ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಗರೇಟ್ ಸೇದುವವರ ವಯಸ್ಸಿನ ಮಿತಿ ಏರಿಕೆಗೆ ಚಿಂತನೆ

|
Google Oneindia Kannada News

ನವದೆಹಲಿ, ಜನವರಿ 06: ದೇಶದಲ್ಲಿ ಧೂಮಪಾನ ಮಾಡುವವರ ಸಂಖ್ಯೆಯನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸಿಗರೇಟು ಹಾಗೂ ತಂಬಾಕು ಉತ್ಪನ್ನಗಳ ಬಳಕೆಯ ವಯಸ್ಸಿನ ಮಿತಿಯನ್ನು 18ರಿಂದ 21 ವರ್ಷಕ್ಕೆ ಏರಿಸಲು ಚಿಂತನೆ ನಡೆಸಿರುವುದಾಗಿ ತಿಳಿದುಬಂದಿದೆ.

ಸಿಗರೇಟು ಹಾಗೂ ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ 2020ರ (ಕೊಪ್ಟಾ) (ತಿದ್ದುಪಡಿ) ಅಡಿಯಲ್ಲಿ ಸಿಗರೇಟು ಸೇವನೆಯ ಕಾನೂನುಬದ್ಧ ವಯಸ್ಸನ್ನು 18ರಿಂದ 21 ವರ್ಷಕ್ಕೆ ಏರಿಸಲು ಕೇಂದ್ರ ಸಚಿವಾಲಯ ಪ್ರಸ್ತಾವ ಮುಂದಿಟ್ಟಿದೆ. 2003ರ ಕಾಯ್ದೆಯಲ್ಲಿ ಈ ವಯಸ್ಸನ್ನು 18ಕ್ಕೆ ನಿಗದಿಪಡಿಸಲಾಗಿತ್ತು.

ಬೆಂಗಳೂರಲ್ಲಿ ಪರೋಕ್ಷ ಧೂಮಪಾನಿಗಳಿಗೂ ಕ್ಯಾನ್ಸರ್‌ ಅಪಾಯಬೆಂಗಳೂರಲ್ಲಿ ಪರೋಕ್ಷ ಧೂಮಪಾನಿಗಳಿಗೂ ಕ್ಯಾನ್ಸರ್‌ ಅಪಾಯ

ಇದರೊಂದಿಗೆ ಸಿಗರೇಟುಗಳ ಬಿಡಿ ಮಾರಾಟವನ್ನು ನಿಷೇಧಿಸುವ ಪ್ರಸ್ತಾಪವನ್ನೂ ಮಾಡಿದೆ. ಸಿಗರೇಟು ಹಾಗೂ ಇತರೆ ತಂಬಾಕು ಉತ್ಪನ್ನಗಳ (ವ್ಯಾಪಾರ, ವಾಣಿಜ್ಯ ಉತ್ಪಾದನೆ ಸರಬರಾಜು ಮತ್ತು ವಿತರಣೆಯ ಜಾಹೀರಾತು ಮತ್ತು ನಿಯಂತ್ರಣ ಕಾಯ್ದೆ) ಕಾಯ್ದೆ 2020ರ ಕರಡನ್ನು ಸರ್ಕಾರ ಸಿದ್ಧಪಡಿಸಿದೆ. ಸಿಗರೇಟುಗಳನ್ನು ಬಿಡಿಯಾಗಿ ಮಾರಾಟ ಮಾಡುತ್ತಿರುವುದರಿಂದ ಜನರಿಗೆ, ಅದರಲ್ಲೂ ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗುತ್ತಿವೆ. ಆದ್ದರಿಂದ ಬಿಡಿ ಮಾರಾಟ ನಿಷೇಧಿಸುವುದು ಒಳಿತು ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 Smoking Age Limit To Be Raised To 21 From 18 Years

ರೆಸ್ಟೋರೆಂಟ್, ವಿಮಾನ ನಿಲ್ದಾಣಗಳಲ್ಲಿ ಗೊತ್ತುಪಡಿಸಲಾದ ಸ್ಥಳಗಳಲ್ಲಿ ಧೂಮಪಾನಕ್ಕೆ ಅವಕಾಶವಿದ್ದು, ದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಚಿಂತನೆ ನಡೆಸಲಾಗುತ್ತಿರುವುದಾಗಿ ತಿಳಿದುಬಂದಿದೆ. ಇದರ ಜೊತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದಕ್ಕೆ ತೆರುತ್ತಿದ್ದ ದಂಡದ ಪ್ರಮಾಣವನ್ನು 200ರೂ ಇಂದ 2000ರೂಗೆ ಹೆಚ್ಚಿಸುವ ಪ್ರಸ್ತಾಪವಿದೆ.

ಶಿಕ್ಷಣ ಸಂಸ್ಥೆಯ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘನೆಗೆ 7 ವರ್ಷ ಜೈಲು ಹಾಗೂ 1000ರೂ ಇಂದು ಲಕ್ಷ ರೂಪಾಯಿವರೆಗೆ ದಂಡ ಹೆಚ್ಚಿಸುವ ಬೇಡಿಕೆಯನ್ನು ಮುಂದಿಡಲಾಗಿದೆ.

English summary
Government proposes to raise smoking age to 21 and ban loose cigarette sale
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X