ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪವಿತ್ರ ಮಾಘಸ್ನಾನದಲ್ಲಿ ಮಿಂದೆದ್ದು ಪುನೀತರಾದ ಮಂದಿ

By Vanitha
|
Google Oneindia Kannada News

ಬೆಂಗಳೂರು, ಜನವರಿ, 23: ಮನುಷ್ಯನ ನಿತ್ಯ ಕರ್ಮಗಳಲ್ಲಿ ಸ್ನಾನಕ್ಕೆ ಮೊದಲ ಪ್ರಾಶಸ್ತ್ಯ. ಇದು ದೈಹಿಕವಾಗಿ ನಮ್ಮನ್ನು ಸ್ವಚ್ಛವಾಗಿಡುವುದಲ್ಲದೇ ಮನಸ್ಸನ್ನು ಸದಾ ಲವಲವಿಕೆಯಿಂದ ಇಡುವಲ್ಲಿ ಪರೋಕ್ಷವಾಗಿ ಕಾರಣವಾಗುತ್ತದೆ.

ನಿತ್ಯ ಅವಶ್ಯದ ಸಂಧ್ಯಾವಂದನೆ, ದೇವಪೂಜೆ ಇತ್ಯಾದಿಗಳಂತೆ ಇದು ಕೂಡ ನಿತ್ಯಕರ್ಮ. ಲೌಕಿಕ ದೃಷ್ಟಿಯಿಂದ ಸ್ನಾನ ಅತಿ ಪಾವಿತ್ರ್ಯ. ಮಾನಸಿಕ ಪ್ರಸನ್ನತೆ, ಧಾರ್ಮಿಕ, ಅಧ್ಯಾತ್ಮ ದೃಷ್ಟಿಯಿಂದಲೂ ಮಹತ್ವ ಇದೆ.

ನಿತ್ಯವೂ ಪ್ರಾತಃಕಾಲದಲ್ಲಿ ಸ್ನಾನ ಮಾಡತಕ್ಕವನನ್ನು ಬಲ, ರೂಪ, ಸ್ವರಶುದ್ಧಿ, ವರ್ಣಶುದ್ಧಿ, ಸುಖಸ್ಪರ್ಶ, ಸುಗಂಧ, ಪರಿಶುದ್ಧತೆ, ತೇಜಸ್ಸು, ಸಕುಮಾರತೆ ಈ ಹತ್ತು ಗುಣಗಳು ತಾವೇ ತಾವಾಗಿ ಸೇವಿಸುತ್ತವೆ ಎಂದು ಮಹಾಭಾರತದಲ್ಲಿ ಹೇಳಿದೆ.[ನೇತಾಜಿ ಹುಟ್ಟುಹಬ್ಬದಂದು ರಹಸ್ಯ ಕಡತಗಳ ಕಾಣಿಕೆ]

ಈ ಸ್ನಾನದಲ್ಲಿ ಪ್ರಾತಃಸ್ನಾನ, ಜಲಪ್ರೋಕ್ಷಣ ಸ್ನಾನ, ಮಾಘಸ್ನಾನ ಎಂಬ ವಿಧಗಳಿವೆ. ಇದರಲ್ಲಿ ಮಾಘಸ್ನಾನ ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಇಂದು ಎಲ್ಲರೂ ದೇಶಾದ್ಯಂತ ಮಾಘಸ್ನಾನದಲ್ಲಿ ಮಿಂದೆದ್ದರು. ಬನ್ನಿ ಮಾಘಸ್ನಾನದ ಮಾಹಿತಿ ಜೊತೆಯಲ್ಲಿ ಕ್ರಿಕೆಟ್, ಸುಭಾಷ್ ಚಂದ್ರಬೋಸ್ ಸುದ್ದಿ ಇನ್ನಿತರ ಸುದ್ದಿಗಳ ಗುಚ್ಛ ಇಲ್ಲಿದೆ.

ಏನಿದು ಮಾಘಸ್ನಾನ?

ಏನಿದು ಮಾಘಸ್ನಾನ?

ಪುಷ್ಯ ಮಾಸದ ಶುಕ್ಲ ಏಕಾದಶಿ, ದ್ವಾದಶಿ ಅಥವಾ ಹುಣ್ಣಿಮೆಯಂದು ಪ್ರಾರಂಭಿಸಲಾದ ಮಾಘಸ್ನಾನವನ್ನು ಮಾಘ ಮಾಸದ ದ್ವಾದಶಿ ಅಥವಾ ಹುಣ್ಣಿಮೆಯಂದು ಸಮಾಪ್ತಿಗೊಳಿಸಬೇಕು. ಅಥವಾ ಮಕರ ಸಂಕ್ರಮಣದಿಂದ ಪ್ರಾರಂಭಿಸಿ ಕುಂಭ ಸಂಕ್ರಮಣದವರೆಗೆ ಮಾಘಸ್ನಾನ ನಡೆಸಬೇಕು. ಸಮುದ್ರ ಸ್ನಾನ ಅತಿ ಪ್ರಶಸ್ತವಾದುದು. ಮಹಾನದಿಗಳಲ್ಲಿ ಮೀಯುವಾಗ ಪ್ರಯಾಗ ಸ್ಮರಣೆ ನಡೆಸುತ್ತಿದ್ದರೆ ಗಂಗೆಯಲ್ಲಿ ಮುಳುಗಿ ಸ್ನಾನ ಮಾಡಿದಷ್ಟು ಪುಣ್ಯ ಬರುವುದು.

ರೋಹಿತ್ ಶರ್ಮನ ಆಟದ ಭಂಗಿ

ರೋಹಿತ್ ಶರ್ಮನ ಆಟದ ಭಂಗಿ

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮ ಉತ್ತಮ ಪ್ರದರ್ಶನ ನೀಡಿದ್ದು, ಶತಕ ಬಾರಿಸುವಲ್ಲಿ ಕೊಂಚ ಎಡವಿದರು. ೫ನೇ ಏಕದಿನ ಪಂದ್ಯದಲ್ಲಿ ಆಡುತ್ತಿದ್ದ ರೋಹಿತ್ ಶರ್ಮನ ಆಟದ ಭಂಗಿ.

ಮದುವೆ ಹೊಸ್ತಿಲಲ್ಲಿ ಮುಸ್ಲಿಂ ಯುವಕ ಯುವತಿಯರು

ಮದುವೆ ಹೊಸ್ತಿಲಲ್ಲಿ ಮುಸ್ಲಿಂ ಯುವಕ ಯುವತಿಯರು

ಮದುವೆ ಸಂಪ್ರದಾಯ ಪ್ರತಿಯೊಂದು ಧರ್ಮದಲ್ಲಿ ವಿಭಿನ್ನ. ಅಹಮದಾಬಾದ್ ನಲ್ಲಿ ಮುಸ್ಲಿಂ ಯುವಕ ಯುವತಿಯರು ಸಾಮೂಹಿಕ ವಿವಾಹಕ್ಕಾಗಿ ಕಾದು ಕುಳಿದದ್ದು ಹೀಗೆ.

ಗಣರಾಜ್ಯೋತ್ಸವಕ್ಕೆ ತಯಾರಾಗುತ್ತಿರುವ ಮಹಿಳಾಮಣಿಗಳು

ಗಣರಾಜ್ಯೋತ್ಸವಕ್ಕೆ ತಯಾರಾಗುತ್ತಿರುವ ಮಹಿಳಾಮಣಿಗಳು

66ನೇ ಗಣರಾಜ್ಯೋತ್ಸವ ಜನವರಿ 26ಕ್ಕೆ ನಡೆಯಲಿದ್ದು ಮಹಿಳಾಮಣಿಗಳು ಸೇರಿದಂತೆ ಪ್ರತಿಯೊಬ್ಬರು ಗಣರಾಜ್ಯೋತ್ಸವಕ್ಕೆ ವಿಭಿನ್ನವಾಗಿ ತಯಾರಾಗುತ್ತಿದ್ದು, ಮಹಿಳಾಮಣಿಗಳು ಕ್ಯಾಮರದ ಕಣ್ಣಿಗೆ ಕಂಡದ್ದು ಹೀಗೆ.

ಸುಭಾಷ್ ಚಂದ್ರ ಬೋಸ್ ಗೆ ನಮಿಸಿದ ಮೋದಿ

ಸುಭಾಷ್ ಚಂದ್ರ ಬೋಸ್ ಗೆ ನಮಿಸಿದ ಮೋದಿ

ಇಂದು ಸುಭಾಷ್ ಚಂದ್ರ ಬೋಸ್ 119ನೇ ಜನ್ಮದಿನಕ್ಕೆ ಕಾಲಿಟ್ಟಿದ್ದು, ಇದರ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇವರಿಗೆ ಸಂಬಂಧಿಸಿದ 100 ರಹಸ್ಯ ಕಡತಗಳನ್ನು ಬಿಡುಗಡೆ ಮಾಡಿದರು.

English summary
Some people did a holy bath Magh Snan in India,Assam artists pose in front of their tableau for the Republic Day parade during a press preview in New Delhi, India's Rohit Sharma plays a shot during their One Day International cricket match against Australia in Sydney, Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X