ಚಿತ್ರ ಸಂಪುಟ: ಪೋಪ್ ಆಚರಿಸಿದ ಗುಡ್ ಫ್ರೈಡೇ

Posted By:
Subscribe to Oneindia Kannada

ಪುನರಪಿ ಜನನಂ, ಪುನರಪಿ ಮರಣಂ ಎಂಬಂತೆ ಲೋಕದಲ್ಲಿ ಸುದ್ದಿಗಳಿಗೇನೂ ಕೊರತೆಯಿಲ್ಲ. ಸುದ್ದಿಗಳು ಹುಟ್ಟುತ್ತಲೇ ಇರುತ್ತವೆ. ಸಾಯುತ್ತಲೇ ಇರುತ್ತವೆ.

ಗುರುವಾರ ಮಧ್ಯಾಹ್ನದಿಂದ ಶುಕ್ರವಾರ ಮುಂಜಾನೆವರೆಗೆ ವಿಶ್ವದ ನಾನಾ ಭಾಗಗಳಲ್ಲಿ ನಾನಾ ಘಟನೆಗಳು ಜರುಗಿವೆ. ಗುರುವಾರ ಸಂಜೆ ಸಚಿನ್ ತೆಂಡೂಲ್ಕರ್ ಅವರ ಜೀವನಾಧಾರಿತ ಚಿತ್ರವಾದ 'ಸಚಿನ್: ಬಿಲಿಯನ್ ಡ್ರೀಮ್ಸ್' ನ ಟ್ರೈಲರ್ ಕೂಡಾ ಬಿಡುಗಡೆಯಾಯಿತು.

ಗುರುವಾರ ರಾತ್ರಿ ಆಫ್ಘಾನಿಸ್ತಾನದಲ್ಲಿನ ಉಗ್ರರ ಅಡಗುದಾಣದ ಮೇಲೆ ಅಮೆರಿಕ ಬಾಂಬ್ ಹಾಕಿದ ಸುದ್ದಿ ಹಾಗೂ ಐಪಿಎಲ್ ಪಂದ್ಯದ ಗುಂಗಿನಲ್ಲಿದ್ದ ಜನರಿಗೆ ಕೆಲವಾರು ಸುದ್ದಿಗಳು ಕಣ್ತಪ್ಪಿರಬಹುದು.

ಪ್ರಮುಖ ಸುದ್ದಿಗಳ ಜತೆಗೆ ಕಣ್ತಪ್ಪಿದ ಸುದ್ದಿಗಳನ್ನು ಹೆಕ್ಕಿ ಅವರುಗಳ ಫೋಟೋ ಸಮೇತ ಸಂಕ್ಷಿಪ್ತ ಮಾಹಿತಿ ನೀಡುವ ಉದ್ದೇಶದಿಂದ ಇಲ್ಲಿ ಚಿತ್ರ ಸಂಪುಟವನ್ನು ನೀಡಲಾಗಿದೆ.

ಪಾದ ತೊಳೆದ ಪೋಪ್

ಪಾದ ತೊಳೆದ ಪೋಪ್

ಪಾಲಿಯಾನೋ ಡಿಟೆನ್ಷನ್ ಸೆಂಟರ್ ನಲ್ಲಿ ಶುಕ್ರವಾರ ಗುಡ್ ಫ್ರೈಡೇ ನಿಮಿತ್ತ ಏರ್ಪಡಿಸಲಾಗಿದ್ದ ಸಮಾರಂಭವೊಂದರಲ್ಲಿ ಪೋಪ್ ಫ್ರಾನ್ಸಿಸ್ ಅವರು ಭಕ್ತರ ಪಾದ ತೊಳೆದರು.

ಸೇನಾ ಚಿತ್ರ

ಸೇನಾ ಚಿತ್ರ

ಆಫ್ಘಾನಿಸ್ತಾನದಲ್ಲಿನ ಉಗ್ರ ಅಡಗುದಾಣದ ಮೇಲೆ ಅಮೆರಿಕ ಸರ್ಕಾರ ಎಸೆದ 'ಮದರ್ ಆಫ್ ಆಲ್ ಬಾಂಬ್ಸ್' ಎಂದೇ ಪರಿಗಣಿಸಲ್ಪಟ್ಟಿರುವ ಜಿಬಿಯು43/ಬಿ ಬಾಂಬ್ ನ ಛಾಯಾಚಿತ್ರವಿದು. ಅಮೆರಿಕ ಸೇನೆ ಇದನ್ನು ಬಿಡುಗಡೆ ಮಾಡಿದೆ.

ಕಣ್ಮನ ತುಂಬಿದ ದೀಪಗಳ ಸಾಲು

ಕಣ್ಮನ ತುಂಬಿದ ದೀಪಗಳ ಸಾಲು

ಅಮೃತಸರದಲ್ಲಿ ಬೈಸಾಕಿ ಹಬ್ಬವನ್ನು ಗುರುವಾರ ಆಚರಿಸಲಾಯಿತು. ಅಲ್ಲಿನ ಸ್ವರ್ಣ ದೇಗುಲದಲ್ಲಿ ಗುರುವಾರ ರಾತ್ರಿ ಸಿಖ್ ಬಾಂಧವರು ದೀಪಗಳನ್ನು ಹಚ್ಚಿ ಸಂಭ್ರಮಿಸಿದ್ದು ನಯನ ಮನೋಹರವಾಗಿತ್ತು.

ಐಪಿಎಲ್ ಗೆ ರಂಗು

ಐಪಿಎಲ್ ಗೆ ರಂಗು

ಗುರುವಾರ ರಾತ್ರಿ ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 10ರ ಉದ್ಘಾಟನಾ ಸಮಾರಂಭದಲ್ಲಿ (ಕೋಲ್ಕತಾ ತವರಿನ ಉದ್ಘಾಟನಾ ಸಮಾರಂಭ) ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನೃತ್ಯ ಮಾಡಿ ಜನರನ್ನು ರಂಜಿಸಿದರು.

ಟ್ರೈಲರ್ ಬಿಡುಗಡೆ

ಟ್ರೈಲರ್ ಬಿಡುಗಡೆ

ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಜೀವನಾಧಾರಿತ 'ಸಚಿನ್: ಬಿಲಿಯನ್ ಡ್ರೀಮ್ಸ್' ಚಿತ್ರದ ಟ್ರೈಲರ್ ಮುಂಬೈನಲ್ಲಿ ಗುರುವಾರ ಸಂಜೆ ಬಿಡುಗಡೆಯಾಯಿತು. ಸಮಾರಂಭದಲ್ಲಿ ಹಾಜರಿದ್ದ ಸಚಿನ್, ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Among all the news from Thursday evening to Friday afternoon, some important news grabbed the attension of ther readers. Bombing on ISIS territory by America, Sachin movie trailer release are few among them. Here are some importand photos related some other news also.
Please Wait while comments are loading...