ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಆಸ್ಪತ್ರೆಯಿಂದ ಹೊರ ಬಂದ ಸೋನಿಯಾ, ಇನ್ನು 'ಇಡಿ' ವಿಚಾರಣೆ ಸಮಯ!

|
Google Oneindia Kannada News

ನವದೆಹಲಿ, ಜೂನ್ 20: ಕೋವಿಡ್19 ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಇಂದು ಸಂಜೆ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ ಎಂದು ಎಐಸಿಸಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಶ್ವಾಸನಾಳದ ಕೆಳಭಾಗದಲ್ಲಿ ಫಂಗಲ್ ಇನ್ಫೆಕ್ಷನ್ ಆಗಿತ್ತು. ಇದು ಕೋವಿಡೋತ್ತರ ರೋಗಲಕ್ಷಣಗಳು ಎಂದು ಗುರುತಿಸಲಾಗಿತ್ತು. ಈಗ ಸೋಂಕು ಮುಕ್ತರಾಗಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಮನೆಯಲ್ಲಿ ಸದ್ಯಕ್ಕೆ ವಿಶ್ರಾಂತಿ ಪಡೆಯಲಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಬೇಕಿರುವ ಸೋನಿಯಾ, ಸದ್ಯಕ್ಕೆ ಇನ್ನಷ್ಟು ಕಾಲ ವಿಚಾರಣೆ ಮುಂದೂಡುವಂತೆ ಕೋರುವ ಸಾಧ್ಯತೆಯಿದೆ.

75 ವರ್ಷ ವಯಸ್ಸಿನ ಸೋನಿಯಾ ಗಾಂಧಿ ಅವರಿಗೆ ಜೂನ್ 2ರಂದು ಕೋವಿಡ್ ಸೋಂಕು ತಗುಲಿತ್ತು. ಮೂಗಿನಲ್ಲಿ ವಿಪರೀತ ರಕ್ತ ಸೋರತೊಡಗಿದ ಬಳಿಕ ಜೂನ್ 12ರಂದು ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಫಂಗಲ್ ಸೋಂಕೂ ಇರುವುದು ಪತ್ತೆಯಾಗಿತ್ತು. ಪಂಗಸ್ ಸೋಂಕಿಗೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇತರ ಪೋಸ್ಟ್-ಕೋವಿಡ್ ರೋಗಲಕ್ಷಣಗಳೂ ಇದ್ದು ಅವಕ್ಕೂ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯಸ್ಥಿತಿಯ ಮೇಲೆ ನಿಗಾ ಇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

Sonia Gandhi Out From Hospital, Faces Probe In Money Laundering Case

ಸೋನಿಯಾ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್ ಹಗರಣ ಸಂಬಂಧ ಜೂನ್ 8ರಂದು ಇಡಿ ವಿಚಾರಣೆಗೆ ಹಾಜರಾಗಬೇಕಿತ್ತು. ಒಂದು ವಾರ ಮುಂಚೆ ಅವರಿಗೆ ಕೋವಿಡ್ ಸೋಂಕು ತಗುಲಿದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಗಿದೆ. ಇದೀಗ ಜೂನ್ 23ರಂದು ವಿಚಾರಣೆಗೆ ಹಾಜರಾಗಬೇಕೆಂದು ಸೋನಿಯಾ ಗಾಂಧಿಗೆ ಇಡಿ ಸಮನ್ಸ್ ನೀಡಿತ್ತು.

Sonia Gandhi Out From Hospital, Faces Probe In Money Laundering Case

ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಸತತವಾಗಿ ಮೂರು ದಿನ ವಿಚಾರಣೆ ನಡೆಸಿದೆ. ಇಂದು ಶುಕ್ರವಾರವೂ ಅವರ ವಿಚಾರಣೆ ನಡೆಯಬೇಕಿತ್ತು. ಸೋನಿಯಾ ಗಾಂಧಿ ಆರೋಗ್ಯದ ವಿಚಾರವಾಗಿ ರಾಹುಲ್ ಗಾಂಧಿ ವಿಚಾರಣೆ ಮುಂದೂಡಲು ಮಾಡಿಕೊಂಡ ಮನವಿಯನ್ನು ಇಡಿ ತನಿಖಾಧಿಕಾರಿಗಳು ಪುರಸ್ಕರಿಸಿದ್ದರು. ಹೀಗಾಗಿ, ಇಂದು(ಜೂನ್ 20)ರಂದು ಅವರ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ, ಸೋನಿಯಾ ವಿಚಾರಣೆಗೆ ಹಾಜರಾಗಬೇಕಿರುವ ದಿನಾಂಕದ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ

English summary
Congress president Sonia Gandhi was today discharged from the hospital in Delhi, over a week after she was admitted to the facility owing to post-Covid issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X