ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನನಗೆ ಗಲ್ಲು ಶಿಕ್ಷೆ ಕೊಡಿ' ಎಂದ 'ಸೋಲಾರ್' ಅಪರಾಧಿ

By Mahesh
|
Google Oneindia Kannada News

ತಿರುವನಂತಪುರಂ, ಜ.24: ಕೇರಳದಲ್ಲಿ ಭಾರಿ ಗದ್ದಲ ಎಬ್ಬಿಸಿರುವ ಸೋಲಾರ್ ಹಗರಣದ ರುವಾರಿ ಬಿಜು ರಾಧಾಕೃಷ್ಣನ್ ಅವರು ಪತ್ನಿ ಹತ್ಯೆ ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಪಡೆದುಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಬಿಜು ಅವರ ತಾಯಿ ರಾಜಾಮ್ಮಲ್ ಅವರಿಗೆ ಮೂರು ವರ್ಷ ಜೈಲುಶಿಕ್ಷೆ ಹಾಗೂ 50 ಸಾವಿರ ರು ದಂಡ ಹಾಕಲಾಗಿದೆ.

ಕೊಲ್ಲಂ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾ. ಅಶೋಕ್ ಮೆನನ್ ಅವರು ಶುಕ್ರವಾರ ಈ ಮಹತ್ವದ ತೀರ್ಪು ನೀಡಿದ್ದಾರೆ. 'ನನಗೆ ಗಲ್ಲು ಶಿಕ್ಷೆ ಕೊಡಿ' ಎಂದು ಕೋರ್ಟಿನಲ್ಲಿ ಬಿಜು ಮನವಿ ಮಾಡಿಕೊಂಡ ಪ್ರಸಂಗವೂ ವರದಿಯಾಗಿದೆ.

ಬಿಜು ಅವರ ತಾಯಿ ರಾಜಾಮ್ಮಲ್ ವೃತ್ತಿಯಿಂದ ಶಿಕ್ಷಕಿಯಾಗಿದ್ದು, ಸಮಾಜದ ತಪ್ಪುಗಳನ್ನು ತಿದ್ದುವ ಕಾರ್ಯ ಮಾಡದೇ ಸೊಸೆಗೆ ಕಿರುಕುಳ ನೀಡಿ ಹತ್ಯೆಗೆ ಸಹಕಾರಿಸಿದ್ದು ಘೋರ ಅಪರಾಧ ಎಂದು ನ್ಯಾ. ಅಶೋಕ್ ಮೆನನ್ ಹೇಳಿದ್ದಾರೆ.

ಐಪಿಸಿ ಸೆಕ್ಷನ್ 302, 201, 323, 323 ಹಾಗೂ 498 ಎ ಹಾಗೂ 34ರ ಅನ್ವಯ ಬಿಜು ವಿರುದ್ಧ ಪ್ರಕರಣ ದಾಖಲಾಗಿತ್ತು. ರಾಜಾಮ್ಮಳ್ ವಿರುದ್ಧ 498ಎ ಹಾಗೂ 34ರ ಅನ್ವಯ ಕೇಸು ಹಾಕಲಾಗಿತ್ತು. ಗುರುವಾರ ಬಿಜು ಹಾಗೂ ರಾಜಾಮ್ಮಳ್ ಅವರ ಅಪರಾಧ ಸಾಬೀತಾಗಿತ್ತು. ಶುಕ್ರವಾರ(ಜ.24) ತೀರ್ಪು ಹೊರಬಿದ್ದಿದೆ. ಈ ನಡುವೆ ಬಹುಕೋಟಿ ಸೋಲಾರ್ ಹಗರಣದ ವಿಚಾರಣೆ ಇನ್ನೂ ನಡೆದಿದೆ. ಬಿಜುಗೆ ಸೋಲಾರ್ ಹಗರಣದಲ್ಲೂ ಸೋಲುಂಟಾಗುತ್ತಾ? ಸಿಎಂ ಉಮ್ಮನ್ ಚಾಂಡಿ ಬಚಾವಾಗಿದ್ದು ಹೇಗೆ? ನಟಿ ಶಾಲು ಮೆನನ್, ಸರಿತಾ ಮೆನನ್ ಪಾತ್ರವೇನು?ಮುಂದೆ ಓದಿ..

ಸೋಲಾರ್ ಪ್ರಕರಣ ರುವಾರಿ ಬಿಜುಗೆ ಜೀವಾವಧಿ

ಸೋಲಾರ್ ಪ್ರಕರಣ ರುವಾರಿ ಬಿಜುಗೆ ಜೀವಾವಧಿ

ಬಿಇಡ್ ವಿದ್ಯಾರ್ಥಿನಿಯಾಗಿದ್ದಾಗ ಬಿಜು ಮನೆಯಲ್ಲೇ ರಶ್ಮಿ ಉಳಿದುಕೊಂಡಿದ್ದರು. ರಾಜಾಮ್ಮಳ್ ಅವರು ಶಿಕ್ಷಕಿಯಾಗಿದ್ದರಿಮ್ದ ಮನೆಯಲ್ಲಿ ಒಬ್ಬರೇ ಇರುತ್ತಿದ್ದರಿಂದ ರಶ್ಮಿ ಕುಲಕ್ಕಡಾದಲ್ಲೇ ನೆಲೆಸಿದ್ದಳು.

ರಶ್ಮಿ ಮನೆಯವರು ಬಿಜು ಜತೆ ಮದುವೆಗೆ ವಿರೋಧಿಸಿದ್ದರೂ ಆದರೂ 2001ರಲ್ಲಿ ಬಿಜು ಮದುವೆಯಾಗಿದ್ದ. ಇಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ತಾಯಿ ಕೊಲೆಗೆ ಸಾಕ್ಷಿಯಾದರೂ ಅಪ್ರಾಪ್ತ ವಯಸ್ಕರಾಗಿದ್ದಾರೆ. 2006ರ ಫೆ.4-5 ರ ರಾತ್ರಿ ವೇಳೆ ರಶ್ಮಿ ಕೊಲೆಯಾಗಿದೆ ಮೊದಲಿಗೆ ಕೊಟ್ಟರಾಕಾರ ಪೊಲೀಸರು ಇದು ಆತ್ಮಹತ್ಯೆ ಪ್ರಕರಣ ಎಂದು ಷರಾ ಬರೆದುಬಿಟ್ಟಿದ್ದರು. ಆದರೆ, ನಂತರ 12 ಮಂದಿ ತನಿಖಾ ಅಧಿಕಾರಿಗಳು ಈ ಪ್ರಕರಣದ ಸತ್ಯ ಹೊರ ಹಾಕಿ ಬಿಜುವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾದರು.
ಶಾಲು ಮೆನನ್ ಸರಿತಾ ನಾಯರ್ ಸಾಕ್ಷಿ

ಶಾಲು ಮೆನನ್ ಸರಿತಾ ನಾಯರ್ ಸಾಕ್ಷಿ

ಸೋಲಾರ್ ಹಗರಣದಲ್ಲಿ ಸಿಲುಕ್ಕಿದ್ದ ಕಿರುತೆರೆ ಜನಪ್ರಿಯ ನಟಿ ಶಾಲು ಮೆನನ್ ಗೆ ಜಾಮೀನು ಸಿಕ್ಕರೂ ಜೈಲಲ್ಲೇ ಕಾಲದೂಡಿದ್ದರು. ಎರೆಡೆರಡು ವಂಚನೆ ಪ್ರಕರಣದಲ್ಲಿ ಈಕೆ ಭಾಗಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜು ಆಪ್ತಳಾಗಿರುವ ಸರಿತಾ ನಾಯರ್ ಹಾಗೂ ಶಾಲು ಮೆನನ್ ಇಬ್ಬರ ವಿಚಾರಣೆಯನ್ನು ನಡೆಸಲಾಗಿತ್ತು. ಈ ಪ್ರಕರಣ ಐದು ತಿಂಗಳೊಳಗೆ ಮುಗಿಸುವಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿತ್ತು. ಹೀಗಾಗಿ ಬಿಜುಗೆ ಶಿಕ್ಷೆ ಬೇಗ ಸಿಕ್ಕಿದೆ

ತಪ್ಪಿಸಿಕೊಂಡ ಸಿಎಂ ಉಮ್ಮನ್ ಚಾಂಡಿ

ತಪ್ಪಿಸಿಕೊಂಡ ಸಿಎಂ ಉಮ್ಮನ್ ಚಾಂಡಿ

ಮುಖ್ಯಮಂತ್ರಿ ಉಮ್ಮನ್ ಚಾಂಡಿ ಕುರ್ಚಿಗೆ ಕಂಟಕವಾಗಿರುವ ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ಗಲಾಟೆ, ದೊಂಬಿ, ಪ್ರತಿಭಟನೆ ನಡೆದಿತ್ತು. ಮುಖ್ಯಮಂತ್ರಿಗಳ ಕಚೇರಿ ಸೇರಿದಂತೆ ಕ್ಯಾಬಿನೆಟ್ ಸಚಿವರುಗಳು ಈ ಹಗರಣದಲ್ಲಿ ಸಿಲುಕಿರುವ ಬಗ್ಗೆ ಸಾಕ್ಷಿ ಸಿಕ್ಕಿತ್ತು. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಕೆಳ ದಿನಗಳ ಹಿಂದೆ ಉಮ್ಮನ್ ಚಾಂಡಿಗೆ ಕ್ಲೀನ್ ಚಿಟ್ ಸಿಕ್ಕಿ ಬಿಟ್ಟಿತು.

ಸಿಎಂ ಕಚೇರಿಯ ಕಂಪ್ಯೂಟರ್ ಹಾರ್ಡ್ ಡಿಸ್ಕ್, ಸಿಸಿಟಿವಿ ಕ್ಯಾಮೆರಾ ದಾಖಲೆಗಳ ಪರಿಶೀಲನೆ ಹಾಗೂ ತನಿಖೆ ಮುಂದುವರೆಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು.

ಬಿಜು ತನ್ನ ಮೊದಲ ಪತ್ನಿ ರಷ್ಮಿ ಕೊಲೆಗೈದ

ಬಿಜು ತನ್ನ ಮೊದಲ ಪತ್ನಿ ರಷ್ಮಿ ಕೊಲೆಗೈದ

ಸಾಧಾರಣ ವಂಚನೆ ಪ್ರಕರಣದಂತೆ ಮೇಲ್ನೋಟಕ್ಕೆ ಕಂಡು ಬಂದಿತ್ತು. ಆದರೆ, ಬಿಜು- ಸರಿತಾ ಜೋಡಿಯ ಜಾಲ ವಿಸ್ತರಣೆ ಪರಿಚಯವಾಗುತ್ತಿದ್ದಂತೆ ಸರ್ಕಾರದ ಬುಡಕ್ಕೆ ಬಂದು ಬಿಟ್ಟಿತು.ಸೌರಶಕ್ತಿ ಒದಗಿಸಲು ಹಣ ಪಡೆದು ವಂಚನೆ ಎಂದಷ್ಟೇ ತಿಳಿಯಲಾಗಿತ್ತು. ಈಗ ಇದು ಬೇರೆ ಏನೋ ಪ್ರಕರಣ ಏನನ್ನೋ ಹೊರಟಿದೆ. ಬಿಜು ತನ್ನ ಮೊದಲ ಪತ್ನಿ ರಷ್ಮಿ ಕೊಲೆಗೈದ ಆರೋಪ ಹೊತ್ತಿತ್ತ ಮೇಲೂ ಸರಿತಾ ಜತೆ ಲಿವ್ ಇನ್ ಸಂಬಂಧದಲ್ಲಿದ್ದ.

ಎಸ್ಕೇಪ್ ಆಗಲು ಶಾಲು ಸಹಕರಿಸಿದ್ದಾರೆ

ಎಸ್ಕೇಪ್ ಆಗಲು ಶಾಲು ಸಹಕರಿಸಿದ್ದಾರೆ

ಅನಿವಾಸಿ ಕೇರಳಿಗ ಉದ್ಯಮಿ ರಫೀಕ್ ಅಲೆ ಅವರನ್ನು ಬಲೆ ಬೀಳಿಸಿಕೊಳ್ಳಲು ಶಾಲು ಮೆನನ್ ಸಹಾಯ ಪಡೆದ ಕಿಂಗ್ ಪಿನ್ ಬಿಜು ಸುಮಾರು 25 ಲಕ್ಷ ರು ಲೂಟಿದ್ದ ಎನ್ನಲಾಗಿದೆ. ಬಿಜುಗೆ ತನ್ನ ಮೊಬೈಲ್ ಕಾರು ಕೊಟ್ಟು ಎಸ್ಕೇಪ್ ಆಗಲು ಶಾಲು ಸಹಕರಿಸಿದ್ದಾರೆ ಎನ್ನಲಾಗಿದೆ.

ರೂಪದರ್ಶಿ ನಟಿ ಉತ್ತರ ಉನ್ನಿ

ರೂಪದರ್ಶಿ ನಟಿ ಉತ್ತರ ಉನ್ನಿ

ರೂಪದರ್ಶಿ ನಟಿ ಉತ್ತರಾ ಉನ್ನಿ ಅವರು ಸೋಲಾರ್ ಸಂಸ್ಥೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಲ್ಲದೆ ಹಲವಾರು ಉತ್ಪನ್ನಗಳ ರಾಯಭಾರಿಯಾಗಿದ್ದಾರೆ. ಫೇಸ್ ಬುಕ್ ನಲ್ಲಿ ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಉತ್ತರಾ ಮೇಲೆ ಬಲೆ ಬೀಸಿದ್ದಾರೆ. ಉತ್ತರಾಗೆ ಕೂಡಾ ಟೀಂ ಸೋಲಾರ್ ನಿಂದ ಭಾರಿ ಹಣ ಸಂದಾಯವಾಗಿದೆ ಎನ್ನಲಾಗಿದೆ.

ಸೋಲಾರ್ ಪ್ರಕರಣದಲ್ಲಿ ಮುಕ್ತಾ ಹೆಸರು

ಸೋಲಾರ್ ಪ್ರಕರಣದಲ್ಲಿ ಮುಕ್ತಾ ಹೆಸರು

ಈ ಪ್ರಕರಣದಲ್ಲಿ ಲೇಟೆಸ್ಟ್ ಎಂಟ್ರಿ. ಬಿಜು ಆಕೆಗೆ ದೊಡ್ಡ ಬ್ಯಾನರ್ ಸಿನಿಮಾ ಆಫರ್ ನೀಡಿದ್ದ. ಕ್ಯಾಲೆಂಡರ್ ಫೋಟೋ ಶೂಟಿಂಗ್ ಗೆ ಆಹ್ವಾನ ನೀಡಿದ್ದ ಎನ್ನಲಾಗಿದೆ. ಅಚ್ಚನುರಂಗಥಾ ವೀಡು (Achanurangatha Veedu) ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ್ದರು.

ಚಾಂಡಿ ರಾಜೀನಾಮೆಗೆ ಒತ್ತಾಯ

ಚಾಂಡಿ ರಾಜೀನಾಮೆಗೆ ಒತ್ತಾಯ

ಕೋಳಿಕ್ಕಾಡ್: ವಿದ್ಯಾರ್ಥಿಗಳ ಇಸ್ಲಾಮಿಕ್ ಸಂಘಟನೆ(SIO), ಎಲ್ ಡಿಇಎಫ್ ಕಾರ್ಯಕರ್ತರು ಸಿಎಂ ಉಮ್ಮನ್ ಚಾಂಡಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು

English summary
The Kollam District and Sessions Court today sentenced solar scam accused Biju Radhakrishnan guilty of murdering his wife Reshmi.His mother Rajammal was to three years imprisonment.On thursday both the accused found guilty of murdering Reshmi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X