ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆ ಚುನಾವಣೆ; ಪ್ರಚೋದನಕಾರಿ ಭಾಷಣ, ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಲು ಫೇಸ್‌ಬುಕ್ ಕ್ರಮ

|
Google Oneindia Kannada News

ನವದೆಹಲಿ, ಮಾರ್ಚ್ 31: ದೇಶದ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ರೀತಿಯ ಪ್ರಚೋದನಕಾರಿ ಭಾಷಣ ಅಥವಾ ನೀತಿ ಉಲ್ಲಂಘನೆಯ ವಿಷಯಗಳ ಮೇಲೆ ನಿಯಂತ್ರಣ ಸಾಧಿಸಲು ಯೋಜನೆ ರೂಪಿಸುವುದಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಬುಧವಾರ ಘೋಷಿಸಿದೆ.

ಈ ಹಿಂದಿನ ಚುನಾವಣೆಗಳ ಅನುಭವಗಳನ್ನು ಇಟ್ಟುಕೊಂಡು ಈ ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದಾಗಿ ತಿಳಿಸಿದೆ. ಚುನಾವಣೆಯಲ್ಲಿ ನಾಗರಿಕರನ್ನು ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಜೊತೆಗೆ ದ್ವೇಷದ ಭಾಷಣಗಳನ್ನು ಹಾಗೂ ಸುಳ್ಳು ಮಾಹಿತಿಗಳ ನಿಗ್ರಹ ಮಾಡಲು ಮುಂದಾಗಿರುವುದಾಗಿ ತಿಳಿಸಿದೆ. ಮುಂದೆ ಓದಿ...

 ದ್ವೇಷ ಭಾವನೆ ಮೂಡಿಸುವಂಥ ಸುದ್ದಿಗೆ ತಡೆ

ದ್ವೇಷ ಭಾವನೆ ಮೂಡಿಸುವಂಥ ಸುದ್ದಿಗೆ ತಡೆ

400 ಮಿಲಿಯನ್ ಬಳಕೆದಾರರೊಂದಿಗೆ, ಭಾರತವನ್ನು ಅತಿ ದೊಡ್ಡ ಮಾರುಕಟ್ಟೆ ಎಂದು ಪರಿಗಣಿಸಿರುವ ಫೇಸ್‌ಬುಕ್, ದ್ವೇಷ ಭಾವನೆ ಮೂಡಿಸುವಂಥ ಅಂಶಗಳನ್ನು ಪತ್ತೆಹಚ್ಚಲು ಹೊಸ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಿರುವುದಾಗಿ ತಿಳಿಸಿದೆ. ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಹೊಸ ಪದಗಳ ಬಳಕೆಯನ್ನು ಪತ್ತೆ ಹಚ್ಚಲು ತಂತ್ರಜ್ಞಾನವನ್ನು ನಿಯೋಜಿಸುತ್ತಿದೆ ಎಂದು ತಿಳಿಸಿದೆ.

ಭಾರತ ಸೇರಿ ವಿಶ್ವದೆಲ್ಲೆಡೆ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯಭಾರತ ಸೇರಿ ವಿಶ್ವದೆಲ್ಲೆಡೆ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ

 ಸುಳ್ಳು ಸುದ್ದಿ ಪತ್ತೆಗೆ ತಂತ್ರಜ್ಞಾನ

ಸುಳ್ಳು ಸುದ್ದಿ ಪತ್ತೆಗೆ ತಂತ್ರಜ್ಞಾನ

ಚುನಾವಣೆ ಸಂದರ್ಭ ಸುಳ್ಳು ಸುದ್ದಿಗಳ ಪತ್ತೆಗೆ ಹಲವು ಸಂಸ್ಥೆಗಳೊಂದಿಗೆ ಸೇರಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ. ಇದರೊಂದಿಗೆ ಚುನಾವಣೆ ಕುರಿತು ಹೆಚ್ಚಿನ ಮಾಹಿತಿಯನ್ನೂ ಓದುಗರಿಗೆ ನೀಡುವುದಾಗಿ ತಿಳಿಸಿದ್ದು, ಬಂಗಾಳಿ, ತಮಿಳು, ಮಲಯಾಳಂ ಹಾಗೂ ಅಸ್ಸಾಮಿ ಭಾಷೆಯಲ್ಲಿ ಈ ಸುದ್ದಿಗಳು ಲಭ್ಯವಾಗಲಿವೆ.

 ಎಲೆಕ್ಷನ್ ಡೇ ರಿಮೈಂಡರ್

ಎಲೆಕ್ಷನ್ ಡೇ ರಿಮೈಂಡರ್

ಇದರೊಂದಿಗೆ ಎಲೆಕ್ಷನ್ ಡೇ ರಿಮೈಂಡರ್‌ಗಳನ್ನು ಪರಿಚಯಿಸುತ್ತಿದ್ದು, ಮತದಾನದ ಹಕ್ಕಿನ ಪ್ರಾಮುಖ್ಯವನ್ನು ಜನರಿಗೆ ತಿಳಿಸಲು ಬದ್ಧವಾಗಿರುವುದಾಗಿ ಘೋಷಿಸಿದೆ. ಬಿಜೆಪಿ ಪರವಾಗಿ ಫೇಸ್‌ಬುಕ್ ಕೆಲಸ ಮಾಡುತ್ತಿದೆ ಎಂದು ಕಳೆದ ಆಗಸ್ಟ್‌ನಲ್ಲಿ ಕಾಂಗ್ರೆಸ್ ಫೇಸ್‌ಬುಕ್‌ ಮೇಲೆ ಆರೋಪ ಮಾಡಿತ್ತು.

 ಚುನಾವಣಾ ಕಾರ್ಯ ಚುರುಕು

ಚುನಾವಣಾ ಕಾರ್ಯ ಚುರುಕು

ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಮೊದಲ ಹಂತದ ಚುನಾವಣೆಗಳು ಮಾರ್ಚ್ 27ರಂದು ನಡೆದಿವೆ. ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

English summary
Facebook announced its plans to remove any content found to be in violation of the policy in view of elections in four states and the Union Territory of Puducherry
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X