ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷದ ಸುಧಾರಣೆಗೆ ಇನ್ನೆರಡು ದಿನದಲ್ಲಿ ಕಾರ್ಯಪಡೆ: ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ನಿರ್ಧಾರ

|
Google Oneindia Kannada News

ಉದಯಪುರ್, ಮೇ 16: ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ. 13 ದಶಕಗಳಷ್ಟು ದೀರ್ಘ ಇತಿಹಾಸ ಹೊಂದಿರು ಕಾಂಗ್ರೆಸ್ ಪಕ್ಷ ಬದಲಾವಣೆಗೆ ತೆರೆದುಕೊಳ್ಳುವ ಮನಸು ಮಾಡಿದೆ. ನಿನ್ನೆ ಭಾನುವಾರ ಮುಕ್ತಾಯಗೊಂಡ ಮೂರು ದಿನಗಳ ಚಿಂತನ ಶಿಬಿರದಲ್ಲಿ ಕೆಲ ಮಹತ್ವದ ನಿರ್ಧಾರಗಳಿಗೆ ಕಾಂಗ್ರೆಸ್ ಬದ್ಧತೆ ತೋರಿದೆ. ಶಿಬಿರದಲ್ಲಿ ನಿರ್ಧರಿಸಲಾದ ಕಾಂಗ್ರೆಸ್ ಆಂತರಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಮುಂದಿನ ಎರಡ್ಮೂರು ದಿನಗಳಲ್ಲಿ ಕಾರ್ಯಪಡೆ ರಚಿಸಲಾಗುವುದು. ಈ ವಿಚಾರವನ್ನು ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದರು.

ಪಕ್ಷದ ಪುನಾರಚನೆ, ಪಕ್ಷದ ಹುದ್ದೆಗಳಿಗೆ ನೇಮಕಾತಿ ನಿಯಮಗಳು, ಸಂವಹನ, ಪ್ರಚಾರ, ಹಣಕಾಸು, ಚುನಾವಣೆ ನಿರ್ವಹಣೆ ಇತ್ಯಾದಿ ಎಲ್ಲಾ ರೀತಿಯ ಅಂಶಗಳು ಈ ಆಂತರಿಕ ಸುಧಾರಣೆಗಳ ವ್ಯಾಪ್ತಿಗೆ ಬರುತ್ತವೆ. ಚಿಂತನ ಶಿಬಿರ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋನಿಯಾ ಗಾಂಧಿ, "ನಾವು ಸಮಸ್ಯೆ ನಿವಾರಿಸುತ್ತೇವೆ. ಇದು ನಮ್ಮ ದೃಢನಿಶ್ಚಯ, ಇದು ನಮ್ಮ ನವಸಂಪಲ್ಪ. ಕಾಂಗ್ರೆಸ್ ನವೋದಯ ಕಾಣಲಿದೆ" ಎಂದು ಆತ್ಮವಿಶ್ವಾಸದ ನುಡಿಗಳನ್ನು ಹೇಳಿದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಾದಯಾತ್ರೆ ಘೋಷಿಸಿದ ರಾಹುಲ್ ಗಾಂಧಿಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಾದಯಾತ್ರೆ ಘೋಷಿಸಿದ ರಾಹುಲ್ ಗಾಂಧಿ

ಕಾಂಗ್ರೆಸ್ ಕಾರ್ಯಪಡೆ

ಕಾಂಗ್ರೆಸ್ ಕಾರ್ಯಪಡೆ

"ಇಲ್ಲಿ ರಾಜಸ್ಥಾನದ ಉದಯಪುರ್‌ನಲ್ಲಿ ಬೇರೆ ಬೇರೆ ಗುಂಪುಗಳೊಂದಿಗೆ ಚರ್ಚೆ ಮಾಡಲಾದಂತೆ ಹಾಗು ಅತ್ಯಗತ್ಯ ಎನಿಸಿರುವ ಆಂತರಿಕ ಸುಧಾರಣೆಗಳನ್ನು ಜಾರಿಗೆ ತರಲು ಒಂದು ಪ್ರಬಲ ಕಾರ್ಯಪಡೆ ರಚಿಸುತ್ತೇವೆ. ೨೦೨೪ರ ಲೋಕಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸುಧಾರಣೆಗಳನ್ನು ತರಲಾಗುತ್ತಿದೆ. ಪಕ್ಷ ಸಂಘಟನೆಯ ಎಲ್ಲಾ ಅಂಶಗಳನ್ನೂ ಇದು ಒಳಗೊಳ್ಳುತ್ತದೆ. ಮುಂದಿನ ೨-೩ ದಿನಗಳಲ್ಲಿ ಕಾರ್ಯಪಡೆಯ ಸ್ವರೂಪ ಹೇಗಿದೆ ಎಂಬುದನ್ನು ತಿಳಿಸಲಾಗುವುದು" ಎಂದು ಸೋನಿಯಾ ಗಾಂಧಿ ಹೇಳಿದರು.

ಕೈ ಸಲಹಾ ತಂಡ

ಕೈ ಸಲಹಾ ತಂಡ

ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಯಲ್ಲಿರುವ ಕೆಲ ಹಿರಿಯರನ್ನು ಆಯ್ದು ಸಲಹಾ ತಂಡವೊಂದನ್ನು ರಚಿಸುವುದಾಗಿ ಎಐಸಿಸಿ ಅಧ್ಯಕ್ಷೆ ಪ್ರಕಟಿಸಿದರು. ಈ ತಂಡವು ನಿಯಮಿತವಾಗಿ ಸಭೆ ಸೇರಿ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡಲಿದೆ. ಆದರೆ, ಕಾಂಗ್ರೆಸ್ ವರ್ಕಿಂಗ್ ಕಮಿಟಿಗೆ ಇರುವ ಅಧಿಕಾರ ಈ ಸಲಹಾ ತಂಡಕ್ಕೆ ಇರುವುದಿಲ್ಲ ಎಂಬುದನ್ನು ಗಾಂಧಿ ಸ್ಪಷ್ಟಪಡಿಸಿದರು.

"ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಆಗಾಗ್ಗೆ ಸಭೆ ಸೇರುವುದು ಮುಂದುವರಿಯುತ್ತದೆ. ಸಲಹಾ ತಂಡ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆದರೆ, ಹಿರಿಯ ನಾಯಕರ ಅಗಾಧ ಅನುಭವದ ಪ್ರಯೋಜನದಿಂದ ನನಗೆ ಸಹಾಯವಾಗುತ್ತದೆ. ಈ ತಂಡದ ಸ್ವರೂಪ ಹೇಗಿರಲಿದೆ ಎಂಬುದನ್ನು ಶೀಘ್ರದಲ್ಲೇ ತಿಳಿಸುತ್ತೇನೆ" ಎಂದವರು ಮಾಹಿತಿ ನೀಡಿದರು.

ಕಾಂಗ್ರೆಸ್ ಪಕ್ಷಕ್ಕೆ ಸಂಘಟನೆ ಈ ರೀತಿ ಆಗಬೇಕು ಎಂದ ಶಾಸಕ ರಮೇಶ್ ಕುಮಾರ್ಕಾಂಗ್ರೆಸ್ ಪಕ್ಷಕ್ಕೆ ಸಂಘಟನೆ ಈ ರೀತಿ ಆಗಬೇಕು ಎಂದ ಶಾಸಕ ರಮೇಶ್ ಕುಮಾರ್

ಕುಟುಂಬ ರಾಜಕಾರಣಕ್ಕೆ ಕೋಕ್

ಕುಟುಂಬ ರಾಜಕಾರಣಕ್ಕೆ ಕೋಕ್

ಚುನಾವಣೆಗಳಲ್ಲಿ ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಪಕ್ಷದ ಟಿಕೆಟ್ ಎಂಬ ನಿಯಮ ಜಾರಿಗೆ ಬರಬೇಕು ಎಂದು ಇದೇ ವೇಳೆ ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು. "ನಮ್ಮ ಸಂಘಟನೆಯಲ್ಲಿರವ ಕುಟುಂಬ ಸದಸ್ಯರ ಸಂಖ್ಯೆ ಸೀಮಿತಗೊಳಿಸುವುದು ತುಂಬ ಮುಖ್ಯ. ಕುಟುಂಬದ ಸದಸ್ಯರು ಸಂಘಟನೆಗೆ ಕೆಲಸ ಮಾಡಲಿ, ಕೈಜೋಡಿಸಲಿ. ಆದರೆ, ಒಂದೇ ಕುಟುಂಬದ 5-7 ಮಂದಿ ಸದಸ್ಯರು ಸಂಘಟನೆಯಲ್ಲಿ ಇರುವ ಸ್ಥಿತಿ ಬೇಡ" ಎಂದು ಮಾಜಿ ಅಧ್ಯಕ್ಷರೂ ಅದ ಅವರು ಹೇಳಿದರು.

ಕಾಂಗ್ರೆಸ್ ಯಾತ್ರೆ

ಕಾಂಗ್ರೆಸ್ ಯಾತ್ರೆ

> ಕಾಂಗ್ರೆಸ್ ಪಕ್ಷ ಇದೇ ವೇಳೆ ಗಾಂಧಿ ಜಯಂತಿ ದಿನವಾದ ಅಕ್ಟೋಬರ್ ೨ರಿಂದ "ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ" ಯಾತ್ರೆಯನ್ನು ನಡೆಸುವುದಾಗಿ ಘೋಷಿಸಿದೆ. ಜನರನ್ನು ತಲಪುವ ಯೋಜನೆಯ ಭಾಗವಾಗಿ ಈ ಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ.
>
> ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆದ ನವಸಂಕಲ್ಪ ಶಿಬಿರದಲ್ಲಿ ಆರು ಸಮಿತಿಗಳನ್ನು ರಚಿಸಿ ಕಾರ್ಯಾಗಾರ ನಡೆಸಲಾಯಿತು. ದೇಶಾದ್ಯಂತ 430 ನಾಯಕರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದು ವಿಶೇಷ. ರಾಜ್ಯದಿಂದ ಸಿದ್ದರಾಮಯ್ಯ ಸೇರಿದಂತೆ ಕೆಲವಾರು ನಾಯಕರು ಭಾಗವಹಿಸಿದ್ದರು.

English summary
Congress Party's interim president Sonia Gandhi said a task force will ensure implementation of internal reforms that were finalized in 3 day Congress Chintan Shibir at Udaipur, Rajasthan,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X