ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Single use plastic ban : ಜುಲೈ 1ರಿಂದ ಸಿಂಗಲ್ ಯೂಸ್ ಪ್ಲಾಸ್ಟಿಕ್ ನಿಷೇಧ

|
Google Oneindia Kannada News

ನವದೆಹಲಿ, ಜೂನ್ 20: ಸರಕಾರ ಕಳೆದ ವರ್ಷ ಘೋಷಣೆ ಮಾಡಿದಂತೆ ಜುಲೈ 1ರಿಂದ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳು ನಿಷೇಧಗೊಳ್ಳಲಿವೆ. ಇಲ್ಲಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಎಂದರೆ ಒಮ್ಮೆ ಮಾತ್ರ ಬಳಸಿ ಬಿಸಾಡುವಂಥ ಪ್ಲಾಸ್ಟಿಕ್ ವಸ್ತುಗಳು.

ಪ್ಲಾಸ್ಟಿಕ್ ಕವರ್, ಸ್ಟ್ರಾಗಳು, ಕಟ್ಲೆರಿ, ಸಂಸ್ಕರಿತ ಆಹಾರದ ಪಾಕೆಟ್, ವ್ರಾಪರ್, ಕಾಟನ್ ಬಡ್ ಸ್ಟಿಕ್ ಇತ್ಯಾದಿಗಳು ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳಾಗಿವೆ. ಅದರಲ್ಲೂ ನೊರೆಯುಕ್ತ ಪ್ಲಾಸ್ಟಿಕ್ ವಸ್ತುವಿನಿಂದ ಮಾಡಿದ ವಸ್ತುಗಳಾದ ಪ್ಲಾಸ್ಟಿಕ್ ಪ್ಲೇಟ್, ಕಪ್ ಇತ್ಯಾದಿಗಳಿಂದ ಪರಿಸರಕ್ಕೆ ಭಾರೀ ಹಾನಿಯಾಗುತ್ತದೆ. ಹೀಗಾಗಿ, ವಿಶ್ವಸಂಸ್ಥೆಯ ಆಶಯದ ಅನುಸಾರ ಭಾರತ ಇಂಥ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲು ಮುಂದಾಗಿದೆ.

ಪ್ಲಾಸ್ಟಿಕ್ ನಿಷೇಧಿಸಿದರೆ 10 ರೂ ಪ್ಯಾಕೆಟ್ ಆಗಲ್ಲ: ಪಾನೀಯ ಕಂಪನಿಗಳ ಅಳಲುಪ್ಲಾಸ್ಟಿಕ್ ನಿಷೇಧಿಸಿದರೆ 10 ರೂ ಪ್ಯಾಕೆಟ್ ಆಗಲ್ಲ: ಪಾನೀಯ ಕಂಪನಿಗಳ ಅಳಲು

ಭಾರತದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಹೇಗೆ?
ಪುನವರ್ಬಳಕೆ ಸಾಧ್ಯವಿಲ್ಲದ ಮತ್ತು ಬಹು ಎಳೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲು 2016ರಲ್ಲಿ ಭಾರತ ನಿಯಮ ರೂಪಿಸಿತು. ೨೦೧೮ರಲ್ಲಿ ಜಾರಿಗೆ ಬಂದ ಈ ನಿಯಮದಲ್ಲಿ 50 ಮೈಕ್ರಾನ್‌ಗಿಂತ ಕಡಿಮೆ ಮಂದದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ನಿಷೇಧಿಸಲಾಯಿತು. ನಂತರ ಮತ್ತೆ ಈ ನಿಯಮದಲ್ಲಿ ತುಸು ಸಡಿಲಿಕೆ ತಂದಿತು. ನಿಷೇಧಿತ ಪಟ್ಟಿಯಲ್ಲಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳನ್ನು ಸೇರಿಸಿರಲಿಲ್ಲ.

Single Use Plastics Banned in India From July 1st

ಅದೇ ವರ್ಷದ ವಿಶ್ವ ಪರಿಸರ ದಿನದಂದು ಭಾರತ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತು ನಿಷೇಧಿಸಲು ನಿರ್ಧರಿಸಿತು. ಅದರಂತೆ 2022, ಜುಲೈ 1ರಿಂದ ಪಾಲಿಸ್ಟಿರಿನ್ ಇತ್ಯಾದಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುವಿನ ಉತ್ಪಾದನೆ, ಆಮದು, ವಿತರಣೆ, ಸಂಗ್ರಹ, ಮಾರಾಟ ಮಾಡುವಂತಿಲ್ಲ ಎಂದು ಪರಿಸರ ಸಚಿವಾಲಯ ಸೂಚನಾವಳಿ ಪ್ರಕಟಿಸಿತು.

Single Use Plastics Banned in India From July 1st

ಪ್ಲಾಸ್ಟಿಕ್‌ನಿಂದ ಏನು ಹಾನು?
* ರೀಸೈಕಲ್ ಅಥವಾ ಮರುಬಳಕೆಯಾಗದ ಪ್ಲಾಸ್ಟಿಕ್ ವಸ್ತುಗಳನ್ನು ಪರಿಸರದಲ್ಲಿ ಹಾಗೇ ಬಿಟ್ಟರೆ ಅದು ಕರಗಲು ಸಾವಿರಕ್ಕೂ ಹೆಚ್ಚು ವರ್ಷಗಳು ತಗುಲುತ್ತವೆ.
* ನಮ್ಮ ನೆಲದ ಬಹಳಷ್ಟು ಜಾಗದಲ್ಲಿ ಪ್ಲಾಸ್ಟಿಕ್ ವಸ್ತುಗಳು ತುಂಬಿಹೋಗುತ್ತಿವೆ. ಅಂತರ್ಜಲಕ್ಕೆ ವಿಷಕಾರಿ ವಸ್ತುಗಳು ಸೇರಿಕೊಳ್ಳಲು ಈ ಪ್ಲಾಸ್ಟಿಕ್ ವಸ್ತುಗಳು ಸಹಕಾರಿ ಆಗುತ್ತವೆ.
* ಇನ್ನು, ಪ್ಲಾಸ್ಟಿಕ್ ವಸ್ತುಗಳಿಗೆ ಬೆಂಕಿ ತಗುಲಿದರೆ ಅದರಿಂದ ವಿಷಯುಕ್ತ ಅನಿಲ ಹೊರಬಂದು ಪರಿಸರ ಸೇರಿಕೊಳ್ಳುತ್ತವೆ.
* ಪ್ಲಾಸ್ಟಿಕ್ ವಸ್ತುಗಳು ಸಮುದ್ರ ಸೇರಿಕೊಂಡರೆ ಅಲ್ಲಿನ ಸಾಗರಜೀವಿಗಳಿಗೆ ಹಾನಿ ಉಂಟು ಮಾಡಬಲ್ಲುವು.

(ಒನ್ಇಂಡಿಯಾ ಸುದ್ದಿ)

English summary
Single use plastics like straws, cutlery etc are banned in India from July 1st as per environment ministry notification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X