ಇರಾನಿ ಕಾರು ಅಪಘಾತ, ಶನಿವಾರ ನಡೆದಿದ್ದಾದರೂ ಏನು?

Subscribe to Oneindia Kannada

ನವದೆಹಲಿ, ಮಾರ್ಚ್, 07: ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಗಳಿಗೆ ಸಿಕ್ಕಿಹಾಕಿಕೊಂಡಿದ್ದ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಗೆ ಮತ್ತೊಂದು ಆರೋಪ ಸುತ್ತಿಕೊಂಡಿದೆ.

ಶನಿವಾರ ಮಾರ್ಚ್ 5 ರಂದು ಇರಾನಿ ಬೆಂಗಾವಲು ಪಡೆ ರಸ್ತೆ ಅಪಘಾತಕ್ಕೆ ಗುರಿಯಾಗಿತ್ತು. ಅಪಘಾತದಲ್ಲಿ ವೈದ್ಯರೊಬ್ಬರು ಸಾವನ್ನಪ್ಪಿದ್ದರು. ಮಾಧ್ಯಮಗಳಲ್ಲೂ ಸಹ ಘಟನೆ ವರದಿಯಾಗಿತ್ತು. ಆದರೆ ಪ್ರಕರಣ ಮತ್ತೊಂದು ಮಗ್ಗಲು ಪಡೆದುಕೊಳ್ಳುತ್ತಿದೆ.[ಮತ್ತೊಮ್ಮೆ ವಿಪಕ್ಷಗಳ ವಿರುದ್ದ ಸ್ಮೃತಿ ಇರಾನಿ 'ರಣಭೀಷಣ' ಭಾಷಣ]

Smriti Irani Yamuna Expressway Accident - What Actually Happened?

"ಅಪಘಾತ ನಡೆದ ಸಂದರ್ಭ ಸಚಿವೆ ಸ್ಮೃತಿ ಇರಾನಿ ಬಳಿ ಸಹಾಯ ಮಾಡಿ ಎಂದು ಕೈಮುಗಿದು ಬೇಡಿಕೊಂಡೆವು ಆದರೆ ಅವರು ಹಾಗೇ ಹೊರಟು ಹೋಗಿದ್ದರು" ಎಂದು ಮೃತ ವೈದ್ಯ ರಮೇಶ್ ನಗರ್ ಅವರ 15 ವರ್ಷದ ಪುತ್ರಿ ಸಾಂದೀಲಿ ಆರೋಪಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಆದರೆ ಅಪಘಾತ ನಡೆದ ಬಳಿಕ ಸರಣಿ ಟ್ವೀಟ್ ಮಾಡಿದ್ದ ಸಚಿವೆ ಇರಾನಿ, ಅಪಘಾತದ ವೇಳೆ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದರು.[ಮಗುವನ್ನು ಬಲಿ ಪಡೆದ ಹೇಮಾಮಾಲಿನಿ ಮರ್ಸಿಡಿಸ್ ಬೆಂಜ್]

ಆದರೆ ಸಚಿವೆ ಇರಾನಿ ಕಚೇರಿ ಈ ಆರೋಪವನ್ನು ತಳ್ಳಿ ಹಾಕಿದೆ. ಸಚಿವರು ಅಂದೆಯೇ ಈ ಬಗ್ಗೆ ಟ್ವೀಟ್ ಮಾಡಿದ್ದು ಘಟನೆಯ ಅಷ್ಟು ಅಂಶಗಳನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ. ಇಲ್ಲಿ ಯಾವ ಅನುಮಾನಕ್ಕೆ ಆಸ್ಪದ ಇಲ್ಲ ಎಂದು ಹೇಳಿದೆ. ಒಟ್ಟಿನಲ್ಲಿ ಘಟನಾವಳಿಗಳು ಮತ್ತೊಂದು ವಿವಾದಕ್ಕೆ ಮೂಲವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union Minister for Human Resources Development Smriti Irani met with an accident on Saturday night while returning from Mathura. She had gone there to attend a BJP youth convention. In the accident she had received minor injuries.
Please Wait while comments are loading...