• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಸೋಲಾರ್' ಸರಿತಾಗೆ ಗಿಣಿಪಾಠ ಹೇಳಿಕೊಟ್ಟ ಆಡಿಯೋ ಲೀಕ್

By Mahesh
|

ತಿರುವನಂತಪುರಂ, ಜ.28: ಸೋಲಾರ್ ಹಗರಣದ ಶಾಖ ತಟ್ಟಿಸಿಕೊಂಡು ಒದ್ದಾಡುತ್ತಿರುವ ಕೇರಳ ಸರ್ಕಾರಕ್ಕೆ ಮತ್ತೊಂದು ಶಾಕ್ ತಗುಲಿದೆ. ಬಹುಕೋಟಿ ಸೌರಶಕ್ತಿ ಯೋಜನೆಯ ಲಂಚ ಪ್ರಕರಣದ ಆರೋಪಿ ಸೋಲಾರ್ ಹಗರಣದ ಪ್ರಮುಖ ಆರೋಪಿಯಾಗಿರುವ ಸರಿತಾ ನಾಯರ್ ಅವರು ನ್ಯಾಯಾಂಗ ಸಮಿತಿ ಮುಂದೆ ಹಾಜರಾಗುವುದಕ್ಕೂ ಮುನ್ನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜತೆ ಮಾತನಾಡಿದ್ದ ಆಡಿಯೋ ಸೋರಿಕೆಯಾಗಿದೆ.

ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಅವರ ಕ್ಯಾಬಿನೆಟ್ ಸದಸ್ಯರಿಗೆ 1.90 ಕೋಟಿ ರು ಲಂಚ ನೀಡಿರುವುದಾಗಿ ನ್ಯಾಯಾಂಗ ಸಮಿತಿ ಮುಂದೆ ಹೇಳಿಕೆ ನೀಡಿದ್ದು, ಯಾವುದೇ ತನಿಖೆಗೆ ಸಿದ್ಧ ಸಮಿತಿ ಮುಂದೆ ಹಾಜರಾಗುತ್ತೇನೆ ಎಂದು ಉಮ್ಮನ್ ಚಾಂಡಿ ಹೇಳಿದ್ದು...[ಸೋಲಾರ್ ಹಗರಣ: ಉಮ್ಮನ್ ಚಾಂಡಿ ವಿರುದ್ಧ ಎಫ್ಐಆರ್ ?]

ನನ್ನ ಅಮ್ಮನಿಗೂ ಬೆದರಿಕೆ ಒಡ್ಡಿ ಲಂಚ ಪಡೆದಿದ್ದಾರೆ ಎಂದು ಸರಿತಾ ಮತ್ತೆ ಆರೋಪಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ತ್ರಿಶೂರಿನ ವಿಜಿಲೆನ್ಸ್ ಕೋರ್ಟ್, ಉಮ್ಮನ್ ಚಾಂಡಿ ಹಾಗೂ ಇಂದನ ಸಚಿವ ಮೊಹಮ್ಮದ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ನಿರ್ದೇಶಿಸಿದ್ದು ನಂತರದ ಬೆಳವಣಿಗೆಯಾಗಿದೆ.[ಸೋಲಾರ್ ಹಗರಣ: ಸೆಕ್ಸ್ ಆಫರ್ ಬದಲಿಗೆ ಕೋಟಿ ರು ಲಂಚ?]

ಇದಕ್ಕೂ ಮುನ್ನ ನಡೆದ ಸಂಭಾಷಣೆಯ ಆಡಿಯೋ ಬುಧವಾರ ಕೇರಳದ ಪ್ರಮುಖ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇದರಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಥಾಂಪನೂರ್ ಎಸ್ ರವಿ ಅವರು ಹೇಗೆ ಸರಿತಾ ನಾಯರ್ ಗೆ ಪಾಠ ಮಾಡುತ್ತಾರೆ. ನ್ಯಾಯಾಂಗ ಸಮಿತಿಯ ಮುಂದೆ ಏನು ಮಾತನಾಡಬೇಕು, ಹಣ ಸಂದಾಯ ವಿಷ್ಯ ಏನು ಹೇಳಬೇಕು ಎಂಬುದನ್ನು ಹೇಳಿಕೊಡುತ್ತಾರೆ. ಫೋನ್ ಸಂಭಾಷಣೆ ನಡೆದಿರುವುದನ್ನು ಇಬ್ಬರು ಒಪ್ಪಿಕೊಂಡಿದ್ದಾರೆ.

ಸಂಭಾಷಣೆಯ ಸಾರಾಂಶ ಹೀಗಿದೆ

ಸಂಭಾಷಣೆಯ ಸಾರಾಂಶ ಹೀಗಿದೆ

ರವಿ: ಸರಿತಾ, ನಿಮಗೆ ಉತ್ತರ ನೀಡಲು ಕಷ್ಟವಾಗುವುದಿಲ್ಲ ಎಂದುಕೊಂಡಿದ್ದೇನೆ. ನೀನು ಸಿಎಂ ಚಾಂಡಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿಲ್ಲ ಎಂದು ಹೇಳಿದರೆ ಸಾಕು.

ಸರಿತಾ: ಓಕೆ.

ರವಿ: ಎರಡು ಬಾರಿ ಕಚೇರಿಯಲ್ಲಿ ಹಾಗೂ ಮತ್ತೊಮ್ಮೆ ವೇದಿಕೆಯಲ್ಲಿ. ನೀನು ನಮ್ಮ ಜನರನ್ನು ಗುರುತಿಸಬೇಕು. ಹುಷಾರಾಗಿರಬೇಕು.

ಸರಿತಾ: ಓಕೆ, ಓಕೆ, ನನ್ನ ಹೇಳಿಕೆ ನಾಳೆ ದಾಖಲಿಸುತ್ತಿದ್ದೇನೆ.

ಸಹ ಆರೋಪಿ ಬಿಜು ಬಗ್ಗೆ ಸರ್ಕಾರಕ್ಕೆ ಭಯ

ಸಹ ಆರೋಪಿ ಬಿಜು ಬಗ್ಗೆ ಸರ್ಕಾರಕ್ಕೆ ಭಯ

ಸರಿತಾ: ಬಿಜು (ಸಹ ಆರೋಪಿ ಬಿಜು ರಾಧಾಕೃಷ್ಣನ್, ಸರಿತಾರನ್ನು ಸೆಕ್ಸ್ ಆಫರ್ ಕೇಳಿದ ಕೇರಳ ಸರ್ಕಾರ ಎಂದು ಆರೋಪಿಸಿದವ)ಕ್ರಾಸ್ ಎಕ್ಸಾಮಿನೇಷನ್ ಬಂದರೆ

ರವಿ: ಹೌದು, scoundrel, ತೊಂದರೆ ಉಂಟು ಮಾಡಬಹುದು. ಹೀಗಾಗಿ ಸೇಫ್ ಆಗಿ ಹೇಳಿಕೆ ನೀಡಬೇಕು.

ಸರಿತಾ: ಓಕೆ ಸಾರ್ ಅರ್ಥವಾಯಿತು

ರವಿ: ಯಾವತ್ತು ನೀನು ಹೇಳಿಕೆ ಕೊಡುತ್ತಿರುವುದು ನಾಳೆನಾ?

ಸರಿತಾ: ಹೌದು ನಾಳೆ ಸಾರ್...

ನೀನು ಬರೆದ ಪತ್ರದ ಬಗ್ಗೆ ಏನು ಹೇಳುತ್ತೀಯ?

ನೀನು ಬರೆದ ಪತ್ರದ ಬಗ್ಗೆ ಏನು ಹೇಳುತ್ತೀಯ?

ರವಿ: ಇವತ್ತಿನ ಮಾತೃಭೂಮಿ ಪತ್ರಿಕೆ ಮೊದಲು ಓದಿಕೊಂಡು ಹೋಗು

ಸರಿತಾ: ಸರಿ ಸಾರ್, ಒಂದು ವೆಬ್ ಸೈಟ್ ನಲ್ಲಿ ಚಾಂಡಿ ಅವರ ಪೂರ್ತಿ ಪ್ರತಿಕ್ರಿಯೆ ಪ್ರಕಟವಾಗಿದೆ.

ರವಿ: ಪತ್ರದ ಬಗ್ಗೆ ಏನು ಹೇಳುತ್ತೀಯ (ಪಥನತಿಟ್ಟ ಜೈಲಿನಲ್ಲಿದ್ದಾಗ ಸರಿತಾ ತನ್ನ ವಕೀಲರಿಗೆ 21 ಪುಟಗಳ ಪತ್ರ ಬರೆದಿದ್ದರು. ಅದರಲ್ಲಿ ಅನೇಕ ವಿಐಪಿಗಳು, ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರು ಪ್ರಸ್ತಾಪಿಸಲಾಗಿತ್ತು)

ಪತ್ರಕ್ಕೆ ತಡೆಯಾಜ್ಞೆ ಸಿಕ್ಕಿದೆ ಡೋಂಟ್ ವರಿ

ಪತ್ರಕ್ಕೆ ತಡೆಯಾಜ್ಞೆ ಸಿಕ್ಕಿದೆ ಡೋಂಟ್ ವರಿ

ಸರಿತಾ: ಆ ಪತ್ರಕ್ಕೆ ತಡೆಯಾಜ್ಞೆ ನೀಡಲಾಗಿದೆ (ಕೇರಳ ಹೈಕೋರ್ಟ್ ತಡೆ ನೀಡಿದೆ ಹೀಗಾಗಿ ನ್ಯಾಯಾಂಗ ಸಮಿತಿ ಮುಂದೆ ಈ ಬಗ್ಗೆ ಹೇಳಬೇಕಾಗಿಲ್ಲ)

ರವಿ: ಮತ್ತೇ ಏನು ಹೇಳುತ್ತೀಯ?

ಸರಿತಾ: ಅದು ವೈಯಕ್ತಿಕ ವಿಷಯ. ಅದಕ್ಕೂ ಈ ಹಗರಣಕ್ಕೂ ಸಂಬಂಧವಿಲ್ಲ. ನಾನು ಯಾರ ಹೆಸರನ್ನು ಹೇಳುವುದಿಲ್ಲ. ಅವರು ಕೂಡಾ ಪ್ರಶ್ನಿಸುವಂತಿಲ್ಲ.

ಸರ್ಕಾರಿ ವಕೀಲರನ್ನು ನೇರ ಭೇಟಿ ಮಾಡು

ಸರ್ಕಾರಿ ವಕೀಲರನ್ನು ನೇರ ಭೇಟಿ ಮಾಡು

ಕೊನೆಗೆ ಸರ್ಕಾರಿ ವಕೀಲರಿಗೆ ಫೋನ್ ಕರೆ ಮಾಡಿ ಸಲಹೆ ಪಡೆದು ನಂತರ ಸಮಿತಿ ಮುಂದೆ ಚಾಂಡಿ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ರವಿ ಸೂಚಿಸುತ್ತಾರೆ. ಆದರೆ, ಫೋನ್ ಟ್ಯಾಪ್ ಆಗುವ ಸಾಧ್ಯತೆಯಿದೆ ಹೀಗಾಗಿ ನಾನು ನೇರ ಭೇಟಿ ಮಾಡುತ್ತೇನೆ ಎಂದು ಸರಿತಾ ಫೋನ್ ಕಟ್ ಮಾಡುತ್ತಾರೆ. ಈ ಸಂಭಾಷಣೆಯ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಉಮ್ಮನ್ ಚಾಂಡಿ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆ, ರಸ್ತೆ ತಡೆ ಅನೇಕ ಕಡೆ ನಡೆದಿದೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Television channels in Kerala Wednesday aired the audio of a purported conversation between Congress state general secretary Thampanoor Ravi and ‘solar scam’ accused Saritha S Nair in which Ravi can be heard tutoring her ahead of her deposition before a judicial commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more