• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದಲ್ಲಿ ಶೇ.86ರಷ್ಟು ಹೊಸ ಕೊರೊನಾ ಪ್ರಕರಣಗಳ ಏರಿಕೆ; ಈ ಆರು ರಾಜ್ಯಗಳೇ ಹೊಣೆ...

|

ನವದೆಹಲಿ, ಮಾರ್ಚ್ 04: ದೇಶದಲ್ಲಿ ಕಳೆದ ಮೂರು ವಾರಗಳಿಂದ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗಿದ್ದು, ಇದರ ಬೆನ್ನಲ್ಲೇ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತೊಮ್ಮೆ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ರವಾನಿಸಿದೆ.

ಮೊದಮೊದಲು ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೊನಾ ಪ್ರಕರಣಗಳು ಅಧಿಕ ಮಟ್ಟದಲ್ಲಿ ದಾಖಲಾಗಿದ್ದು, ಈಗ ಇತರೆ ರಾಜ್ಯಗಳಲ್ಲಿಯೂ ಏರಿಕೆಯಾಗುತ್ತಿದೆ. ಪ್ರಮುಖವಾಗಿ ಆರು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು, ಬುಧವಾರ ದೇಶದಲ್ಲಿ ದಾಖಲಾಗಿರುವ ಕೊರೊನಾ ಪ್ರಕರಣಗಳಲ್ಲಿ ಶೇ.86ರಷ್ಟು ಹೊಸ ಪ್ರಕರಣಗಳು ಈ ರಾಜ್ಯಗಳಿಂದಲೇ ದಾಖಲಾಗಿವೆ. ಮುಂದೆ ಓದಿ...

ಕೊರೊನಾ ಕಂಟಕದಿಂದ ಬಚಾವ್, ಆದರೂ ಎಚ್ಚರವಾಗಿರಲು ಸೂಚನೆ..!

 ಸೋಂಕು ಹೆಚ್ಚಾಗಿರುವ ಆರು ರಾಜ್ಯಗಳು

ಸೋಂಕು ಹೆಚ್ಚಾಗಿರುವ ಆರು ರಾಜ್ಯಗಳು

ಮೂರು ವಾರದಿಂದೀಚೆಗೆ ಆರು ರಾಜ್ಯಗಳು ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡಿರುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ತಮಿಳುನಾಡು ಹಾಗೂ ಗುಜರಾತ್‌ನಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಿದ್ದು, ಬುಧವಾರ ಶೇ.86ರಷ್ಟು ಹೊಸ ಪ್ರಕರಣಗಳು ಈ ರಾಜ್ಯಗಳಿಂದ ದಾಖಲಾಗಿವೆ.

 ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಪ್ರಕರಣ ದಾಖಲು

ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಪ್ರಕರಣ ದಾಖಲು

ಬುಧವಾರ ದೇಶದಲ್ಲಿ ಒಟ್ಟಾರೆ 14,989 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಮಹಾರಾಷ್ಟ್ರ ಒಂದರಿಂದಲೇ 7,863 ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ 2,938 ಪ್ರಕರಣಗಳು ಕಂಡುಬಂದಿದ್ದು, ನಂತರದ ಸರದಿ ಪಂಜಾಬ್‌ನದ್ದಾಗಿದೆ. ಪಂಜಾಬ್‌ನಲ್ಲಿ ಬುಧವಾರ 729 ಪ್ರಕರಣಗಳು ದಾಖಲಾಗಿರುವುದಾಗಿ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

ಜನರು ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ಕೊರೊನಾ ಲಸಿಕೆ ಪಡೆಯಬಹುದು

 ವಾರದಿಂದ ವಾರಕ್ಕೆ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳ

ವಾರದಿಂದ ವಾರಕ್ಕೆ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳ

ವಾರದಿಂದ ವಾರಕ್ಕೆ ಮಹಾರಾಷ್ಟ್ರ, ಪಂಜಾಬ್, ಗುಜರಾತ್, ಮಧ್ಯ ಪ್ರದೇಶ, ದೆಹಲಿ, ಹರಿಯಾಣ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ವಾರದ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡರೆ, ಮಹಾರಾಷ್ಟ್ರವೊಂದರಲ್ಲಿಯೇ ವಾರದಲ್ಲಿ 16,012 ಪ್ರಕರಣಗಳು ವರದಿಯಾಗಿವೆ. ಆದರೆ ಶೇಕಡಾವಾರು ಲೆಕ್ಕ ತೆಗೆದುಕೊಂಡರೆ, ವಾರದ ಪ್ರಮಾಣದಲ್ಲಿ ಪಂಜಾಬ್‌ ಮುಂದಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

 ದೊಡ್ಡ ಸಭೆ ಸಮಾರಂಭಗಳೇ ಕೊರೊನಾ ಏರಿಕೆಗೆ ಕಾರಣ?

ದೊಡ್ಡ ಸಭೆ ಸಮಾರಂಭಗಳೇ ಕೊರೊನಾ ಏರಿಕೆಗೆ ಕಾರಣ?

ಕೊರೊನಾ ಏರಿಕೆ ಪರಿಸ್ಥಿತಿ ನಿಯಂತ್ರಣ ಸಂಬಂಧ ರಾಜ್ಯಾಡಳಿತಕ್ಕೆ ನೆರವು ನೀಡಲು ಕೇಂದ್ರ ಸರ್ಕಾರ ಈಚೆಗೆ ಹತ್ತು ರಾಜ್ಯಗಳಿಗೆ ತಜ್ಞರ ತಂಡವನ್ನು ಕಳುಹಿಸಿಕೊಟ್ಟಿದೆ. ಈ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಏರಿಕೆಗೆ ನಿಖರ ಕಾರಣ ಕಂಡುಕೊಳ್ಳುವ ಪ್ರಯತ್ನದಲ್ಲಿದೆ ಈ ತಂಡ. ದೊಡ್ಡ ಸಭೆ ಸಮಾರಂಭಗಳು ಹಾಗೂ ಕೊರೊನಾ ಪರೀಕ್ಷೆಯಲ್ಲಿನ ಹಿನ್ನಡೆಯೇ ಕೊರೊನಾ ಪ್ರಕರಣಗಳ ಸಂಖ್ಯೆ ಏರಲು ಕಾರಣ ಎಂದು ಪ್ರಾಥಮಿಕ ವರದಿ ತಿಳಿಸಿದೆ.

English summary
Maharashtra, Kerala, Punjab, Karnataka, Tamil Nadu and Gujarat Account for 86% of Daily New Covid Cases in country says health ministry,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X