ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹಕ್ಕೆ ಕಾರಣವಾದ ಸೋಮಾಲಿ ಜೆಟ್‌ ಚಂಡ ಮಾರುತ ಎಂದರೇನು?

By Nayana
|
Google Oneindia Kannada News

Recommended Video

ಕೊಡಗು ಕೇರಳ ಪ್ರವಾಹಕ್ಕೆ ಕಾರಣವಾದ ಸೋಮಾಲಿ ಜೆಟ್ ಚಂಡಮಾರುತ ಎಂದರೇನು? | Oneindia Kannada

ಬೆಂಗಳೂರು, ಆಗಸ್ಟ್ 22: ಕೇರಳ ಹಾಗೂ ಕೊಡಗು ಪ್ರವಾಹಕ್ಕೆ ಕಾರಣವಾಗಿದೆ ಎನ್ನಲಾದ ಸೋಮಾಲಿ ಜೆಟ್‌ ಚಂಡಮಾರುತ ಎಂದರೇನು? ಅದರ ಲಕ್ಷಣಗಳೇನು ಎನ್ನುವುದನ್ನು ನೋಡೋಣ.

ಕೊಡಗು, ಕೇರಳ ಪ್ರವಾಹ, ಭೂ ಕುಸಿತಕ್ಕೆ ಸೋಮಾಲಿ ಜೆಟ್‌ ಚಂಡ ಮಾರುತ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆಫ್ರಿಕಾದ ಮಡಗಾಂಸ್ಕರ್ ನಲ್ಲಿ ಸಂಭವಿಸಿದ ಚಂಡಮಾರುತ 'ಸೋಮಾಲಿ ಜೆಟ್'ಒಡಿಶಾದ ಬಂಗಾಳ ಕೊಲ್ಲಿಯ ತೀರದಲ್ಲಿ ವಾಯುಭಾರ ಕುಸಿತ ಮತ್ತು ಮುಂಗಾರು ಪ್ರವೇಶ ಜತೆಯಾಗಿ ಸಂಭವಿಸಿದ್ದರಿಂದ ಈ ರೀತಿಯಾಗಿ ಕೇರಳ, ಕೊಡಗಿನಲ್ಲಿ ಭಾರೀ ಮಳೆಗೆ ಕಾರಣವಾಯ್ತು ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.

ಕೇರಳ, ಕೊಡಗು ಪ್ರವಾಹಕ್ಕೆ 'ಸೋಮಾಲಿ ಜೆಟ್‌' ಕಾರಣ: ಸ್ಫೋಟಕ ಮಾಹಿತಿ ಕೇರಳ, ಕೊಡಗು ಪ್ರವಾಹಕ್ಕೆ 'ಸೋಮಾಲಿ ಜೆಟ್‌' ಕಾರಣ: ಸ್ಫೋಟಕ ಮಾಹಿತಿ

ಹಲವು ಅಂಕಿ ಅಂಶಗಳನ್ನು, ವೈಜ್ಞಾನಿಕ ಲೆಕ್ಕಾಚಾರಗಳನ್ನು ಹಾಕಿಯೇ ಹವಾಮಾನ ತಜ್ಞರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಆದರೆ ಇದನ್ನು ಹವಾಮಾನ ಇಲಾಖೆ ಮೊದಲೇ ಗುರುತಿಸಲು ವಿಫಲವಾಗಿ ಈ ಪ್ರಕೃತಿ ವಿಕೋಪದಿಂದ ಅನಾಹುತಗಳು ಹೆಚ್ಚಾದವು ಎನ್ನಲಾಗಿದೆ

Somali jet cyclone, creator of western monsoon!

ಇದು ಆಫ್ರಿಕಾದಲ್ಲಿ ಮೇ ತಿಂಗಳಿನಲ್ಲಿ ಕಾಣಿಸಿಕೊಂಡರೆ ಅರೇಬಿಯನ್‌ ಸಮುದ್ರದಲ್ಲಿ ಜೂನ್‌ ನಂತರ ಕಾಣಿಸಿಕೊಳ್ಳುತ್ತದೆ. ಪೋಲಾರ್‌ ಜೆಟ್‌ ಹಾಗೂ ಸಬ್‌ ಟ್ರಾಫಿಕಲ್‌ ಜೆಟ್‌ ಎರಡೂ ಶಾಶ್ವತ ಜೆಟ್‌ ಸ್ಟ್ರೀಮ್ಸ್‌ ಎನಿಸಿಕೊಂಡಿವೆ ಇವುಗಳು ಸಮಶೀತೋಷ್ಣ ವಲಯದ ಹವಾಮಾನದ ಮೇಲೆ ಪರಿಣಾಮ ಬೀರುತ್ತವೆ. ಈ ಚಂಡ ಮಾರುತ ಸಂಭವಿಸಿದಾಗ ಗಾಳಿಯು 94 ಕೆಎಂಪಿಎಚ್‌ ವೇಗದಲ್ಲಿ ಒಮ್ಮೊಮ್ಮೆ ಮೇಲ್ಮುಖ, ಇನ್ನೊಮ್ಮೆ ಕೆಳಮುಖ ಇನ್ನೂ ಕೆಲವೊಮ್ಮೆ ಭೂಮಿ ಆಳದಲ್ಲಿ ವೇಗವಾಗಿ ಚಲಿಸುತ್ತದೆ.

ಹಾಗೆಯೇ ಕೇರಳ ಮತ್ತು ಕೊಡಗಿನಲ್ಲಿ ಚಂಡಮಾರುತ ಭೂಮಿಯ ಆಳದಿಂದ ವೇಗವಾಗಿ ಚಲಿಸಿರುವ ಕಾರಣ ಭೂಕುಸಿತ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಇದು ಒಂದು ಗಂಟೆಗೆ 14 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಇದು ಸೋಮಾಲಿಯಾದಲ್ಲಿ ಹುಟ್ಟಿಕೊಂಡಿರುವ ಚಂಡಮಾರುತವಾದ ಕಾರಣ ಇದಕ್ಕೆ ಸೋಮಾಲಿ ಜೆಟ್‌ ಎಂದು ಕರೆಯುತ್ತಾರೆ.

ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ

ಅದರಲ್ಲಿ ಸೋಮಾಲಿ ಜೆಟ್‌ ಮತ್ತು ಆಫ್ರಿಕನ್‌ ಈಸ್ಟರ್ಲಿ ಜೆಟ್, ಟ್ರಾಪಿಕಲ್‌ ಈಸ್ಟರ್ಲಿ ಜೆಟ್‌ ಪ್ರಮುಖವಾದವು. ಈ ಎರಡು ಚಂಡಮಾರುತಗಳು ಭಾರತದ ಮುಂಗಾರು ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೃಋತ್ಯ ಮುಂಗಾರು ಕೀನ್ಯಾ, ಸೋಮಾಲಿಯಾ ಮತ್ತು ಸಹೇಲ್‌ಗಳ ಮೂಲಕ ಭಾರತಕ್ಕೆ ಸಂಚರಿಸುತ್ತದೆ.

ಇದು ಮಾರಿಷಸ್‌ ಐಲ್ಯಾಂಡ್‌ನ ಕೆಲವು ಪ್ರದೇಶ, ಮಡಗಾಸ್ಕರ್‌ ಮೂಲಕ 3ಡಿಗ್ರಿ ಸೆಲ್ಸಿಯಸ್‌ನೊಂದಿಗೆ ಕೀನ್ಯಕ್ಕೆ ಸಂಚರಿಸುತ್ತದೆ. ಇದು ಮಡಗಾಸ್ಕರ್‌ನಲ್ಲಿ ಪ್ರಭಲವಾಗಿರುವ ಚಂಡಮಾರುತವಾಗಿದ್ದು, ಭಾರತಕ್ಕೆ ನೈಋತ್ಯ ಮುಂಗಾರು ಪ್ರವೇಶಕ್ಕೆ ಇದು ಕಾರಣೀಭೂತವಾಗುತ್ತದೆ. ಈ ಸೋಮಾಲಿ ಚಂಡಮಾರುತ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತದೆ. ಚಳಿಗಾಲದಲ್ಲಿ ಅರೇಬಿಯನ್‌ ಸಮುದ್ರದಿಂದ ಉತ್ತರ ದಿಕ್ಕಿನಿಂದ ದಕ್ಷಿಣದ ಕಡೆಗೆ ಚಲಿಸುತ್ತದೆ, ಅದೇ ಬೇಸಿಗೆಯಲ್ಲಿ ದಕ್ಷಿಣದಿಂದ ಉತ್ತರಕ್ಕೆ ವಿರುದ್ಧ ಮುಖವಾಗಿ ಚಲಿಸುತ್ತದೆ.

English summary
Somali jet cyclone and African eastern jet are the main waves of wind to create south western monsoon which brings rain to India. Here is the details about.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X