ಚಿತ್ರ ಸಂಪುಟ: ಅಬ್ಬರದಲ್ಲಿ ಕಳೆದು ಹೋದ 5 ಸುದ್ದಿ
'ಏನಪ್ಪಾ ಏನು ಸುದ್ದಿ?' ಅಂತ ಯಾರಾದರೂ ಕೇಳಿದರೆ ಹೇಳೋಕೊಂದಿಷ್ಟು ಸುದ್ದಿ ಬೇಡ್ವಾ ? ಅದಕ್ಕೆ ಜಗದೀಶನಾಳುವ ಈ ಜಗದ ನಾಟಕ ರಂಗದಲ್ಲಿ ನಮಗಾಗಿ ಅನೇಕ ಸುದ್ದಿಗಳು ನಿತ್ಯವು ಉತ್ಪತ್ತಿಯಾಗುತ್ತಿರುತ್ತವೆ.
ಬುಧವಾರದ ಸುದ್ದಿಗಳಲ್ಲಿ ಗಮನ ಸೆಳೆದಿದ್ದು ದೆಹಲಿಯಲ್ಲಿ ಅಧಿಕೃತ ಬ್ಯಾಂಕ್ ಒಂದರ ಎಟಿಎಂನಿಂದಲೇ 2000 ರು. ಮುಖಬೆಲೆಯ ಖೋಟಾ ನೋಟು ಬಂದಿದ್ದು. ಅದರಲ್ಲಿ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದೆಲ್ಲಾ ಇರುವುದು ಖೇದಕರವೆನಿಸಿತು.
ಇನ್ನುಳಿದಂತೆ, ಹೈದರಾಬಾದ್ ಬಳಿ ಬಸ್ ಒಂದು ಸುಟ್ಟು ಕರಕಲಾಗಿದ್ದು, ಖಾಸಗಿ ವಲಯದಲ್ಲಿನ ಉದ್ಯೋಗಿಗಳಿಗೆ ಗ್ಯಾಚುಟಿ ಮೊತ್ತವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಚಿಂತನೆ ನಡೆಸಿರುವುದು ಸೇರಿದಂತೆ ಹಲವಾರು ಸುದ್ದಿಗಳು ಗಮನ ಸೆಳೆದವು.
ಆದರೆ, ಇದೆಲ್ಲದರ ಜತೆಗೆ ಕೆಲವಾರು ಸುದ್ದಿಗಳು ಓದುಗರ ಗಮನ ಸೆಳೆಯದೇ ಉಳಿದಿರಬಹುದಾದ ಸಾಧ್ಯತೆಗಳಿವೆ. ಉದಾಹರಣೆಗೆ, ಭಾರತದಲ್ಲಿರುವ ಆಸ್ಟ್ರೇಲಿಯಾದ ಕ್ರಿಕೆಟ್ ತಂಡ ನಾಳೆ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಕಣಕ್ಕಿಳಿಯಲಿದೆ. ಆ ಹಿನ್ನೆಲೆಯಲ್ಲಿ ಆ ತಂಡದ ಆಟಗಾರರು ಇಂದು ಪುಣೆಯ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಕಣಿವೆ ರಾಜ್ಯದ ಕಾಶ್ಮೀರಿ ಪಂಡಿತರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಾರೆ.
ವಿಜಯ್ ಹಜಾರೆ ಟೂರ್ನಿಯ ಪಂದ್ಯಕ್ಕಾಗಿ ಕೋಲ್ಕತಾಕ್ಕೆ ತೆರಳಿಸಿರುವ ಜಾರ್ಖಂಡ್ ತಂಡದ ಜತೆ ಆ ತಂಡದ ನಾಯಕ ಧೋನಿ ಕೂಡ ಇದ್ದರು. ಇವೂ ಕೂಡಾ ಕುತೂಹಲ ಕೆರಳಿಸುವ ಸುದ್ದಿಗಳೇ. ಈ ಸುದ್ದಿಗಳ ಫೋಟೋ ಝಲಕ್ ಇಲ್ಲಿ ನಿಮಗಾಗಿ.

ವಾರ್ನರ್ ಅಭ್ಯಾಸ
ಪುಣೆಯಲ್ಲಿ ಫೆ. 23ರಿಂದ ಆರಂಭಗೊಳ್ಳಲಿರುವ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಡೇವಿಡ್ ವಾರ್ನರ್ ಅಭ್ಯಾಸದಲ್ಲಿ ತೊಡಗಿದ್ದು ಹೀಗೆ.

ಕಹಿಯ ನೆನಪು
ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಏಕದಿನ ಪಂದ್ಯಕ್ಕೂ ಮುನ್ನ ಇದೇ ಊರಿನಲ್ಲಿ ವರ್ಷದ ಹಿಂದೆ ನಡೆದಿದ್ದ ಭೂಕಂಪದಲ್ಲಿ ಅಸುನೀಗಿದ 185 ಜನರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ಮುಫ್ತಿ ಮಾತುಕತೆ
ಕಾಶ್ಮೀರದ ಕಾಶ್ಮೀರಿ ಪಂಡಿತರ ಪ್ರಾಂತ್ಯಕ್ಕೆ ಆಗಮಿಸಿದ್ದ ಆ ರಾಜ್ಯದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಕಾಶ್ಮೀರಿ ಪಂಡಿತ ಸಮುುದಾಯ ಹಿರಿಯ ಮಹಿಳೆಯೊಂದಿಗೆ ಮಾತನಾಡಿದರು.

ಕಥಕ್ ಸೊಬಗು
ಪ್ರಖ್ಯಾತ ಕಥಕ್ ಡ್ಯಾನ್ಸರ್ ಯಾಸ್ಮಿನ್ ಗೌತಮ್ ಅವರು ಮಧ್ಯಪ್ರದೇಶದ ಖಜುರಾಹೋದಲ್ಲಿ ನಡೆಯುತ್ತಿರುವ ಖಜುರಾಹೋ ಹಬ್ಬದ ಅಂಗವಾಗಿ ರಾಯ್ಪುರದಲ್ಲಿ ನೃತ್ಯ ಕಾರ್ಯಕ್ರಮ ನೀಡಿದರು.

ತಂಡದೊಂದಿಗೆ ನಾಯಕನ ಪಯಣ
ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಯ ಪಂದ್ಯಕ್ಕಾಗಿ ಕೋಲ್ಕತಾಕ್ಕೆ ಆಗಮಿಸಿದ ಜಾರ್ಖಂಡ್ ಕ್ರಿಕೆಟ್ ತಂಡದ ಜತೆ ಕೋಲ್ಕತಾದ ಹೌರಾ ನಿಲ್ದಾಣಕ್ಕೆ ಬಂದಿಳಿದ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡಿದ್ದು ಹೀಗೆ.