• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಯಾಚಿನ್ ನಲ್ಲಿನ ಯೋಧರು ಸ್ನಾನಕ್ಕಾಗಿ ಇನ್ನು 90 ದಿನ ಕಾಯಬೇಕಿಲ್ಲ

|

ಸಿಯಾಚಿನ್ ನಲ್ಲಿ ಕಾರ್ಯ ನಿರ್ವಹಿಸುವ ಯೋಧರು ಇನ್ನು ಸ್ನಾನಕ್ಕಾಗಿ ಮೂರು ತಿಂಗಳು ಕಾಯುವ ಅಗತ್ಯ ಬರುವುದಿಲ್ಲ. ಸದ್ಯಕ್ಕೆ ಮೂರು ತಿಂಗಳ ಅವರ ಕಾರ್ಯ ನಿರ್ವಹಣೆ ಅವಧಿಯಲ್ಲಂತೂ ಸ್ನಾನ ಸಾಧ್ಯವೇ ಇಲ್ಲ. ಏಕೆಂದರೆ, 21,700 ಅಡಿ ಎತ್ತರದ ಆ ಪ್ರದೇಶದಲ್ಲಿ ನೀರು ಸಿಗುವುದೇ ಪರಮ ದುರ್ಲಭ.

ಯೋಧರಿಗೆ ದೇಶಿ ನಿರ್ಮಿತ ನೀರಿಲ್ಲದಂತಹ ದೇಹ ನೈರ್ಮಲ್ಯ ಉತ್ಪನ್ನಗಳನ್ನು ಒದಗಿಸಲಾಗುತ್ತದೆ. ಭಾರತ -ಚೀನಾ ಮಧ್ಯದ ವಿವಾದಿತ ಗಡಿ ಪ್ರದೇಶದ ಕಾವಲು ಹೊಣೆಯನ್ನು ಕೋಲ್ಕತ್ತಾ ಮೂಲದ ಈಸ್ಟರ್ನ್ ಕಮ್ಯಾಂಡ್ ವಹಿಸಿಕೊಂಡಿದೆ. ಈಗಾಗಲೇ ಉತ್ಪನ್ನದ ಪರೀಕ್ಷೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ನೆಲ ಗುಡಿಸಿ ಒರೆಸುವುದಕ್ಕೂ ಸಿದ್ಧ : ಯೋಧ ಹನುಮಂತಪ್ಪನ ಹೆಂಡತಿ

ಸಿಯಾಚಿನ್ ನಲ್ಲಿ ಭಾರತದ ಮೂರು ಸಾವಿರದಷ್ಟು ಯೋಧರನ್ನು ಯಾವಾಗಲೂ ನೇಮಕ ಮಾಡಲಾಗುತ್ತದೆ. ಇಲ್ಲಿನ ತಾಪಮಾನ ಮೈನಸ್ ಅರವತ್ತು ಡಿಗ್ರಿವರೆಗೆ ತಲುಪುತ್ತದೆ. ಇಲ್ಲಿ ರಕ್ಷಣೆಗಾಗಿಯೇ ದಿನಕ್ಕೆ ಐದರಿಂದ ಏಳು ಕೋಟಿ ರುಪಾಯಿ ಖರ್ಚು ತಗುಲುತ್ತದೆ.

ಚೀನಾದೊಂದಿಗೆ ಈಶಾನ್ಯದಲ್ಲಿ ಗಡಿ ಕಾವಲು ಕಾಯುತ್ತಿರುವ ಸೈನಿಕರು ನೀರುರಹಿತವಾದ ಸ್ನಾನ ಉತ್ಪನ್ನವು ಬಹಳ ಪ್ರಯೋಜನಕಾರಿ ಎಂದು ಕಂಡುಕೊಂಡರು. ಆ ಸೈನಿಕರ ಅಭಿಪ್ರಾಯವನ್ನು ಕೇಳಿದ ನಂತರ ಈಸ್ಟರ್ನ್ ಕಮ್ಯಾಂಡ್ ಕೂಡ ಇವೇ ಉತ್ಪನ್ನಗಳನ್ನು ಸಾವಿರಾರು ಬಾಟಲ್ ನಷ್ಟು ಆರ್ಡರ್ ಮಾಡಿದ್ದಾರೆ. ಸಿಯಾಚಿನ್ ಸೇರಿದಂತೆ ಎತ್ತರದ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಇದರಿಂದ ಅನುಕೂಲ ಆಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನೂರಾ ಇಪ್ಪತ್ತೆಂಟು ಕಿ.ಮೀ. ಪ್ರಯಾಣಕ್ಕೆ ಇಪ್ಪತ್ತೆಂಟು ದಿನ

ನೂರಾ ಇಪ್ಪತ್ತೆಂಟು ಕಿ.ಮೀ. ಪ್ರಯಾಣಕ್ಕೆ ಇಪ್ಪತ್ತೆಂಟು ದಿನ

ಎಂಬತ್ತು ಪರ್ಸೆಂಟ್ ನಷ್ಟು ಸೇನಾ ನೆಲೆಗಳು ಹದಿನಾರು ಸಾವಿರ ಅಡಿಗೂ ಎತ್ತರದಲ್ಲಿವೆ. ಬಾನಾ ಅಂತೂ ಇಪ್ಪತ್ತೊಂದು ಸಾವಿರ ಅಡಿಗೂ ಮೇಲಿದೆ.ಕೆಲವು ಹಿಮಪ್ರದೇಶಗಳಿಗೆ ನೂರಾ ಇಪ್ಪತ್ತೆಂಟು ಕಿ.ಮೀ. ಪ್ರಯಾಣ ಮಾಡಲು ಯೋಧರು ಇಪ್ಪತ್ತೆಂಟು ದಿನ ಪ್ರಯಾಣಿಸಬೇಕು. ಇದು ಈ ಗ್ರಹದ ಮೇಲಿರುವ ಕ್ಲಿಷ್ಟಕರವಾದ ಪ್ರದೇಶ.

ತೊಂಬತ್ತು ದಿನಗಳ ಕಾಲ ಸ್ನಾನ ಇಲ್ಲ

ತೊಂಬತ್ತು ದಿನಗಳ ಕಾಲ ಸ್ನಾನ ಇಲ್ಲ

ಹಿಮಪ್ರದೇಶದ ಕಾವಲಿಗೆ ನೇಮಿಸಿದ ಸೈನಿಕರು ತೊಂಬತ್ತು ದಿನಗಳ ಕಾಲ ಸ್ನಾನ ಇಲ್ಲದೆ ಹಾಗೇ ಇರುತ್ತಾರೆ. ಇನ್ನು ಮುಂದೆ ಹಾಗೆ ಆಗಲ್ಲ. ನೀರು ರಹಿತವಾದ ಈ ಉತ್ಪನ್ನದ ನೆರವಿನಿಂದ ಕನಿಷ್ಠ ವಾರಕ್ಕೆ ಎರಡು ಬಾರಿಯಾದರೂ ಸ್ನಾನ ಮಾಡಲು ಆಗುತ್ತದೆ. ಇಪ್ಪತ್ತು ಮಿ.ಲೀ.ಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದ ಜೆಲ್ ನಿಂದ ಇಡೀ ದೇಹದ ಸ್ನಾನ ಆಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಭರಣ ಮಾರಿ ಸಿಯಾಚಿನ್ ನಲ್ಲಿ ಆಕ್ಸಿಜನ್ ಪ್ಲಾಂಟ್ ರಚಿಸಲು ಹೊರಟ ದಂಪತಿ

ನವದೆಹಲಿಯ ಐಐಟಿ ಉತ್ಪನ್ನವನ್ನು ಅಭಿವೃದ್ಧಿಗೊಳಿಸಿದೆ

ನವದೆಹಲಿಯ ಐಐಟಿ ಉತ್ಪನ್ನವನ್ನು ಅಭಿವೃದ್ಧಿಗೊಳಿಸಿದೆ

ಎರಡು ವರ್ಷದ ಹಿಂದೆ ಆರ್ಮಿ ಡಿಸೈನ್ ಬ್ಯುರೋ (ಎಡಿಬಿ) ಎಂಬುದನ್ನು ಆರಂಭಿಸಿ, ಸೈನಿಕರ ಅಗತ್ಯಗಳನ್ನು ತಿಳಿದುಕೊಂಡು, ಉತ್ಪನ್ನಗಳ ಸಂಶೋಧನೆ ಹಾಗೂ ಅಭಿವೃದ್ಧಿಗೆ ಪ್ರೋತ್ಸಾಹಿಸಲು ಮತ್ತು ಖಾಸಗಿ ಸಂಸ್ಥೆಗಳ ಜತೆಗೆ ಮಾತುಕತೆ ನಡೆಸಿ, ಸೈನ್ಯದ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿ ನೀಡಲಾಯಿತು. ಈ ರೀತಿಯ ನೀರುರಹಿತವಾದ ದೇಹ ಸ್ವಚ್ಛಗೊಳಿಸುವ ಉತ್ಪನ್ನವನ್ನು ನವದೆಹಲಿಯ ಐಐಟಿ ಅಭಿವೃದ್ಧಿಗೊಳಿಸಿದೆ.

ನೂರಾ ಮೂವತ್ತು ಸಮಸ್ಯೆಗಳ ಪಟ್ಟಿ

ನೂರಾ ಮೂವತ್ತು ಸಮಸ್ಯೆಗಳ ಪಟ್ಟಿ

ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಲು ಇದು ತುಂಬ ಒಳ್ಳೆ ನಿರ್ಧಾರ. ಸಿಯಾಚಿನ್ ನಲ್ಲಿ ಮಂಜು ಕರಗಿಸಿ, ನೀರು ಮಾಡಿಕೊಳ್ಳಲು ಬಹಳ ಇಂಧನ ಬೇಕು ಮತ್ತು ಅದು ಸಾಧ್ಯವಿಲ್ಲದ ವಿಷಯ ಎಂದು ಅದಾಗಲೇ ಸಿಯಾಚಿನ್ ನಲ್ಲಿ ಕಾರ್ಯ ನಿರ್ವಹಿಸಿ ಅನುಭವ ಇರುವ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ. ಈ ವರೆಗೆ ಸೈನಿಕರು ಎದುರಿಸುತ್ತಿರುವ ನೂರಾ ಮೂವತ್ತು ಸಮಸ್ಯೆಗಳನ್ನು ಎಡಿಬಿಯಿಂದ ಗುರುತಿಸಲಾಗಿದೆ. ಆ ಪೈಕಿ ಇಪ್ಪತ್ತೈದು ಸಮಸ್ಯೆಗಳಿಗೆ ಪರಿಹಾರ ಕೂಡ ಕಂಡುಹಿಡಿಯಲಾಗಿದೆ.

English summary
Soldiers deployed on the Siachen glacier may soon be able to bathe, a luxury they cannot currently afford during their three-month stay at posts located at heights of up to 21,700 feet as water is a scarce resource.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X