ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗಕಾಮಿಗಳಿಗೆ ಜೈ ಎಂದ ಸೋನಿಯಾ ಗಾಂಧಿ

By Prasad
|
Google Oneindia Kannada News

ನವದೆಹಲಿ, ಡಿ. 12 : ದೇಶದ ರಕ್ಷಣೆಯನ್ನು ಹೊರತುಪಡಿಸಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮೊತ್ತಮೊದಲ ಬಾರಿಗೆ ಎಲ್ಲ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಒಂದಾಗಿವೆ. ಅದು ಸಲಿಂಗಕಾಮಿಗಳ ಸ್ವಾತಂತ್ರ್ಯದ ಹಕ್ಕಿನ ಪರ ಒಕ್ಕೊರಲಿನ ದನಿ ಎತ್ತಿರುವುದು. ಸಲಿಂಗಕಾಮವನ್ನು ನಿರಪರಾಧೀಕರಣ ಮಾಡುವ ಎಲ್ಲ ಯತ್ನಗಳನ್ನು ಮಾಡುವ ಭರವಸೆಯನ್ನು ಕೇಂದ್ರ ಸರಕಾರ ನೀಡಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ, ಸಲಿಂಗಕಾಮ ಕಾನೂನಿಗೆ ವಿರುದ್ಧವಾದುದು, ಅದು ಅಪರಾಧ ಎಂದು ಸುಪ್ರೀಂ ಕೋರ್ಟ್ ಬುಧವಾರ ನೀಡಿರುವ ಐತಿಹಾಸಿಕ ತೀರ್ಪಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಸತ್ತು ಈ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ಹುಡುಕುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟಿನ ತೀರ್ಪಿನಿಂದ ಬಾಧಿತರಾಗಿರುವವರನ್ನು ಸೇರಿಕೊಂಡು ಭಾರತದ ಪ್ರತಿಯೊಬ್ಬ ನಾಗರಿಕನ ಜೀವನ ಮತ್ತು ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕನ್ನು ಎತ್ತಿಹಿಡಿಯುವ ಕ್ರಮಕ್ಕೆ ಸಂಸತ್ತು ಮುಂದಾಗುತ್ತದೆ ಎಂದಿರುವ ಅವರು, ಸಲಿಂಗಕಾಮ ಅಪರಾಧವಲ್ಲ ಎಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ತಿರುವುಮುರುವು ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. [ಸಲಿಂಗಕಾಮ ಅಪರಾಧ : ಸುಪ್ರೀಂ ಕೋರ್ಟ್]

ಕೇಂದ್ರ ಸರಕಾರದ ಇಂಗಿತವನ್ನು ಅಭಿವ್ಯಕ್ತಪಡಿಸಿರುವ ಕಾನೂನು ಸಚಿವ ಕಪಿಲ್ ಸಿಬಲ್ ಅವರು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 (ಅಸಹಜ ಲೈಂಗಿಕತೆ ಅಪರಾಧ) ಸಂಬಂಧಿಸಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಮತ್ತೆ ಜಾರಿಗೆ ತರುವ ಎಲ್ಲ ಯತ್ನಗಳನ್ನು ಮಾಡುವುದಾಗಿ ಹೇಳಿ, ಸ್ತ್ರೀ, ಪುರುಷ, ದ್ವಿಲಿಂಗಿ ಮತ್ತು ನಪುಂಸಕ ಸಮುದಾಯ ಕುಣಿದಾಡುವಂತೆ ಮಾಡಿದ್ದಾರೆ.

ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ಕೂಡ, ಸರ್ವೋಚ್ಚ ನ್ಯಾಯಾಲಯದ ತೀರ್ಪು ತಪ್ಪು ಎಂದು ಹೇಳಿದ್ದು, ಪ್ರಸ್ತುತ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಪರಿಗಣಿಸಿ ತೀರ್ಪು ನೀಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪು ಅತ್ಯಂತ ಸಮಂಜಸ ಮತ್ತು ಸಂಶೋಧನೆಯಿಂದ ಕೂಡಿತ್ತು ಎಂದು ಕೂಡ ಹೇಳಿದ್ದಾರೆ. [ಸಲಿಂಗಕಾಮಿಗಳು ಸಿಡಿಮಿಡಿ]

ಡರ್ಟಿ ಪಾಲಿಟಿಕ್ಸ್ ಬಿಡಿ ಅಂತಾರೆ ಚೇತನ್

ಬರಹಗಾರ ಚೇತನ್ ಭಗತ್ ಅವರು, ಈಗ ಕಾಂಗ್ರೆಸ್, ಬಿಜೆಪಿ, ಬಿಜೆಡಿ, ಎಎಪಿ, ಸಿಪಿಐ, ಟಿಎಂಸಿ ಪಕ್ಷಗಳು ಐಪಿಸಿ ಸೆಕ್ಷನ್ 377ರ ವಿರುದ್ಧವಾಗಿ ಹೇಳಿಕೆ ನೀಡಿವೆ. ಕನಿಷ್ಠ ಈಗಲಾದರೂ ಯಾವುದೇ 'ಡರ್ಟಿ' ಪಾಲಿಟಿಕ್ಸ್ ಮಾಡದೆ ಸಂಸತ್ತಿನಲ್ಲಿ ಆ ನಿಮಯವನ್ನು ಕಿತ್ತುಹಾಕುವುದೆ ಎಂದು ಪ್ರಶ್ನಿಸಿದ್ದಾರೆ.

ಸಲಿಂಗಿಗಳ ಪರ ಸೋನಿಯಾ ದನಿ

ಸಲಿಂಗಿಗಳ ಪರ ಸೋನಿಯಾ ದನಿ

ಸುಪ್ರೀಂ ಕೋರ್ಟಿನ ತೀರ್ಪಿನಿಂದ ಬಾಧಿತರಾಗಿರುವವರನ್ನು ಸೇರಿಕೊಂಡು ಭಾರತದ ಪ್ರತಿಯೊಬ್ಬ ನಾಗರಿಕನ ಜೀವನ ಮತ್ತು ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕನ್ನು ಎತ್ತಿಹಿಡಿಯುವ ಕ್ರಮಕ್ಕೆ ಸಂಸತ್ತು ಮುಂದಾಗುತ್ತದೆ.

ಬೆಂಗಳೂರಿನಲ್ಲಿ ಸಲಿಂಗಕಾಮಿಗಳ ಪ್ರತಿಭಟನೆ

ಬೆಂಗಳೂರಿನಲ್ಲಿ ಸಲಿಂಗಕಾಮಿಗಳ ಪ್ರತಿಭಟನೆ

ಪ್ರೀತಿಗೆ ಲಿಂಗ ತಾರತಮ್ಯವಿಲ್ಲ, ಪಯಣ ಸಮಾನತೆಯೆಡೆಗೆ, ಸರ್ವೋಚ್ಚ ನ್ಯಾಯಾಲಯದ ತೀರ್ಪು ಸಮಾನತೆಯ ಹಕ್ಕು ಕಿತ್ತುಕೊಂಡಿದೆ ಮುಂತಾದ ಘೋಷಣೆಗಳನ್ನು ಕೂಗುತ್ತ ಲೈಂಗಿಕ ಅಲ್ಪಸಂಖ್ಯಾತರು ಬುಧವಾರ ಪ್ರತಿಭಟನೆ ನಡೆಸಿದರು.

ಸೋನಿಯಾರನ್ನ ಶ್ಲಾಘಿಸಿದ ಸುಧೀಂದ್ರ ಕುಲಕರ್ಣಿ

ಸೋನಿಯಾ ಗಾಂಧಿ ಅವರು ಸಲಿಂಗಕಾಮಿಗಳ ಪರವಾಗಿ ಅತ್ಯಂತ ದಿಟ್ಟ ಮತ್ತು ಶ್ಲಾಘನೀಯ ಹೇಳಿಕೆ ನೀಡಿದ್ದಾರೆ ಎಂದು ಕನ್ನಡಿಗ ಸುಧೀಂದ್ರ ಕುಲಕರ್ಣಿ ನುಡಿದಿದ್ದಾರೆ.

ಬೇಕೆ ಬೇಕು ನ್ಯಾಯ ಬೇಕು

ಬೇಕೆ ಬೇಕು ನ್ಯಾಯ ಬೇಕು

ಸಲಿಂಗಕಾಮವನ್ನು ನ್ಯಾಯಬದ್ಧ ಮಾಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ನವದೆಹಲಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಘೋಷಣೆಗಳನ್ನು ಕೂಗುತ್ತಿರುವುದು.

ಹಾಸನದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಬಂಧನ

ಕರ್ನಾಟಕದಲ್ಲೂ ಸಲಿಂಗಕಾಮದ ಪರವಾಗಿ ಭಾರೀ ಕೂಗು ಎದ್ದಿದೆ. ಬೆಂಗಳೂರಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿದ್ದರೆ, ಹಾಸನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ 14 ಸಲಿಂಗಕಾಮಿಗಳನ್ನು ಬಂಧಿಸಲಾಗಿದೆ.

ಮುಂಬೈನಲ್ಲಿ ಮುದುಡಿದ ಮುಖಗಳು

ಮುಂಬೈನಲ್ಲಿ ಮುದುಡಿದ ಮುಖಗಳು

ಸಲಿಂಗಕಾಮದ ವಿರುದ್ಧವಾಗಿ ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಲೈಂಗಿಕ ಅಲ್ಪಸಂಖ್ಯಾತರಲ್ಲಿ ಒಂದು ಬಗೆಯ ವಿಷಣ್ಣ ಭಾವನೆ ಮೂಡಿದೆ. ಅವರ ಭಾವನೆಯೇ ಎಲ್ಲವನ್ನು ಈ ಚಿತ್ರದಲ್ಲಿ ಹೇಳುತ್ತಿದೆ.

ಸಲಿಂಗಕಾಮ ಅಪರಾಧವಲ್ಲ ಅಂತಾರೆ ಗುರೂಜಿ

ಸ್ಮೃತಿಯಲ್ಲಿ ಸಲಿಂಗಕಾಮವನ್ನು ಕಾನೂನು ಬಾಹಿರ ಎಂದು ಹೇಳಿಲ್ಲ. ಪ್ರತಿಯೊಬ್ಬನಲ್ಲಿಯೂ ಪುರುಷ ಮತ್ತು ಸ್ತ್ರೀ ಅಂಶಗಳು ಇದ್ದೇ ಇರುತ್ತವೆ. ಅವರವರ ಪ್ರಾಬಲ್ಯಕ್ಕೆ ತಕ್ಕಂತೆ ಅವರವರ ಪ್ರವೃತ್ತಿಗಳು ಬದಲಾಗುತ್ತಿರುತ್ತವೆ ಎಂದು ಜಾಗತಿಕ ಧಾರ್ಮಿಕ ಗುರು ಎಂದೇ ಖ್ಯಾತರಾಗಿರುವ ರವಿಶಂಕರ ಗುರೂಜಿ ಅವರು ವ್ಯಾಖ್ಯಾನಿಸಿದ್ದಾರೆ.

ಸಲಿಂಗಕಾಮ ವೈಯಕ್ತಿಕ ವಿಚಾರ

ಸಲಿಂಗಕಾಮ ವೈಯಕ್ತಿಕ ವಿಚಾರ

ಸಲಿಂಗಕಾಮ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರ. ಅದನ್ನು ಅವರವರಿಗೇ ಬಿಟ್ಟರೆ ಒಳ್ಳೆಯದು. ದೆಹಲಿ ಹೈಕೋರ್ಟ್ ತೀರ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ. ನಮ್ಮ ದೇಶ ವಾಕ್ ಸ್ವಾತಂತ್ರ್ಯಕ್ಕೆ ಹೆಸರಾಗಿದೆ. ಅದು ಹಾಗೆಯೇ ಇರಲಿ ಎಂದಿದ್ದಾರೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ.

English summary
Congress president Sonia Gandhi has expressed her disappointment over Supreme Court ruling on homosexuality (IPC section 377) and said parliament would take corrective measures to protect the liberty of LGBT community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X