ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಸಾಮಾಜಿಕ ಮಾಧ್ಯಮ ದಿನ: ನಿಮ್ಮ ನೆಚ್ಚಿನ ಜಾಲತಾಣ ಯಾವುದು?

|
Google Oneindia Kannada News

'ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ..' ಎಂದು ಟೇಪ್ ರೆಕಾರ್ಡರ್ ಧ್ವನಿ ಮಾಡುವ ಮೊದಲೇ ಕಣ್ಣು ಫೇಸ್ ಬುಕ್, ವಾಟ್ಸಾಪು, ಇನ್ ಸ್ಟಾಗ್ರಾಂಗಳನ್ನೆಲ್ಲ ಒಮ್ಮೆ ತಡಕಿ ಬಂದಿರುತ್ತದೆ. ಈ ಕಾಲಕ್ಕೆ ಈ ಸೋಶಿಯಲ್ ಮೀಡಿಯಾನೇ ಸುಪ್ರಭಾತ!

ಕೂತಿದ್ದು, ನಿಂತಿದ್ದು, ಉಂಡಿದ್ದು, ತಿಂದಿದ್ದು, ಅತ್ತಿದ್ದು, ನಕ್ಕಿದ್ದು, ಬಿದ್ದಿದ್ದು, ಎದ್ದಿದ್ದು... ಎಲ್ಲವನ್ನೂ ಕ್ಷಣ ಮಾತ್ರದಲ್ಲಿ ಸಾಮಾಜಿಕ ಮಾಧ್ಯಗಳಲ್ಲಿ ಪೋಸ್ಟ್ ಮಾಡುವ ಈ ಕಾಲದಲ್ಲಿ ಸೋಶಿಯಲ್ ಮೀಡಿಯಾ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ!

ಚುನಾವಣೆ ಸಮಯದಲ್ಲಿ ಎಫ್‌ಬಿ ಜಾಹಿರಾತಿಗೂ ಬ್ರೇಕ್‌ ಹಾಕಲು ಚಿಂತನೆ ಚುನಾವಣೆ ಸಮಯದಲ್ಲಿ ಎಫ್‌ಬಿ ಜಾಹಿರಾತಿಗೂ ಬ್ರೇಕ್‌ ಹಾಕಲು ಚಿಂತನೆ

ಅಷ್ಟಕ್ಕೂ ಈ ಸೋಶೀಯಲ್ ಮೀಡಿಯಾ ಬಗ್ಗೆ ಯಾಕಿಷ್ಟು ಮಾತು ಅಂದ್ರೆ... 'ಪ್ರತಿ ವರ್ಷ ಜೂನ್ 30 ಅನ್ನು ಸಾಮಾಜಿಕ ಮಾಧ್ಯಮ ದಿನ ಎಂದು ಆಚರಿಸಲಾಗುತ್ತದೆಯಂತೆ!' ಜಾಗತಿಕ ಸಂವಹನದಲ್ಲಿ ಸಾಮಜಿಕ ಮಾಧ್ಯಮದ ಪಾತ್ರ, ಮಹತ್ವ ಮತ್ತು ಪರಿಣಾಮಗಳನ್ನು ಮನಗಂಡು ಈ ದಿನವನ್ನು ಆಚರಿಸಲಾಗುತ್ತಿದೆ.

ಇಂತಿಪ್ಪ ಸೋಶಿಯಲ್ ಮೀಡಿಯಾ ದಿನ, ಇಂದಿನ ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಕೂಡ ಹೌದು! ಈ ದಿನಕ್ಕೆ ಹಲವರು ಶುಭಾಶಯ ಕೋರಿದ್ದು, ಸಮಾಜಿಕ ಮಾಧ್ಯಮಗಳನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳೋಣವೆಂದಿದ್ದಿದ್ದಾರೆ.

Array

ಕಲ್ಪಿಸಿಕೊಳ್ಳಲೂ ಅಸಾಧ್ಯ!

'ಸೋಶಿಯಲ್ ಮೀಡಿಯಾ ಇಲ್ಲದ ಬದುಕು ಊಹಿಸಿಕೊಳ್ಳುವುದಕ್ಕೂ ಅಸಾಧ್ಯ! ನಮ್ಮೆಲ್ಲರ ಜೀವನದಲ್ಲಿ ಅದು ಎಂಥ ಮಹತ್ವದ ಪಾತ್ರ ವಹಿಸಿದೆ ಎಂಬುದು ವರ್ಣಿಸುವುದನ್ನು ಕಷ್ಟ. ನನ್ನೆಲ್ಲ ಸ್ನೇಹಿತರಿಗೂ ಸೋಶಿಯಲ್ ಮೀಡಿಯಾ ದಿನದ ಶುಭಾಶಯಗಳು' ಎಂದಿದ್ದಾರೆ ಸಾಗರ್ ಕಾಂಬ್ಳೆ.

ಫೇಸ್ಬುಕ್ ನಲ್ಲಿ ಟ್ರಾವೆಲ್ ಸ್ಟೇಟಸ್ ಹಾಕುವ ಮುನ್ನ ಹುಷಾರಾಗಿರಿ! ಫೇಸ್ಬುಕ್ ನಲ್ಲಿ ಟ್ರಾವೆಲ್ ಸ್ಟೇಟಸ್ ಹಾಕುವ ಮುನ್ನ ಹುಷಾರಾಗಿರಿ!

ಸಮಾಜದ ಒಳಿತಿಗೆ ಬಳಸೋಣ

ಸೋಶಿಯಲ್ ಮೀಡಿಯಾ ದಿನದ ಶುಭಾಶಯಗಳು. ಸಾಮಾಜಿಕ ಮಾಧ್ಯಮಗಳನ್ನು ಧನಾತ್ಮಕವಾಗಿ ಬಳಸಿಕೊಂಡು ಸಮಾಜದ ಒಳಿತಿಗಾಗಿ, ಸಮಾಜವನ್ನು ಬಲಾಡ್ಯಗೊಳಿಸುವುದಕ್ಕಾಗಿ ಪ್ರಯತ್ನಿಸೋಣ ಎಂದಿದ್ದಾರೆ ನಿಶಾ ಗುಪ್ತಾ.

ನಕಲಿ ಸುದ್ದಿ ವಿರುದ್ಧ ಧ್ವನಿ ಎತ್ತೋಣ!

ಸಾಮಾಜಿಕ ಮಾಧ್ಯಮ ದಿನದಂದು ಎಲ್ಲಾ ಸಾಮಾನ್ಯ ಜನರಿಗೂ ನನ್ನ ಶುಭ ಹಾರೈಕೆಗಳು. ಈ ದಿನದಿಂದ ಎಲ್ಲಾ ನಕಲಿ ಸುದ್ದಿಗಳ ವಿರುದ್ಧ, ಕುಟುಂಬ ರಾಜಕಾರಣದ ವಿರುದ್ಧ, ಶಿಕ್ಷಣದ ಅವ್ಯಸ್ಥೆ ವಿರುದ್ಧ, ವೈದ್ಯಕೀಯ ಕ್ಷೇತ್ರದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತೋಣ. ಭಾರತವನ್ನು ಸ್ವಚ್ಛವಾಗಿಸೋಣ ಎಂದಿದ್ದಾರೆ ದಿನೇಶ್ ಸಿಂಗ್.

ಕೇವಲ ಆಚರಣೆಯಿಂದ ಪ್ರಯೋಜನವಿಲ್ಲ

ಕೇವಲ ಸಾಮಾಜಿಕ ಮಾಧ್ಯಮ ದಿನ ಆಚರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಮೊದಲು ಅದನ್ನು ಬಳಸುವುದು ಹೇಗೆ ತ್ತು ಆ ಮೂಲಕ ಉತ್ತಮ, ನಿಖರ ಮಾಹಿತಿ ನೀಡುವುದು ಹೇಗೆ ಎಂಬುದು ಗೊತ್ತಿರಬೇಕು. ಸಮಾಜ ಸುಧಾರಣೆಗೆ ಸಹಕಾರಿಯಾಗುವಂಥದ್ದನ್ನೇ ಶೇರ್ ಮಾಡಿ ಎಂದಿದ್ದಾರೆ ಡ್ಯಾಸಿ ಗಗನ್ದೀಪ್.

English summary
Today, social media is the heart of global communication. So every year on June 30 is celebrated as ocial Media Day alal over the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X