ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಕ್ಕೆ ಹಾರಿದ ಸೋನಿಯಾ, ಸಂಸತ್ ಅಧಿವೇಶನಕ್ಕೆ ಮತ್ತೆ ವಾಪಸ್!

|
Google Oneindia Kannada News

ನವದೆಹಲಿ, ಸೆ. 12: ಈ ಬಾರಿ ಸಂಸತ್ ಅಧಿವೇಶನದಲ್ಲಿ ಉಪಾಧ್ಯಕ್ಷರ ಆಯ್ಕೆ ಬಗ್ಗೆ ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಧಿವೇಶನಕ್ಕೂ ಮುನ್ನವೇ ವಿದೇಶಕ್ಕೆ ಹಾರಿದ್ದಾರೆ. ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪುತ್ರ ರಾಹುಲ್ ಅಮೆರಿಕಕ್ಕೆ ಹಾರಿದ್ದಾರೆ. ಹೀಗಾಗಿ, ಸೆಪ್ಟೆಂಬರ್ 14ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದ ಮೊದಲ ಕೆಲ ದಿನಗಳ ಕಾಲ ಹಾಜರಾಗಲು ಸಾಧ್ಯವಾಗುತ್ತಿಲ್ಲ

ಸೋನಿಯಾ ಗಾಂಧಿ ಅವರು ವಿದೇಶದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ತೆರಳುವುದು ಸಾಮಾನ್ಯವಾಗಿದೆ. ಇದು ಮಾಮೂಲಿ ಚೆಕ್ ಅಪ್ ಗಾಗಿ ಕೈಗೊಂಡಿರುವ ಪ್ರವಾಸವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಭಾರಿ ಬದಲಾವಣೆಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಭಾರಿ ಬದಲಾವಣೆ

ಸೋನಿಯಾ ಹಾಗೂ ರಾಹುಲ್ ಅವರು ಎರಡು ವಾರ ಅವರು ವಿದೇಶದಲ್ಲಿ ಇರಲಿದ್ದಾರೆ. ಹೀಗಾಗಿ, ಅಧಿವೇಶನದ ಅರ್ಧ ಅವಧಿಗೆ ಅಮ್ಮ-ಮಗ ಗೈರಾಗುವುದು ಖಚಿತವಾಗಿದೆ. ವಿದೇಶದಿಂದ ಬಂದ ಕೂಡಲೇ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

Sonia Gandhi leaves for United States for health check-up will miss Monsoon Session

ಜುಲೈ 30ರಂದು 73 ವರ್ಷ ವಯಸ್ಸಿನ ಸೋನಿಯಾ ಅವರು ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು. ಕೋವಿಡ್ 19 ಹಿನ್ನೆಲೆಯಲ್ಲಿ ಸೋನಿಯಾ ಅವರ ವಿದೇಶಿ ಪ್ರವಾಸ ವಿಳಂಬವಾಗಿತ್ತು.

ಸೋನಿಯರಿಂದ ಅಚ್ಚರಿಯ ನಡೆ, ಬಂಗಾಳಕ್ಕೆ ಅಧೀರ ಅಧ್ಯಕ್ಷರಾಗಿದ್ದು ಹೇಗೆ?ಸೋನಿಯರಿಂದ ಅಚ್ಚರಿಯ ನಡೆ, ಬಂಗಾಳಕ್ಕೆ ಅಧೀರ ಅಧ್ಯಕ್ಷರಾಗಿದ್ದು ಹೇಗೆ?

ಕಾಂಗ್ರೆಸ್ ಸಮಿತಿ ಪುನರ್ ರಚನೆ ಮಾಡಿರುವ ಸೋನಿಯಾ ಗಾಂಧಿ ಅವರು ವಿದೇಶದಿಂದ ಬಂದ ಬಳಿಕ ಕಾಂಗ್ರೆಸ್ ಆಂತರಿಕ ಬಂಡಾಯದ ಶಮನ, ರಾಜ್ಯಸಭೆ ಉಪಾಧ್ಯಕ್ಷ ಸ್ಥಾನ, ಲೋಕಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಆಗ್ರಹ, ಪಿಎಂ ಕೇರ್ಸ್ ದೇಣಿಗೆ, ಜಿಡಿಪಿ ಕುಸಿತ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ.

English summary
Congress President Sonia Gandhi left for the United States on Saturday for a routine medical check-up, with her son Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X