ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೇ ಪ್ರಯಾಣಿಕರ ನಿದ್ರಾ ಅವಧಿಯಲ್ಲಿ 1 ಗಂಟೆ ಕಡಿತ

By Sachhidananda Acharya
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17: ಭಾರತೀಯ ರೈಲ್ವೇ ಇಲಾಖೆ ರೈಲುಗಳಲ್ಲಿ ಪ್ರಯಾಣಿಕರ ಅಧಿಕೃತ ನಿದ್ರಾವಧಿಯನ್ನು ಒಂದು ಗಂಟೆ ಕಡಿತ ಮಾಡಿದೆ.

ರೈಲ್ವೆ ಸುರಕ್ಷತೆಗೆ ಸಚಿವ ಗೋಯೆಲ್ ಸುದೀರ್ಘ ಸಭೆ, ಐದು ಸೂಚನೆಗಳುರೈಲ್ವೆ ಸುರಕ್ಷತೆಗೆ ಸಚಿವ ಗೋಯೆಲ್ ಸುದೀರ್ಘ ಸಭೆ, ಐದು ಸೂಚನೆಗಳು

ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿರುವ ಇಲಾಖೆ ಈ ಹೊಸ ನಿದ್ರಾವಧಿಯನ್ನು ಘೋಷಣೆ ಮಾಡಿದೆ. ಈ ಹಿಂದೆ ರಾತ್ರಿ 9ರಿಂದ ಬೆಳಗ್ಗೆ 6 ಗಂಟೆವರೆಗೂ ನಿದ್ರಾವಧಿ ಎಂದು ಗುರುತು ಮಾಡಲಾಗಿತ್ತು. ಇದೀಗ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರಗೆ ಮಾತ್ರ ನಿದ್ರಾವಧಿಯಾಗಿರಲಿದೆ ಎಂದು ಹೊಸ ಸುತ್ತೋಲೆಯಲ್ಲಿ ತಿಳಿಸಿದೆ.

Sleeping Time Cut By An Hour For Train Passengers

ಈ ವೇಳೆ ಮಾತ್ರ ಪ್ರಯಾಣಿಕರು ಮೇಲಿನ ಮತ್ತು ಮಧ್ಯದ ಬರ್ತ್ ಗಳಲ್ಲಿ ಮಲಗಬಹುದಾಗಿದೆ. ವಿಶೇಷ ಚೇತನರು ಮತ್ತು ಅನಾರೋಗ್ಯ ಪೀಡಿತರು, ಹಿರಿಯರನ್ನು ಈ ಆದೇಶದಿಂದ ಹೊರಗಿಡಲಾಗಿದೆ ಎಂದು ಇಲಾಖೆಯ ವಕ್ತಾರ ಅನಿಲ್ ಸಕ್ಸೇನಾ ತಿಳಿಸಿದ್ದಾರೆ.

ಮಧ್ಯ ಬರ್ತ್ ಗಳಲ್ಲಿರುವ ಪ್ರಯಾಣಿಕರು ಮಲಗಿದರೆ ಕೆಳಗಿನ ಬರ್ತ್ ಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಆಗುವುದಿಲ್ಲ. ಇದೇ ಕಾರಣಕ್ಕೆ ಇಲಾಖೆಗೆ ಹಲವು ದೂರುಗಳು ಬಂದಿದ್ದವು. ಜತೆಗೆ ಸೀಟಿಗಾಗಿ ಪ್ರಯಾಣಿಕರ ನಡುವೆ ಗಲಾಟೆ ಪ್ರಕರಣಗಳೂ ನಡೆದಿದ್ದವು.
ಇದೀಗ ಈ ಎಲ್ಲಾ ಸಮಸ್ಯೆಗೆ ರೈಲ್ವೇ ಇಲಾಖೆ ಪರಿಹಾರ ಕಂಡುಕೊಂಡಿದ್ದು ಅಧಿಕೃತ ನಿದ್ರಾ ಅವಧಿಯಲ್ಲಿ ಬದಲಾವಣೆ ತಂದಿದೆ.

English summary
The latest circular by the railway board says that the passengers in the reserved coaches can only sleep between 10 pm and 6 am to allow others to sit on the seats for the rest of the time. The earlier permissible sleep time was between 9 pm and 6 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X