ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್ಇ ಫಲಿತಾಂಶ ಕುರಿತಂತೆ ಹಾಸ್ಯದ ಹೊನಲು!

ಸಿಬಿಎಸ್ಇ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಸರಾಸರಿ ಶೇಕಡಾ 82 ಫಲಿತಾಂಶ ದಾಖಲಾಗಿದೆ. ಶೇ 99.6 ಅಂಕ ಗಳಿಸಿದ ರಕ್ಷಾ ಹಾಗೂ ಇನ್ನಿತರ ಟಾಪರ್ ಗಳ ಬಗ್ಗೆ ಟ್ವಿಟ್ಟರ್ ನಲ್ಲಿ ಹಾಸ್ಯದ ಹೊನಲು ಹರಿದಾಡಿದೆ.

By Mahesh
|
Google Oneindia Kannada News

ಬೆಂಗಳೂರು, ಮೇ 29: ಸಿಬಿಎಸ್ಇ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಸರಾಸರಿ ಶೇಕಡಾ 82 ಫಲಿತಾಂಶ ದಾಖಲಾಗಿದೆ. ಶೇ 99.6 ಅಂಕ ಗಳಿಸಿದ ರಕ್ಷಾ ಹಾಗೂ ಇನ್ನಿತರ ಟಾಪರ್ ಗಳ ಬಗ್ಗೆ ಟ್ವಿಟ್ಟರ್ ನಲ್ಲಿ ಹಾಸ್ಯದ ಹೊನಲು ಹರಿದಾಡಿದೆ.

ಕಳೆದ ವರ್ಷ ಶೇ. 83 ಫಲಿತಾಂಶ ದಾಖಲಾಗಿತ್ತು. ಇದಕ್ಕೆ ಹೋಲಿಸಿದಲ್ಲಿ ಈ ಬಾರಿ ಫಲಿತಾಂಶದಲ್ಲಿ ಅಲ್ಪ ಕುಸಿತವಾಗಿದೆ. ನೋಯ್ಡಾದ ಮೂಲದ ಅಮಿಟಿ ಇಂಟರ್ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿನಿ ರಕ್ಷಾ ಗೋಪಾಲ್ ಶೇಕಡಾ 99.6 ಅಂಕಗಳನ್ನು ಪಡೆದು ದೇಶಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.[ನೋಯ್ಡಾ ವಿದ್ಯಾರ್ಥಿನಿ ದೇಶಕ್ಕೆ ಪ್ರಥಮ]

Social Media abuzz with memes and jokes around CBSE results

ಶೇ. 99.4 ಅಂಕಗಳೊಂದಿಗೆ ಭೂಮಿ ಸಾವಂತ್ ಎರಡನೇ ಸ್ಥಾನ ಹಾಗೂ ಶೇಕಡಾ 99.2 ಅಂಕಗಳೊಂದಿದೆ ಆದಿತ್ಯ ಜೈನ್ ಮತ್ತು ಮನ್ನತ್ ಲೂತ್ರ ಮೂರನೇ ಶ್ರೇಯಂಕ ಪಡೆದಿದ್ದಾರೆ. ಮೂರೂ ಜನ ಚಂಡೀಗಢದವರಾಗಿದ್ದಾರೆ. ಟ್ವಿಟ್ಟರ್ ನಲ್ಲಿ ಬಂದಿರುವ ಪ್ರತಿಕ್ರಿಯೆಗಳ ಕೆಲ ಸಂಗ್ರಹ ಇಲ್ಲಿದೆ:

ಸಾಧಾರಣ ದರ್ಜೆಯ ಅಂಕ ಪಡೆಯುವ ವಿದ್ಯಾರ್ಥಿನಿಯೊಬ್ಬಳು ಟಾಪರ್ ಸ್ಕೋರ್ ಕಾರ್ಡ್ ಮುಟ್ಟಿದ ಕ್ಷಣ ನಡೆಯುವ ಮ್ಯಾಜಿಕ್ ನೋಡಿ

ಫೇಸ್ ಬುಕ್, ವಾಟ್ಸಾಪ್ ನಲ್ಲೆ ಕಾಲ ಕಳೆಯುತ್ತಾ, ಅಂಕ ಗಳಿಸದ ವಿದ್ಯಾರ್ಥಿಯೊಬ್ಬನ ಮನೆ ಮುಂದಿನ ಲೈವ್ ದೃಶ್ಯಗಳು

ಶಶಿ ತರೂರ್ ಸ್ಟೈಲಲ್ಲಿ ಟೀಚರ್ ರೊಬ್ಬರು ವಿದ್ಯಾರ್ಥಿಗೆ ತಿಳಿ ಹೇಳಿದ್ದು ಹೀಗೆ:

ಫಲಿತಾಂಶ ಪ್ರಕಟ, ಪೋಷಕರಿಗೆ ಉಂಟಾದ ಭಾರಿ ನಷ್ಟಕ್ಕೆ ಸಿಬಿಎಸ್ಇ ಹೊಣೆ.

ರಕ್ಷಾ ಗೋಪಾಲ್ ಸ್ಕೋರ್ ಕಾರ್ಡ್

ಹಿಸ್ಟರಿಯಲ್ಲೂ ಪ್ರಾಕ್ಟಿಕಲ್ಸ್ ಇರುತ್ತೆ

ಟಾಪರ್ ಅವರ ಅಮ್ಮ

ಅಂಕ ಗಳಿಸಲಿಲ್ಲ ಎಂದು ಚಿಂತಿಸಬೇಡಿ, ಜೀವನದಲ್ಲಿ ಸಾಧನೆಗೆ ಅಂಕಗಳು ಮುಖ್ಯವಲ್ಲ

(ಒನ್ಇಂಡಿಯಾ ಸುದ್ದಿ)

English summary
CBSE Class 12 results declared on May 29, 2017. Raksha Gopal of Amity International School Noida tops with 99.6% marks. Social Media abuzz with memes and jokes around CBSE results
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X