ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನಿಹನಿ ನೀರಿಗಾಗಿ ಹಾತೊರೆಯುತ್ತಿರುವ ಭೂಮಿತಾಯಿ ನೋಡಿ

By Vanitha
|
Google Oneindia Kannada News

ಬೆಂಗಳೂರು, ಫೆಬ್ರವರಿ,24: ನಮ್ಮ ದೇಶದಲ್ಲಿ ಸುದ್ದಿಗಳಿಗೇನೂ ಕಡಿಮೆ ಇಲ್ಲ. ದೇಶದ ಮೂಲೆಲೂಲೆಯಿಂದ ಮೂಲೆಗೆ ನಾನಾ ಸುದ್ದಿಗಳು ಕ್ಷಣ ಕ್ಷಣಕ್ಕೂ ವರದಿಯಾಗುತ್ತಲೇ ಇರುತ್ತವೆ. ಅವು ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಆಗಿರಬಹುದು.

ಕರ್ನಾಟಕದಲ್ಲಿ ಕೆಲವೆಡೆ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯ ಜಯದ ಸಂಭ್ರಮದಲ್ಲಿ ಪ್ರತಿನಿಧಿಗಳು ಮಿಂದೇಳುತ್ತಿದ್ದಾರೆ, ನವದೆಹಲಿಯಲ್ಲಿ ಜವಾಹರಲಾಲ್ ವಿಶ್ವವಿದ್ಯಾಲಯದ ರಾಷ್ಟ್ರವಿರೋಧಿ ಘೋಷಣೆ ಕಾವು ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ.

ಮತ್ತೊಂದೆಡೆ ಅಂದರೆ ಅಲಹಾಬಾದಿನಲ್ಲಿ ನಡೆಯುತ್ತಿರುವ ಹಿಂದೂ ಧರ್ಮದ ಅತ್ಯಂತ ಪವಿತ್ರ ಹಬ್ಬವಾದ ತ್ರಿವೇಣಿ ಉತ್ಸವದಲ್ಲಿ ಪಾಲ್ಗೊಂಡ ಭಕ್ತಾಧಿಗಳು ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಇದರ ಜೊತೆಗೆ ನಾಳೆ ಮಂಡನೆಯಾಗಲಿರುವ ರೈಲ್ವೆ ಬಜೆಟ್ ಬಗ್ಗೆ ಈಗಲೇ ಕುತೂಹಲಿಗಳಾಗಿದ್ದಾರೆ.[ರೈಲ್ವೆ ಬಜೆಟ್ : ಕರ್ನಾಟಕದ ಬೇಡಿಕೆಗೆ 'ಪ್ರಭು' ಸ್ಪಂದಿಸುವರೇ?]

ಒಟ್ಟಿನಲ್ಲಿ ಕ್ಷಣ ಕ್ಷಣಕ್ಕೂ ಸಿಗುವ ವರದಿಗಳು ಒಂದು ನಿಮಿಷ ಕಳೆಯುವುದರೊಳಗೆ ಹಳಸಲು ವರದಿಯಾಗಿರುತ್ತದೆ. ಸುದ್ದಿಗಳಲ್ಲಿ ತಾಜಾತನ ಬಳಸುವ ಮನಸ್ಸುಗಳಿಗೆ ಇಲ್ಲಿವೆ ಕೆಲವು ಸುದ್ದಿಗಳು. ಈ ಸುದ್ದಿ ಓದಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ.

ಹನಿಹನಿ ನೀರಿಗಾಗಿ ಹಾತೊರೆಯುತ್ತಿರುವ ಭೂಮಿ ತಾಯಿ

ಹನಿಹನಿ ನೀರಿಗಾಗಿ ಹಾತೊರೆಯುತ್ತಿರುವ ಭೂಮಿ ತಾಯಿ

ಮಹಾರಾಷ್ಟ್ರದ ಕೊಲ್ಹಾಪುರದ ಪ್ರಮುಖ ಕೆರೆಯಾದ ಕಲಂಬಾ ಕೆರೆಯ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗಿ ಬತ್ತಿ ಹೋಗಿದೆ. ಈ ಕೆರೆಯ ಭೂಮಿಯು ಬಿಸಲಿನ ದಗೆಗೆ ಬಾಯಿಬಿಟ್ಟಿದ್ದು, ಭೂಮಿ ತಾಯಿಯು ಹನಿಹನಿ ನೀರಿಗಾಗಿ ಹಾತೊರೆಯುತ್ತಿದ್ದಾಳೆ.

ಸುಬ್ರೊ ಕಮಲ್ ಮುಖರ್ಜಿಗೆ ಸಿಎಂ ನಿಂದ ಅಭಿನಂದನೆ

ಸುಬ್ರೊ ಕಮಲ್ ಮುಖರ್ಜಿಗೆ ಸಿಎಂ ನಿಂದ ಅಭಿನಂದನೆ

ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಸುಬ್ರೊ ಕಮಲ್ ಮುಖರ್ಜಿ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ನ್ಯಾಯಾಮೂರ್ತಿಗೆ ಅಭಿನಂದನೆ ಸಲ್ಲಿಸಿದ್ದು, ರಾಜ್ಯಪಾಲ ವಜೂಬಾಯಿ ಬಾಲ ಅವರು ಸಂಭ್ರಮದ ನಗೆ ಬೀರಿದರು.

ಯಮುನಾ ನದಿಗೆ ಆರತಿ

ಯಮುನಾ ನದಿಗೆ ಆರತಿ

ಅಲಹಾಬಾದಿನ ಯಮುನಾ ತೀರದಲ್ಲಿ ನಡೆದ ತ್ರಿವೇಣಿ ಮಹೋತ್ಸವದ ಮೊದಲ ದಿನದಲ್ಲಿ ಪಾಲ್ಗೊಂಡ ಭಕ್ತಾಧಿಗಳು ಯಮುನಾ ನದಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು.

ಪಂಜಿನ ಮೆರವಣಿಗೆ

ಪಂಜಿನ ಮೆರವಣಿಗೆ

ಜವಾಹರಲಾಲ್ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಕನ್ಹಯ್ಯ ಕುಮಾರ್ ಬಂಧನ ವಿರೋಧಿಸಿದ ಕೊಲ್ಕತ್ತಾದ ಜಾದವ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಕೊಲ್ಕತ್ತಾದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.

ಈ ವ್ಯಂಗ್ಯ ಚಿತ್ರ ನೋಡಿ ಏನೆಂದು ಅರ್ಥಮಾಡಿಕೊಳ್ಳಿ

ಈ ವ್ಯಂಗ್ಯ ಚಿತ್ರ ನೋಡಿ ಏನೆಂದು ಅರ್ಥಮಾಡಿಕೊಳ್ಳಿ

ಜವಾಹರಲಾಲ್ ವಿಶ್ವವಿದ್ಯಾನಿಲಯದ ಪ್ರಕರಣ ಸಂಬಂಧ ಬರೆದ ವ್ಯಂಗ್ಯ ಚಿತ್ರ ವೀಕ್ಷಿಸುತ್ತಿರುವ ಸಾರ್ವಜನಿಕರು. ಇದು ರಾಜಕೀಯ ತಿರುವು ಪಡೆದಿದೆಯೋ, ದೇಶಭಕ್ತಿಯ ಪರಮಾವಧಿಯೋ ಏನೋ ಇದು ಅವರವರ ಭಾವಕ್ಕೆ ತಕ್ಕಂತೆ ಬದಲಾಗುತ್ತಿದೆ.

English summary
Karnataka Governor Vajubhai Vala looks on as Chief Minister Siddaramaiah greets Justice Subhro Kamal Mukherjee after he was sworn-in as the Chief Justice of Karnataka High Court in Bengaluru. Jadavpur University students take out a torch rally in solidarity with JNUSU student Kanhiya Kumar in Kolkata etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X