಧಿ ಅವರನ್ನು ಕಾಣಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ವಿದೇಶಕ್ಕೆ ತೆರಳುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟಣೆಗೂ ಮುನ್ನವೇ ಸೋನಿಯಾ ಅವರು ಭಾರತ ತೊರೆದಿದ್ದರು. ಈಗ ಗುಣಮುಖರಾದ ಮೇಲೆ ರಾಹುಲ್ ಜತೆಗೆ ಭಾರತಕ್ಕೆ ಮರಳಲಿದ್ದಾರೆ.

ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸೋನಿಯಾ ಅವರನ್ನು ಭಾರತಕ್ಕೆ ಕರೆ ತರಲು ತೆರಳುತ್ತಿದ್ದಾರೆ ಎಂದರು.

Rahul to travel abroad to be with Sonia Gandhi

ಆಗಸ್ಟ್ 2016ರಲ್ಲಿ ಅಸ್ವಸ್ಥರಾದ ಮೇಲೆ ಬಹುತೇಕ ಸಕ್ರಿಯ ರಾಜಕೀಯದಿಂದ ಸೋನಿಯಾ ಅವರು ಹಿಂದೆ ಸರಿದಿದ್ದಾರೆ. ವಾರಣಾಸಿಯಲ್ಲಿ ಕಾಂಗ್ರೆಸ್ ಪರ ಪ್ರಚಾರದಲ್ಲಿ ನಿರತರಾಗಿದ್ದ ಸೋನಿಯಾ ಅವರು ಅನಾರೋಗ್ಯ ಪೀಡಿತರಾಗಿದ್ದರು. ಜ್ವರ ಹಾಗೂ ಬಳಲಿಕೆಯಿಂದ ನಂತರ ಚೇತರಿಸಿಕೊಂಡರೂ ಪಂಚರಾಜ್ಯಗಳ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿರಲಿಲ್ಲ.

ಮಾರ್ಚ್ 11ರಂದು ಫಲಿತಾಂಶ ಹೊರಬರುವುದಕ್ಕೂ ಮುಂಚಿತವಾಗಿ ವಿದೇಶಕ್ಕೆ ತೆರಳಿದ್ದರು. ಪಂಜಾಬಿನಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದ್ದು ಬಿಟ್ಟರೆ, ಮಣಿಪುರ, ಗೋವಾವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಉತ್ತರಪ್ರದೇಶ, ಉತ್ತರಾಖಂಡ್ ನಲ್ಲಿ ಲೆಕ್ಕಕ್ಕಿಲ್ಲದಂತೆ ಆಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress spokesperson Randeep Surjewala informed media that Congress president Sonia Gandhi is travelling abroad for health check-up. He also added that Congress vice president Rahul Gandhi shall travel there and he will accompany her on the return journey.
Please Wait while comments are loading...