ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಹಾರ್ ಜೈಲಲ್ಲಿರುವ ಕಾಂಗ್ರೆಸ್ ನಾಯಕರ ಭೇಟಿಗೆ ಹೊರಟ ಸೋನಿಯಾ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 23: ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಇಬ್ಬರು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತೆರಳಲಿದ್ದಾರೆ.

ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಜೈಲುಪಾಲಾಗಿದ್ದರು. ಕರ್ನಾಟಕದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಡಿಕೆ ಶಿವಕುಮಾರ್‌ಗೆ ಸೆಪ್ಟೆಂಬರ್ 25ರವರೆಗೂ ಜೈಲು ವಾಸಡಿಕೆ ಶಿವಕುಮಾರ್‌ಗೆ ಸೆಪ್ಟೆಂಬರ್ 25ರವರೆಗೂ ಜೈಲು ವಾಸ

ಡಿಕೆ ಶಿವಕುಮಾರ್ ಆಸ್ಪತ್ರೆಯಲ್ಲಿರುವಾಗಲೇ ಡಿಕೆ ಸುರೇಶ್ ಅವರನ್ನು ಸೋನಿಯಾ ಭೇಟಿಯಾಗಿ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಭರವಸೆ ನೀಡಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜೊತೆ ತಿಹಾರ್ ಜೈಲಿಗೆ ತೆರಳುತ್ತಿದ್ದಾರೆ .

 ಸೆಪ್ಟೆಂಬರ್ 25ರವರೆಗೂ ಡಿಕೆ ಶಿವಕುಮಾರ್‌ಗೆ ಜೈಲು ವಾಸ

ಸೆಪ್ಟೆಂಬರ್ 25ರವರೆಗೂ ಡಿಕೆ ಶಿವಕುಮಾರ್‌ಗೆ ಜೈಲು ವಾಸ

ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿ ಕುರಿತ ತೀರ್ಪು ಸೆ.25ರಂದು ಹೊರಬೀಳಲಿದೆ. ಅಂದು ಮಧ್ಯಾಹ್ನ 3.30ಕ್ಕೆ ತೀರ್ಪು ಹೊರಬೀಳಲಿದೆ, ಅಲ್ಲಿಯವರೆಗೂ ಡಿ.ಕೆ.ಶಿವಕುಮಾರ್ ಜೈಲುವಾಸ ಅನುಭವಿಸಲಿದ್ದಾರೆ. ನಟರಾಜ್ ವಾದ: ಡಿಕೆಶಿ ವಿಚಾರಣೆ ಕುರಿತ ಕೆಲವು ಇಂಟರೆಸ್ಟಿಂಗ್ ಸಂಗತಿಗಳು ಮೂರು ದಿನಗಳ ಕಾಲ ನಡೆದ ವಾದ-ಪ್ರತಿವಾದ ಅಂತ್ಯಗೊಂಡ ನಂತರ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ. ಭೋಜನ ವಿರಾಮದ ನಂತರ ತೀರ್ಪು ಪ್ರಕಟಣೆಯ ದಿನಾಂಕ ಪ್ರಕಟಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು. ಅದರಂತೆ ಭೋಜನ ವಿರಾಮದ ನಂತರ ಬಂದ ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹರ್‌, ಸೆಪ್ಟೆಂಬರ್‌ 25 ತೀರ್ಪು ಪ್ರಕಟಿಸಲಾಗುವುದು ಎಂದರು.

 ನಿಮ್ಮ ಬೆಂಬಲಕ್ಕೆ ನಾನಿದ್ದೇನೆ ಎಂದಿದ್ದ ಸೋನಿಯಾ

ನಿಮ್ಮ ಬೆಂಬಲಕ್ಕೆ ನಾನಿದ್ದೇನೆ ಎಂದಿದ್ದ ಸೋನಿಯಾ

ಡಿಕೆ ಶಿವಕುಮಾರ್ ಬಂಧನವಾಗುತ್ತಿದ್ದಂತೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಅವರ ಬಳಿ ಮಾತನಾಡಿದ್ದ ಸೋನಿಯಾ ಗಾಂಧಿ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದರು. ಇದೀಗ ಡಿಕಶಿ ಶಿವಕುಮಾರ್ ಅವರನ್ನು ಭೇಟಿಯಾಗಲು ತಿಹಾರ್ ಜೈಲಿಗೆ ಆಗಮಿಸುತ್ತಿದ್ದಾರೆ.

ಇ.ಡಿ.ಅಧಿಕಾರಿಗಳು 198 ಗಂಟೆಗಳ ಕಾಲ ಡಿಕೆಶಿ ವಿಚಾರಣೆ ನಡೆಸಿದ್ದಾರೆ: ಮನುಸಿಂಘ್ವಿಇ.ಡಿ.ಅಧಿಕಾರಿಗಳು 198 ಗಂಟೆಗಳ ಕಾಲ ಡಿಕೆಶಿ ವಿಚಾರಣೆ ನಡೆಸಿದ್ದಾರೆ: ಮನುಸಿಂಘ್ವಿ

 ಪಿ ಚಿದಂಬರಂ ಜೈಲು ವಾಸ 14 ದಿನ ವಿಸ್ತರಣೆ

ಪಿ ಚಿದಂಬರಂ ಜೈಲು ವಾಸ 14 ದಿನ ವಿಸ್ತರಣೆ

ಸೆ. 5ರಿಂದ ತಿಹಾರ್ ಜೈಲಿನಲ್ಲಿರುವ ಪಿ. ಚಿದಂಬರಂ ಅವರ ನ್ಯಾಯಾಂಗ ಬಂಧನ ಅವಧಿಯು ಸೆ. 19ರಂದು ಮುಕ್ತಾಯಗೊಂಡಿತ್ತು. ಅವರನ್ನು ದೆಹಲಿಯಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಗುರುವಾರ ಹಾಜರುಪಡಿಸಲಾಗಿತ್ತು.

ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲಿನಲ್ಲಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ನ್ಯಾಯಾಂಗ ಬಂಧನದ ಅವಧಿ ಇನ್ನೂ 14 ದಿನ ವಿಸ್ತರಣೆಯಾಗಿದೆ. ಮೋದಿ ಕೆಣಕಿ, ಅಪ್ಪನಿಗೆ ವಿಶ್ ಮಾಡಿದ ಪತ್ರ ಬರೆದ ಕಾರ್ತಿ ಚಿದಂಬರಂ ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಚಿದಂಬರಂ ಅವರ ನ್ಯಾಯಾಂಗ ಬಂಧನ ವಿಸ್ತರಣೆಗೆ ಮನವಿ ಮಾಡಿತ್ತು. ಇದಕ್ಕೆ ಚಿದಂಬರಂ ಪರ ವಕೀಲ ಕಪಿಲ್ ಸಿಬಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

 ಚಿದಂಬರಂಗೆ ಜೈಲಿನಲ್ಲಿ ಏನೆಲ್ಲಾ ವ್ಯವಸ್ಥೆ ಲಭ್ಯವಿದೆ

ಚಿದಂಬರಂಗೆ ಜೈಲಿನಲ್ಲಿ ಏನೆಲ್ಲಾ ವ್ಯವಸ್ಥೆ ಲಭ್ಯವಿದೆ

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅವರನ್ನು ತಿಹಾರ್ ಜೈಲಿಗೆ ಕೊಂಡೊಯ್ಯಲಾಗಿದೆ. ಪಿ.ಚಿದಂಬರಂ ಅವರಿಗೆ ಕೆಲವು ವಿಶೇಷ ವ್ಯವಸ್ಥೆಗಳನ್ನು ತಿಹಾರ್ ಜೈಲಿನಲ್ಲಿ ಮಾಡಲಾಗಿದೆ. ಚಿದಂಬರಂ ಅವರು ತಿಹಾರ್ ಜೈಲಿನ ವಾರ್ಡ್‌ 9 ರ ಜೈಲು ಸಂಖ್ಯೆ 7 ರಲ್ಲಿ ಕಳೆಯಲಿದ್ದಾರೆ. ಇದೇ ವಾರ್ಡ್‌ನಲ್ಲಿ ಸುಮಾರು 600-700 ಸಂಖ್ಯೆಯಲ್ಲಿ ಖೈದಿಗಳಿದ್ದಾರೆ. ಪಿ ಚಿದಂಬರಂರನ್ನು ತಿಹಾರ್ ಜೈಲಿಗೆ ಕಳುಹಿಸಿದ ರೋಸ್ ಅವಿನ್ಯೂ ಕೋರ್ಟ್ ಪಿ.ಚಿದಂಬರಂ ಅವರಿಗೆ ಜೆಡ್ ಸೆಕ್ಯುರಿಟಿ ಇದ್ದ ವ್ಯಕ್ತಿಯಾಗಿದ್ದ ಕಾರಣ ಹಾಗೂ ಅವರ ಆರೋಗ್ಯದ ದೃಷ್ಟಿಯಿಂದಾಗಿ ಅವರಿಗೆ ಕೆಲವು ವಿಶೇಷ ವ್ಯವಸ್ಥೆಗಳನ್ನು ನೀಡಲು ನ್ಯಾಯಾಲಯದಲ್ಲಿ ಕೇಳಲಾಗಿತ್ತು. ಅದರಂತೆ ನ್ಯಾಯಾಲಯ ಸಹ ಕೆಲವು ವಿಶೇಷ ವ್ಯವಸ್ಥೆಗಳನ್ನು ನೀಡಲು ಸಮ್ಮತಿಸಿದೆ.

English summary
Congress’ interim president Sonia Gandhi and Former Prime Minister Dr Manmohan Singh will visit Former Finance Minister P Chidambaram and former minister DK Shivakumar in Tihar Jail on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X