ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಟು ಆಸನಗಳ ವಾಹನಗಳಲ್ಲಿ ಆರು ಏರ್ ಬ್ಯಾಗ್ ಕಡ್ಡಾಯ: ಕೇಂದ್ರ ಸಚಿವ ಗಡ್ಕರಿ

|
Google Oneindia Kannada News

ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಕಾರು ತಯಾರಕರು ಎಂಟು ಪ್ರಯಾಣಿಕರನ್ನು ಸಾಗಿಸಬಹುದಾದ ಕಾರುಗಳಲ್ಲಿ ಕನಿಷ್ಠ ಆರು ಏರ್‌ಬ್ಯಾಗ್‌ಗಳನ್ನು ಒದಗಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

'ಇಂಟೆಲ್ ಇಂಡಿಯಾದ ಸುರಕ್ಷತಾ ಪಯೋನಿಯರ್ಸ್ ಕಾನ್ಫರೆನ್ಸ್ 2022' ಅನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ಪ್ರತಿ ವರ್ಷ ದೇಶಾದ್ಯಂತ ಐದು ಲಕ್ಷ ಅಪಘಾತಗಳಲ್ಲಿ ಸುಮಾರು 1.5 ಲಕ್ಷ ಜನರು ಸಾವನ್ನಪ್ಪುತ್ತಾರೆ. "ಮೋಟಾರು ವಾಹನಗಳಲ್ಲಿ ಕನಿಷ್ಠ ಆರು ಏರ್‌ಬ್ಯಾಗ್‌ಗಳನ್ನು ಒದಗಿಸುವುದನ್ನು ನಾವು ಕಡ್ಡಾಯಗೊಳಿಸಲು ನಿರ್ಧರಿಸಿದ್ದೇವೆ. ಜನರ ಜೀವ ಉಳಿಸಲು ಇದು ಅನಿವಾರ್ಯ" ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.

ಸಣ್ಣ ಕಾರುಗಳಿಗೆ ಆರು ಏರ್ ಬ್ಯಾಗ್ ಕಡ್ಡಾಯ ಆದೇಶ ಮರುಪರಿಶೀಲನೆಗೆ ಮನವಿಸಣ್ಣ ಕಾರುಗಳಿಗೆ ಆರು ಏರ್ ಬ್ಯಾಗ್ ಕಡ್ಡಾಯ ಆದೇಶ ಮರುಪರಿಶೀಲನೆಗೆ ಮನವಿ

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಜನವರಿಯಲ್ಲಿ ಮೋಟಾರು ವಾಹನಗಳ ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು, ಕೇಂದ್ರ ಮೋಟಾರು ವಾಹನಗಳ ನಿಯಮಗಳಿಗೆ (CMVR), 1989 ಅನ್ನು ತಿದ್ದುಪಡಿ ಮಾಡುವ ಮೂಲಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದೆ.

Six Air Bags Mandatory In Eight Seater Vehicle: Union Minister Nitin Gadkari

"ಜನವರಿ 14, 2022 ರಂದು ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ, ಇದು ಅಕ್ಟೋಬರ್ 1, 2022 ರ ನಂತರ ತಯಾರಿಸಲಾದ M1 ವರ್ಗದ ವಾಹನಗಳಿಗೆ ಮುಂಭಾಗದ ಸಾಲಿನ ಔಟ್‌ಬೋರ್ಡ್ ಆಸನಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಎರಡು ಬದಿಯಲ್ಲಿ ಏರ್ ಬ್ಯಾಗ್‌ಗಳನ್ನು ಅಳವಡಿಸಬೇಕು. ಎರಡು ಬದಿಯ ಕರ್ಟನ್/ಟ್ಯೂಬ್ ಏರ್ ಬ್ಯಾಗ್‌ಗಳು, ಔಟ್‌ಬೋರ್ಡ್ ಆಸನ ಸ್ಥಾನಗಳನ್ನು ಆಕ್ರಮಿಸಿಕೊಂಡಿರುವ ವ್ಯಕ್ತಿಗಳಿಗೆ ತಲಾ ಒಂದು ಏರ್ ಬ್ಯಾಗ್ ಅಳವಡಿಸಬೇಕು" ಎಂದು ಅಧಿಸೂಚನೆಯಲ್ಲಿ ಹೇಳಿದೆ ಎಂದರು.

Bharat NCAP : ಜಿಎಸ್‌ಆರ್ ಅಧಿಸೂಚನೆಗೆ ಸಾರಿಗೆ ಸಚಿವ ಗಡ್ಕರಿ ಅನುಮೋದನೆBharat NCAP : ಜಿಎಸ್‌ಆರ್ ಅಧಿಸೂಚನೆಗೆ ಸಾರಿಗೆ ಸಚಿವ ಗಡ್ಕರಿ ಅನುಮೋದನೆ

ಎಲ್ಲರ ಸಹಕಾರ ಅಗತ್ಯ ಎಂದ ಗಡ್ಕರಿ:

ಏರ್‌ಬ್ಯಾಗ್ ಎನ್ನುವುದು ವಾಹನದ ಪ್ರಯಾಣಿಕರ-ಸಂಯಮ ವ್ಯವಸ್ಥೆಯಾಗಿದ್ದು, ಘರ್ಷಣೆಯ ಸಮಯದಲ್ಲಿ ಚಾಲಕ ಮತ್ತು ವಾಹನದ ಡ್ಯಾಶ್‌ಬೋರ್ಡ್ ನಡುವೆ ಮಧ್ಯಪ್ರವೇಶಿಸುತ್ತದೆ, ಇದರಿಂದಾಗಿ ಗಂಭೀರವಾದ ಗಾಯಗಳನ್ನು ತಡೆಯುತ್ತದೆ. ಎಲ್ಲಾ ಕಾರು ಉತ್ಪಾದಕರು ಸಹಕಾರ ನೀಡುವ ಅಗತ್ಯವಿದೆ ಎಂದು ಹೇಳಿದರು.

Six Air Bags Mandatory In Eight Seater Vehicle: Union Minister Nitin Gadkari

ಹೆಚ್ಚಿನ ತೆರಿಗೆ ಮತ್ತು ಕಟ್ಟುನಿಟ್ಟಾದ ಸುರಕ್ಷತೆ ಮತ್ತು ಮಾನದಂಡಗಳು ತಮ್ಮ ಉತ್ಪನ್ನಗಳನ್ನು ದುಬಾರಿಯಾಗಿಸಿದೆ ಎಂದು ಆಟೋಮೊಬೈಲ್ ಉದ್ಯಮವು ಕಳವಳ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ನಿತಿನ್ ಗಡ್ಕರಿ ವಾಹನ ತಯಾರಿಕಾ ಕಂಪನಿಗಳಿಗೆ ಮನವಿ ಮಾಡಿದ್ದಾರೆ.

ಎಲ್ಲಾ ಜಾಗತಿಕ ಆಟೋಮೊಬೈಲ್ ಬ್ರಾಂಡ್‌ಗಳು ಭಾರತದಲ್ಲಿ ಲಭ್ಯವಿದೆ ಎಂದು ಗಡ್ಕರಿ ತಿಳಿಸಿದರು. ಸುರಕ್ಷಿತ ರಸ್ತೆಗಳು ಬಹಳ ಮುಖ್ಯ ಎಂದು ತಿಳಿಸಿದ ಅವರು, ಮೋಟಾರು ವಾಹನ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಸವಾಲಾಗಿದೆ ಎಂದು ಒಪ್ಪಿಕೊಂಡರು.

ಭಾರತೀಯ ರಸ್ತೆ ಮೂಲಸೌಕರ್ಯವು 2024ರ ವೇಳೆಗೆ ಅಮೆರಿಕ ದೇಶಕ್ಕೆ ಸಮನಾಗಿರುತ್ತದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary
To boost passenger safety, the government will make it mandatory for car manufacturers to provide at least six airbags for eight passenger cars, Union Minister Nitin Gadkari said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X