ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 14ರ ಬಳಿಕ ಮುಂದೇನು?; ರಾಜ್ಯಗಳ ನಿಲುವು ಹೀಗಿದೆ

|
Google Oneindia Kannada News

ನವದೆಹಲಿ, ಏಪ್ರಿಲ್ 07: ಕೊರೊನಾ ಹರಡದಂತೆ ತಡೆಯಲು ದೇಶದಲ್ಲಿ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಏಪ್ರಿಲ್ 14ರಂದು ಲಾಕ್ ಡೌನ್ ಅವಧಿ ಮುಗಿಯಲಿದೆ. 7 ರಾಜ್ಯಗಳು ಈಗಾಗಲೇ ಲಾಕ್ ಡೌನ್ ಮುಗಿದ ಮೇಲೆ ಎಲ್ಲಾ ಸೇವೆಗಳನ್ನು ಆರಂಭಿಸುವ ತರಾತುರಿಯಲ್ಲಿವೆ.

Recommended Video

RCB ಸ್ಪಿನ್ನರ್ ಚಾಹಲ್ ಈಗ ಮನೆಯಲ್ಲಿ ಏನು ಮಾಡುತ್ತಿದ್ದಾರೆ ? | Oneindia Kannada

ತೆಲಂಗಾಣ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಅಸ್ಸಾಂ, ಛತ್ತೀಸ್‌ಗಢ ಮುಂತಾದ ರಾಜ್ಯಗಳು ಲಾಕ್ ಡೌನ್ ಅವಧಿ ಮುಗಿದ ಮೇಲೆಯೂ ಕೆಲವು ನಿರ್ಬಂಧಗಳನ್ನು ಮುಂದುವರೆಸುವ ಸುಳಿವನ್ನು ನೀಡಿವೆ.

21 ದಿನದ ಲಾಕ್ ಡೌನ್; ವಲಸೆ ಕಾರ್ಮಿಕರು ಸಂಕಷ್ಟದಲ್ಲಿ 21 ದಿನದ ಲಾಕ್ ಡೌನ್; ವಲಸೆ ಕಾರ್ಮಿಕರು ಸಂಕಷ್ಟದಲ್ಲಿ

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಅಂದರೆ ಪ್ರಸ್ತುತ 748 ಕೊರೊನಾ ಪ್ರಕರಣಗಳು ದಾಖಲಾಗಿವೆ. ಮುಂಬೈ ಮತ್ತು ಪುಣೆ ಭಾಗದಲ್ಲಿ ಲಾಕ್ ಡೌನ್ ಮುಂದುವರೆಸಲು ರಾಜ್ಯ ಬಯಸಿದೆ. ರಾಜ್ಯದ ಬೇರೆ ಪ್ರದೇಶಗಳಲ್ಲಿ ಲಾಕ್ ಡೌನ್ ತೆರವಾಗುವ ನಿರೀಕ್ಷೆ ಇದೆ.

ಏಪ್ರಿಲ್ 14ಕ್ಕೆ ಲಾಕ್ ಡೌನ್ ಅಂತ್ಯ; ಮುಂದೇನು? ಏಪ್ರಿಲ್ 14ಕ್ಕೆ ಲಾಕ್ ಡೌನ್ ಅಂತ್ಯ; ಮುಂದೇನು?

Some Restrictions Would Be In Place Even After Lockdown Ends

ಅಸ್ಸಾಂ ರಾಜ್ಯದಲ್ಲಿ ಇದುವರೆಗೂ 26 ಪ್ರಕರಣಗಳು ಮಾತ್ರ ದಾಖಲಾಗಿವೆ. ಲಾಕ್ ಡೌನ್ ಅವಧಿ ಮುಗಿದ ಬಳಿಕ ರಾಜ್ಯಕ್ಕೆ ಆಗಮಿಸಲು ಬಯಸುವವರಿಗೆ ನೋಂದಣಿ ಮಾಡಿಕೊಳ್ಳಲು ವೆಬ್ ಸೈಟ್ ಆರಂಭಿಸಲಾಗಿದೆ.

ಲಾಕ್ ಡೌನ್ ನಡುವೆ ಮಂಡ್ಯದಲ್ಲಿ ಬೇಕರಿ, ಸಲೂನ್ ತೆರೆಯಲು ಅನುಮತಿಲಾಕ್ ಡೌನ್ ನಡುವೆ ಮಂಡ್ಯದಲ್ಲಿ ಬೇಕರಿ, ಸಲೂನ್ ತೆರೆಯಲು ಅನುಮತಿ

ಉತ್ತರ ಪ್ರದೇಶ ರಾಜ್ಯ ಇನ್ನೂ ಲಾಕ್ ಡೌನ್ ತೆರವು ವಿಚಾರದಲ್ಲಿ ಗೊಂದಲ್ಲಿದೆ. ಛತ್ತೀಸ್‌ಗಢ ಮುಖ್ಯಮಂತ್ರಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದೊಳಗಿನ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ರಾಜಸ್ಥಾನ ಹೆಚ್ಚು ಪ್ರಕರಣಗಳಿರುವ ಪ್ರದೇಶ ಬಿಟ್ಟು ಬೇರೆ ಪ್ರದೇಶಗಳಲ್ಲಿ ಲಾಕ್ ಡೌನ್ ನಿಯಮ ಸಡಿಲಗೊಳಿಸಲು ಮುಂದಾಗಿದೆ. ತೆಲಂಗಾಣದಲ್ಲಿ ಲಾಕ್ ಡೌನ್ ಮುಂದುವರೆಸಲು ಚಿಂತನೆ ನಡೆದಿದೆ ಎಂಬ ವಿಚಾರ ಸೋಮವಾರ ಬಹಿರಂಗವಾಗಿತ್ತು.

ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ತೋಪೆ ಲಾಕ್ ಡೌನ್ ಕುರಿತು ಮಾತನಾಡಿದ್ದಾರೆ. "ಮುಂಬೈ ಮತ್ತು ಪುಣೆಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಏಪ್ರಿಲ್ 14ರ ಬಳಿಕ ಲಾಕ್ ಡೌನ್ ಸಂಪೂರ್ಣವಾಗಿ ತೆಗೆಯಲಾಗುತ್ತದೆ ಎಂದು ಯಾರೂ ಊಹಿಸಬೇಡಿ" ಎಂದು ಹೇಳಿದ್ದಾರೆ.

English summary
At least 7 states have indicated that they are in no hurry to completely ease the lockdown even after April 14. Some states indicated that some restrictions would be in place even after the 21 day lockdown ends.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X