ಸುಪ್ರೀಂಕೋರ್ಟಿಗೆ ಸಲ್ಲಿಕೆಯಾದ ತಜ್ಞರ ವರದಿಯಲ್ಲಿ ಏನಿದೆ?

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 17: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಉನ್ನತ ತಂತ್ರಜ್ಞರ ಸಮಿತಿ ತನ್ನ ವರದಿಯನ್ನು ಸೋಮವಾರ(ಅಕ್ಟೋಬರ್ 17) ಸುಪ್ರೀಂಕೋರ್ಟಿಗೆ ಸಲ್ಲಿಸಿದೆ. ಈ ವರದಿಯಲ್ಲಿ ಅಣೆಕಟ್ಟುಗಳ ಸ್ಥಿತಿಗತಿ, ತಮಿಳುನಾಡು ಹಾಗೂ ಕರ್ನಾಟಕದ ಬೆಳೆಗಾರರ ಬವಣೆ, ಮಳೆ ಮುನ್ಸೂಚನೆ, ಪರಿಹಾರ ಸಾಧ್ಯತೆ ಬಗ್ಗೆ ವಿವರಣೆ ಇದೆ.

ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ಸಮಿತಿಯ ನೇತೃತ್ವ ವಹಿಸಿದ್ದರು. ಮಸೂದ್ ಹುಸೇನ್, ಆರ್ ಕೆ ಗುಪ್ತಾ ಅವರು ಸಮಿತಿಯ ಸದಸ್ಯರಾಗಿದ್ದರು. ಮಿಕ್ಕಂತೆ ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿಯ ಮುಖ್ಯ ಇಂಜಿನಿಯರುಗಳು ಈ ಪರಿಶೀಲನಾ ಪ್ರವಾಸದಲ್ಲಿ ಪಾಲ್ಗೊಂಡಿದ್ದರು.

 Cauvery Dispute : Technical Committee Submits its report to SC

* ಸಮಿತಿಯ ವರದಿಯಂತೆ ಕಾವೇರಿ ಕೊಳ್ಳದ ವ್ಯಾಪ್ತಿಗೆ ಬರುವ 48 ತಾಲೂಕುಗಳ ಪೈಕಿ 42 ತಾಲೂಕುಗಳು ಬರಪೀಡಿತವಾಗಿವೆ.
* ತಮಿಳುನಾಡು ಹಾಗೂ ಕರ್ನಾಟಕದ ಕಬ್ಬು ಬೆಳೆಗಾರರಿಗೆ ನೀರು ಪೂರೈಕೆಯಾಗಿಲ್ಲ.
* ಕರ್ನಾಟಕದ ಮಂಡ್ಯ ಜಿಲ್ಲೆ ಅತ್ಯಂತ ಹಾನಿಗೊಳಗಾಗಿದೆ ಹಾಗೂ ಆನೇಕ ರೈತರ ಆತ್ಮಹತ್ಯೆಗೆ ಕಾರಣವಾಗಿದೆ.
* ಅಕ್ಟೋಬರ್ 13, 2016ರಂತೆ ಕರ್ನಾಟಕದ ಅಣೆಕಟ್ಟುಗಳ ಸಂಗ್ರಹ 22.90 ಟಿಎಂಸಿ ಅಡಿಯಾದರೆ, ಮೆಟ್ಟೂರು ಜಲಾಶಯದ ಸಂಗ್ರಹ 31.66 ಟಿಎಂಸಿ ಅಡಿಯಷ್ಟಿದೆ.
* ಬರ ಪರಿಸ್ಥಿತಿಯಿಂದ ಕಾವೇರಿ ನದಿಪಾತ್ರದ ಜನರಲ್ಲಿ ನಿರುದ್ಯೋಗ ಸಮಸ್ಯೆ ಕೂಡಾ ಕಾಡುತ್ತಿದೆ.
* ಅನಾವೃಷ್ಟಿ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಸೂಕ್ತ ಕ್ರಮಗಳನ್ನು ಸರ್ಕಾರಗಳು ಕೂಡಲೇ ಪಾಲಿಸಬೇಕಿದೆ.
* ಉಭಯ ರಾಜ್ಯಗಳು ಕುಡಿಯುವ ನೀರಿಗೆ ಹೆಚ್ಚಿನ ಮಹತ್ವ ನೀಡಿದ್ದು, ಈ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕಕ್ಕೆ ನೀರಿನ ಅಗತ್ಯ:
* ಅಕ್ಟೋಬರ್ 1 ರಿಂದ ಮೇ 2017ರ ತನಕ 36.38 ಟಿಎಂಸಿ ಅಡಿ ನೀರು ಅಗತ್ಯವಿದೆ. ಸುಮಾರು 4.27 ಲಕ್ಷ ಎಕರೆಗೆ ನೀರುಣಿಸಬೇಕಿದೆ.
* ಬೆಂಗಳೂರಿನ ಕುಡಿಯುವ ನೀರಿನ ಅಗತ್ಯ ಪೂರೈಸಲು 23.10 ಟಿಎಂಸಿ ನೀರು ಅಗತ್ಯವಿದೆ.
* ಈ ವರದಿಯಲ್ಲಿ ಕೈಗಾರಿಕೆಗಳಿಗೆ ಬೇಕಾದ ನೀರಿನ ಅಗತ್ಯವನ್ನು ಪರಿಗಣಿಸಲಾಗಿಲ್ಲ.

ತಮಿಳುನಾಡಿನ ನೀರಿನ ಅಗತ್ಯ
* ಅಕ್ಟೋಬರ್ 1 ರಿಂದ ಮೇ 2017ರ ತನಕ 133 ಟಿಎಂಸಿ ಅಡಿ ನೀರು ಅಗತ್ಯವಿದೆ. ಸುಮಾರು 12 ಲಕ್ಷ ಎಕರೆಗೆ ನೀರುಣಿಸಬೇಕಿದೆ.
* ಕುಡಿಯುವ ನೀರಿನ ಅಗತ್ಯ ಪೂರೈಸಲು 22 ಟಿಎಂಸಿ ನೀರು ಬೇಕಿದೆ.
* ಪುದುಚೇರಿಗೆ ಇದೇ ಅವಧಿಯಲ್ಲಿ 3 ಟಿಎಂಸಿ ನೀರು ಅಗತ್ಯವಿದೆ.

ವರದಿಯ ಪೂರ್ಣ ಪಾಠ ಇಲ್ಲಿದೆ, ಡೌನ್ ಮಾಡಿಕೊಳ್ಳಿ


(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Cauvery Technical Committee today(October 17) submitted its report to the Supreme Court. The committee said that the Government of Karnataka has declared 42 out of the 48 talukas under the Cauvery basin as drought affected based on the guidelines of the Central government.
Please Wait while comments are loading...