ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲವು ರಾಜ್ಯಗಳಿಗೆ ಪೌರತ್ವ ಮಸೂದೆ ಅನ್ವಯವಾಗದು, ಕಾರಣ ಹೀಗಿದೆ

|
Google Oneindia Kannada News

ಬಾಂಗ್ಲಾದೇಶ, ಅಪ್ಘಾನಿಸ್ತಾನ, ಪಾಕಿಸ್ತಾನದಿಂದ ಅಕ್ರಮವಾಗಿ ಬಂದು ಭಾರತದಲ್ಲಿ ನೆಲೆಸಿರುವ ಮುಸ್ಲೀಮರನ್ನು ಹೊರಗಟ್ಟಲೆಂದು ಮತ್ತು ಮುಂದೆ ಈ ದೇಶಗಳಿಂದ ಮುಸ್ಲಿಂ ಅಕ್ರಮವಲಿಸಿಗರು ಬರುವುದನ್ನು ತಡೆಯುವ ಸಲುವಾಗಿ ಪೌರತ್ವ ಮಸೂದೆಯನ್ನು ಜಾರಿಗೆ ತರಲು ಕೇಂದ್ರ ಮುಂದಡಿಇಟ್ಟಿದ್ದು, ಮಸೂದೆಯು ರಾಜ್ಯಸಭೆಯಲ್ಲಿ ಚರ್ಚೆಗೆ ಒಳಪಟ್ಟಿದೆ.

ದೇಶದ ಹಲವೆಡೆ ಮಸೂದೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಹೆಚ್ಚಿದೆ. ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಒಕ್ಕೂಟ ರಚಿಸಿಕೊಂಡು ಪೌರತ್ವ ಮಸೂದೆ (ಸಿಎಬಿ) ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಪೌರತ್ವ ಮಸೂದೆ ವಿರುದ್ಧ ಅಸ್ಸಾಂನಲ್ಲಿ ಪ್ರತಿಭಟನೆ ಹೆಚ್ಚು, ಕಾರಣವೇನು?ಪೌರತ್ವ ಮಸೂದೆ ವಿರುದ್ಧ ಅಸ್ಸಾಂನಲ್ಲಿ ಪ್ರತಿಭಟನೆ ಹೆಚ್ಚು, ಕಾರಣವೇನು?

ಮಸೂದೆ ಅಂಗೀಕಾರವಾದರೆ ಬಾಂಗ್ಲಾದೇಶ, ಅಪ್ಘಾನಿಸ್ತಾನ, ಪಾಕಿಸ್ತಾನ ದೇಶಗಳಿಂದ ಭಾರತಕ್ಕೆ ಬಂದಿರುವ ಅಕ್ರಮ ವಲಸಿಗರನ್ನು ಹೊರಗಟ್ಟಲಾಗುವುದು. ಇನ್ನು ಮುಂದೆ ಬರುವ ಮುಸ್ಲಿಂ ವಲಸಿಗರನ್ನು ತಡೆಯಲಾಗುತ್ತದೆ. ಆದರೆ ಹಿಂದೂ, ಕ್ರೈಸ್ತ, ಬೌದ್ಧ, ಜೈನ, ಸಿಖ್, ಪಾರ್ಸಿ ಧರ್ಮಗಳ ಅಕ್ರಮ ವಲಸಿಗರಿಗೆ ವಿನಾಯಿತಿ ಇದೆ.

ಪೂರ್ಣ ದೇಶಕ್ಕೆ ಅನ್ವಯವಾಗುವುದಿಲ್ಲ ಪೌರತ್ವ ಕಾಯ್ದೆ

ಪೂರ್ಣ ದೇಶಕ್ಕೆ ಅನ್ವಯವಾಗುವುದಿಲ್ಲ ಪೌರತ್ವ ಕಾಯ್ದೆ

ಆದರೆ ಈ ಮಸೂದೆ ಪೂರ್ಣ ದೇಶಕ್ಕೆ ಅನ್ವಯವಾಗುವುದಿಲ್ಲ. ಕೆಲವು ರಾಜ್ಯಗಳನ್ನು ಈ ಮಸೂದೆಯಿಂದ ಹೊರಗಿಡಲಾಗಿದೆ. ಅರುಣಾಚಲ ಪ್ರದೇಶ, ಮಿಜೋರಂ ರಾಜ್ಯಗಳಲ್ಲಿ ಪೌರತ್ವ ಕಾಯ್ದೆ ಯಿಂದ ಮುಕ್ತವಾಗಿವೆ. ಜೊತೆಗೆ ನಾಗಾಲ್ಯಾಂಡ್‌ನ ಬಹುತೇಕ ಭಾಗ, ಮೇಘಾಲಯದ ಬಹುತೇಕ ಭಾಗ, ತ್ರಿಪುರ ಮತ್ತು ಅಸ್ಸಾಂ ನ ಕೆಲವು ಭಾಗಗಳಲ್ಲಿ ಸಿಎಬಿ ಅನ್ವಯವಾಗುವುದಿಲ್ಲ.

ಐಎಲ್‌ಪಿ ಇರುವ ರಾಜ್ಯಗಳಲ್ಲಿ ಮಸೂದೆ ಇಲ್ಲ

ಐಎಲ್‌ಪಿ ಇರುವ ರಾಜ್ಯಗಳಲ್ಲಿ ಮಸೂದೆ ಇಲ್ಲ

ಅರುಣಾಚಲ ಪ್ರದೇಶ ಮತ್ತು ಮಿಜೋರಂ ರಾಜ್ಯಗಳಲ್ಲಿ ಪೌರತ್ವ ಮಸೂದೆ ಅನ್ವಯವಾಗುವುದಿಲ್ಲ. ಈ ರಾಜ್ಯಗಳಲ್ಲಿ ಐಎಲ್‌ಪಿ (ಇನ್ನರ್ ಲೈನ್ ಪರ್ಮಿಟ್‌) ನಿಯಮ ಜಾರಿ ಇರುವ ಕಾರಣ ರಾಜ್ಯಗಳಲ್ಲಿ ನೆಲೆಸಲು ಅಥವಾ ಭೇಟಿ ನೀಡಲು ಪ್ರತ್ಯೇಕ ಪರಿಶೀಲನೆ, ಒಪ್ಪಿಗೆ ಬೇಕಾಗುತ್ತದೆ. ಹಾಗಾಗಿ ಇಲ್ಲಿ ವಲಸಿಗರ ಹಾವಳಿ ಇಲ್ಲ. ಹಾಗಾಗಿ ಈ ಎರಡು ರಾಜ್ಯಗಳನ್ನು ಪೂರ್ಣವಾಗಿ ಮಸೂದೆಯಿಂದ ಹೊರಗುಳಿಸಲಾಗಿದೆ.

ಮಹತ್ವದ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಪಾಸ್ಮಹತ್ವದ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಪಾಸ್

ಸ್ವಾಯತ್ತ ಜಿಲ್ಲೆಗಳಲ್ಲಿ ಪೌರತ್ವ ಕಾಯ್ದೆ ಅನ್ವಯವಾಗದು

ಸ್ವಾಯತ್ತ ಜಿಲ್ಲೆಗಳಲ್ಲಿ ಪೌರತ್ವ ಕಾಯ್ದೆ ಅನ್ವಯವಾಗದು

ಆದರೆ ನಾಗಾಲ್ಯಾಂಡ್‌ನ ಬಹುತೇಕ ಭಾಗ, ಮೇಘಾಲಯದ ಬಹುತೇಕ ಭಾಗ, ತ್ರಿಪುರ ಮತ್ತು ಅಸ್ಸಾಂ ನ ಕೆಲವು ಭಾಗಗಳಲ್ಲಿ ಸಿಎಬಿ ಅನ್ವಯವಾಗುವುದಿಲ್ಲ ಈ ರಾಜ್ಯಗಳ ಕೆಲವು ಭಾಗಗಳಲ್ಲಿ ಸಂವಿಧಾನದ ಆರನೇ ಶೆಡ್ಯೂಲ್ ಜಾರಿಯಲ್ಲಿದೆ ಹಾಗಾಗಿ ಆರನೇ ಶೆಡ್ಯೂಲ್ ಜಾರಿಯಿರುವ ಭಾಗಗಳಲ್ಲಿ ಪೌರತ್ವ ಮಸೂದೆ ಅನ್ವಯವಾಗುವುದಿಲ್ಲ.

ಬುಡಕಟ್ಟು ಪ್ರದೇಶಗಳಿಗೆ ವಿಶೇಷ ಮಾನ್ಯತೆ

ಬುಡಕಟ್ಟು ಪ್ರದೇಶಗಳಿಗೆ ವಿಶೇಷ ಮಾನ್ಯತೆ

ಅಸ್ಸಾಂ, ತ್ರಿಪುರ, ಮೇಘಾಲಯದ ಬುಡಕಟ್ಟು ಪ್ರದೇಶಗಳಿಗೆ ಸಂವಿಧಾನಾತ್ಮಕ ವಿಶೇಷ ಸ್ಥಾನಮಾನ ನೀಡಲಾಗಿದೆ. ಇದನ್ನು ಆರನೇ ಶೆಡ್ಯೂಲ್‌ನಲ್ಲಿ ಸೇರಿಸಲಾಗಿದೆ. ಈ ಭಾಗಗಳು ಸ್ವಾಯತ್ತ ಪ್ರದೇಶಗಳಾಗಿವೆ. ಹಾಗಾಗಿ ಈ ಭಾಗಗಳಿಗೆ ಪೌರತ್ವ ಕಾಯ್ದೆ ಅನ್ವಯವಾಗುವುದಿಲ್ಲ.

ಪೌರತ್ವ ತಿದ್ದುಪಡಿ ಮಸೂದೆ, ರಾಜ್ಯಸಭೆಯಲ್ಲಿ ಎನ್ಡಿಎ ಸಂಖ್ಯಾಬಲ?ಪೌರತ್ವ ತಿದ್ದುಪಡಿ ಮಸೂದೆ, ರಾಜ್ಯಸಭೆಯಲ್ಲಿ ಎನ್ಡಿಎ ಸಂಖ್ಯಾಬಲ?

ಮಣಿಪುರಕ್ಕೆ ಪೌರತ್ವ ಕಾಯ್ದೆ ಜಾರಿ ಅನುಮಾನ

ಮಣಿಪುರಕ್ಕೆ ಪೌರತ್ವ ಕಾಯ್ದೆ ಜಾರಿ ಅನುಮಾನ

ಇನ್ನು ಮಣಿಪುರ ರಾಜ್ಯದಲ್ಲಿ ಪೌರತ್ವ ಮಸೂದೆ ಅನ್ವಯವಾಗುವುದು ಅನುಮಾನವಾಗಿದೆ. ಮಣಿಪುರ ರಾಜ್ಯವು ತಮಗೆ ಇನ್ನರ್ ಲೈನ್ ಪರ್ಮಿಟ್‌ (ಐಎಲ್‌ಪಿ) ನೀಡುವಂತೆ ಬಹುವರ್ಷಗಳಿಂದಲೂ ಒತ್ತಾಯಿಸಿತ್ತು. ಪೌರತ್ವ ಮಸೂದೆ ಮಂಡಿಸುವ ಸಮಯ ಮಾತನಾಡಿದ ಅಮಿತ್ ಶಾ, ಮಣಿಪುರಕ್ಕೆ ಐಎಲ್‌ಪಿ ನೀಡುವುದಾಗಿ ಹೇಳಿದ್ದಾರೆ. ಹಾಗಾಗಿ ಅಲ್ಲಿ ಪೌರತ್ವ ಕಾಯ್ದೆ ಅನ್ವಯಯವಾಗುವುದು ಅನುಮಾನ.

English summary
Some Eastern states exempted from citizen amendment bill. Here is the explainer why some states are exempted and why?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X