ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶ ಯಾರಿಗೆ ಸೇರಿದ್ದು? ಏನಂತಾರೆ ಸಾಮಾಜಿಕ ಜಾಲತಾಣ ಬಳಕೆದಾರರು

|
Google Oneindia Kannada News

ಬೆಂಗಳೂರು, ಜೂನ್ 19: ಸಾಮಾಜಿಕ ಜಾಲತಾಣಗಳು ಸಾರ್ವಜನಿಕರಿಗೆ ಅಭಿಪ್ರಾಯ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎನ್ನುವುದು ಸೆಂಟರ್ ಫಾರ್ ಸ್ಟಡೀಸ್ ಆಫ್ ಡೆವಲಪಿಂಗ್ ಸೊಸೈಟೀಸ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಸಮೀಕ್ಷೆ ಹೇಳುವ ಪ್ರಕಾರ ಭಾರತವು ಕೇವಲ ಹಿಂದೂಗಳಿಗೆ ಮಾತ್ರ ಸೇರಿದ್ದು ಎನ್ನುವ ಅಭಿಪ್ರಾಯವನ್ನು ಕೇವಲ ಶೇ. 19 ರಷ್ಟು ಸಾಮಾಜಿಕ ಜಾಲತಾಣಗಳ ಬಳಕೆದಾರರು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ ಶೇ.75ರಷ್ಟು ಜನ ಇಲ್ಲ ಭಾರತವು ಎಲ್ಲರಿಗೂ ಸೇರಿದ್ದು ಕೇವಲ ಹಿಂದೂಗಳಿಗೆ ಮಾತ್ರವಲ್ಲ ಮುಸ್ಲಿಮರು ಕೂಡ ಈ ದೇಶದ ಭಾಗ ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ.

Social media useres says India is belongs to all community

ಅದೇ ಸಾಮಾಜಿಕ ಜಾಲತಾಣವನ್ನೇ ಬಳಸದ ಶೇ.17ರಷ್ಟು ಜನರು ಭಾರತವು ಹಿಂದುಗಳಿಗೆ ಮಾತ್ರ ಸೀಮಿತವಾಗಿದ್ದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದೇ ಸಾಮಾಜಿಕ ಜಾಲತಾಣವನ್ನು ಬಳಸದ ಶೇ.73ರಷ್ಟು ಜನ ಭಾರತವು ಎಲ್ಲರಿಗೂ ಸೇರಿದ್ದು ಎಂಬ ಅಭಿಪ್ರಾಯವನ್ನು ನೀಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳ ಅವಧಿಯಲ್ಲಿ ದೇಶದ 26 ರಾಜ್ಯಗಳು ಹಾಗೂ 211 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಸಿಎಂಡಿಎಸ್ ಸಂಸ್ಥೆ ಈ ಸಮೀಕ್ಷಾ ವರದಿಯನ್ನು ತಯಾರಿಸಿದೆ.

ಶಿರಡಿ ಸಾಯಿಬಾಬಾ ದೇಗುಲಕ್ಕೆ ಬರುತ್ತಿರುವ ಲಕ್ಷಗಟ್ಟಲೆ ನಾಣ್ಯಗಳ ಕಾಣಿಕೆಯೇ ಸಮಸ್ಯೆ ಶಿರಡಿ ಸಾಯಿಬಾಬಾ ದೇಗುಲಕ್ಕೆ ಬರುತ್ತಿರುವ ಲಕ್ಷಗಟ್ಟಲೆ ನಾಣ್ಯಗಳ ಕಾಣಿಕೆಯೇ ಸಮಸ್ಯೆ

ಇನ್ನೊಂದು ಆಶ್ಚರ್ಯಕರ ವಿಚಾರವೇನೆಂದರೆ ವಾರಕ್ಕೊಮ್ಮೆ ಅಥವಾ ಅಪರೂಪಕ್ಕೆ ವಾಟ್ಸಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸುವ ಜನರು ಈ ದೇಶ ಹಿಂದುಗಳಿಗೆ ಮಾತ್ರ ಸೇರಿದ್ದು ಎನ್ನುವ ಅಭಿಪ್ರಾಯವನ್ನು ಹೊಂದಿದ್ದಾರೆ.

ಆದರೆ ಪ್ರತಿ ನಿತ್ಯ ಬಳಕೆ ಮಾಡುವವರಲ್ಲಿ ಈ ರೀತಿಯ ಅಭಿಪ್ರಾಯಗಳು ಕಡಿಮೆ ಇದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಇನ್ನೊಂದು ವಿಚಾರವೇನೆಂದರೆ ಹಿಂದೂ ಮತದಾರರು ಇತರರಿಗೆ ಹೋಲಿಸಿದರೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ.

ಅದಲ್ಲದೆ ಇಂತಹ ಬಳಕೆದಾರರು ಮುಸ್ಲಿಮರು ಅತಿ ಹೆಚ್ಚು ದೇಶಭಕ್ತರಾಗಿದ್ದಾರೆ ಎನ್ನುವ ಅಭಿಪ್ರಾಯವನ್ನೂ ನೀಡಿದ್ದಾರೆ. ಶೇ. 23ರಷ್ಟು ಟ್ವಿಟ್ಟರ್, ಯೂಟ್ಯೂಬ್, ವಾಟ್ಸಪ್ ಬಳಕೆದಾರರು ಮುಸ್ಲಿಮರು ರಾಷ್ಟ್ರಭಕ್ತರು ಎಂದು ಹೇಳಿದ್ದಾರೆ.

ಅಪರೂಪಕ್ಕೆ ಸಾಮಾಜಿಕ ಜಾಲತಾಣವನ್ನು ಬಳಸುವ ಶೇ.33ರಷ್ಟು ಮಂದಿ ಕೂಡ ಇದೇ ಅಭಿಪ್ರಾಯ ಹೊಂದಿದ್ದಾರೆ.ಸಾಮಾಜಿಕ ಜಾಲತಾಣವನ್ನು ಬಳಸುವ ಶೇ.28ರಷ್ಟು ಜನ ಮುಸ್ಲಿಮರು ರಾಷ್ಟ್ರಭಕ್ತರು ಎಂಬ ಅಭಿಪ್ರಾಯ ನೀಡಿದ್ದರೆ ಶೇ.15ರಷ್ಟು ಜನ ಇದಕ್ಕೆ ತದ್ವಿರುದ್ಧವಾದ ಅಭಿಪ್ರಾಯ ಕೂಡ ಬಂದಿದೆ.

English summary
Social media useres says India is belongs to all community, three-fourth of the Hindus believe that India belongs to all religions equally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X