ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಸೂರೆಗೊಂಡ ಸೋನಿಯಾ-ಮಾಯಾವತಿ ಫೋಟೋ

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 23: ಕರ್ನಾಟಕದ ಶಕ್ತಿಸೌಧ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಇಂದು ನಡೆದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಪ್ರಮಾಣ ವಚನವನ್ನು ಇಡೀ ದೇಶವೇ ಕುತೂಹಲದ ಕಣ್ಣುಗಳಿಂದ ನೋಡಿತ್ತು. ಹಲವು ದೃಷ್ಯಗಳನ್ನು ಈ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕಟ್ಟಿಕೊಟ್ಟಿತು.

ಈ ಕಾರ್ಯಕ್ರಮದಲ್ಲಿ ದೇಶದ ಹೆಚ್ಚಿನ ಎಲ್ಲಾ ಪಕ್ಷಗಳ ಹಿರಿ ಕಿರಿ ನಾಯಕರೆಲ್ಲಾ ಭಾಗವಹಿಸಿದ್ದರು. ಕೈಕುಲುಕುವುದು, ಆಲಂಗಿಸುವುದು, ಅಪ್ಪಿಕೊಳ್ಳುವುದು ನಾಯಕರ ನಡುವೆ ನಡೆಯುತ್ತಿತ್ತು. ಕಿರಿ ನಾಯಕರು ಹಿರಿ ನಾಯಕರ ಕಾಲಿಗೆರಗುತ್ತಿದ್ದರು. ಅವರಲ್ಲಿ ಗಮನ ಸೆಳೆದಿದ್ದು ಆರ್.ಜೆ.ಡಿಯ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್. ತೇಜಸ್ವಿ ಯಾದವ್ ಸೋನಿಯಾ ಗಾಂಧಿ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಾಲಿಗೆರಗಿದರು.

ಕುಮಾರಸ್ವಾಮಿ ಪದಗ್ರಹಣದಲ್ಲಿ 'ಮಹಾ ಮೈತ್ರಿಕೂಟ'ದ ಶಕ್ತಿ ಪ್ರದರ್ಶನಕುಮಾರಸ್ವಾಮಿ ಪದಗ್ರಹಣದಲ್ಲಿ 'ಮಹಾ ಮೈತ್ರಿಕೂಟ'ದ ಶಕ್ತಿ ಪ್ರದರ್ಶನ

ಇನ್ನೋರ್ವ ಯುವ ನಾಯಕ ಅಖಿಲೇಶ್ ಯಾದವ್ ವೇದಿಕೆ ತುಂಬಾ ಉತ್ಸಾಹದಿಂದ ಓಡಾಡುತ್ತಿದ್ದರು. ಸಿಕ್ಕ ಸಿಕ್ಕ ನಾಯಕರ ಜೊತೆ ಪೊಲೀಸ್ ಅಧಿಕಾರಿಗಳ ಜೊತೆ ತುಂಬು ನಗೆ ಬೀರುತ್ತಾ ಹರಟುತ್ತಿದ್ದರು. ದೇವೇಗೌಡರಂಥ ಹಿರಿಯ ರಾಜಕಾರಣಿಗಳ ಆಶೀರ್ವಾದವೂ ಅವರಿಗೆ ಸಿಕ್ಕಿತು. ಮಮತಾ ಬ್ಯಾನರ್ಜಿ ವೇದಿಕೆ ತುಂಬಾ ಚುರುಕಿನಿಂದ ಓಡಾಡುತ್ತಿದ್ದರು. ಸೋನಿಯಾ ಗಾಂಧಿ ಮತ್ತು ಕುಮಾರಸ್ವಾಮಿಯವರ ಜೊತೆಗಿನ ದೀದಿ ಮಾತು ನೋಡುಗರ ಕಣ್ಸೆಳೆಯಿತು.

Sonia Gandhi-Mayawati hugging picture attracts many eyes

ಆದರೆ ಇಡೀ ಸಮಾರಂಭದಲ್ಲಿ ನೋಡುಗರ ಕಣ್ಣನ್ನು ಹೆಚ್ಚು ಸೆಳೆದಿದ್ದು ಬಿಎಸ್ಪಿಯ ಮಾಯವತಿ ಮತ್ತು ಸೋನಿಯಾ ಗಾಂಧಿ ನಡುವಿನ ಆಪ್ತ ಕ್ಷಣಗಳು.

ತಮ್ಮ ಪುತ್ರ ರಾಹುಲ್ ಗಾಂಧಿ ಜೊತೆಗೆ ಮಾಯಾವತಿಯವರ ಸಮೀಪ ಬಂದ ಸೋನಿಯಾ ಗಾಂಧಿ ಬಿಎಸ್ಪಿ ನಾಯಕಿಯನ್ನು ಆಪ್ತವಾಗಿ ಆಲಂಗಿಸಿಕೊಂಡರು. ಯಾವುದೋ ಕಾಲದ ಸಂಬಂಧವೆಂಬಂತೆ ಇಬ್ಬರೂ ಒಬ್ಬರನ್ನೊಬ್ಬರು ಹಿಡಿದುಕೊಂಡು ಸುಮಾರು ಹೊತ್ತು ಹರಟುತ್ತಲೇ ಇದ್ದರು. ಮಧ್ಯೆ ಮಾಯಾವತಿಯವರ ತಲೆಗೆ ಹಿತವಾಗಿ ತಲೆಯಲ್ಲಿ ಗುದ್ದಿದರ. ಅಲ್ಲಿಗೆ ಕ್ಲಿಕ್.. ಕ್ಲಿಕ್.. ಕ್ಲಿಕ್..

Sonia Gandhi-Mayawati hugging picture attracts many eyes

ಈ ಸುಂದರ ಕ್ಷಣ ಅಲ್ಲಿದ್ದವರ ಕ್ಯಾಮೆರಾದಲ್ಲಿ ಸೆರೆಯಾಯಿತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ವೈರಲ್ ಆಗುತ್ತಿದೆ. ಹಲವರು ಈ ಚಿತ್ರವನ್ನು 'ಪಿಕ್ ಆಫ್ ದಿ ಡೇ' ಎಂದು ಬಣ್ಣಿಸಿದ್ದಾರೆ.

English summary
Former Congress chief Sonia Gandhi and BSP chief Mayawatis hugging picture attracts many eyes in Karnataka chief minister HD Kumaraswamy's oath-taking ceremony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X