ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2022ರ ಜುಲೈಯಿಂದ ಏಕಬಳಕೆ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ನಿಷೇಧ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಆಗಸ್ಟ್‌ 13: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ಸರ್ಕಾರ ಮಹತ್ವದ ಘೋಷಣೆ ಮಾಡಿದೆ. 2022ರ ಜುಲೈ ತಿಂಗಳಿನಿಂದ ಏಕಬಳಕೆ ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಘೋಷಣೆ ಮಾಡಿದೆ.

ಕೇಂದ್ರ ಪರಿಸರ ಸಚಿವಾಲಯ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ತಿದ್ದುಪಡಿ ನಿಯಮ 2021ರ ಸೂಚನೆ ನೀಡಿದೆ. 2022ರ ಜುಲೈ ಇಂದ ಹೆಚ್ಚಿನ ತ್ಯಾಜ್ಯಕ್ಕೆ ಕಾರಣವಾಗುತ್ತಿರುವ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದೆ.

ಏಕ ಮುಖ ಪ್ಲಾಸ್ಟಿಕ್‌ ನಿಷೇಧಿಸಿ 4 ವರ್ಷ ಕಳೆದರೂ ಕಡಿಮೆಯಾಗಿಲ್ಲ ಬಳಕೆ ಏಕ ಮುಖ ಪ್ಲಾಸ್ಟಿಕ್‌ ನಿಷೇಧಿಸಿ 4 ವರ್ಷ ಕಳೆದರೂ ಕಡಿಮೆಯಾಗಿಲ್ಲ ಬಳಕೆ

2019ರಲ್ಲಿ ನಡೆದ 4ನೇ ವಿಶ್ವಸಂಸ್ಥೆ ಪರಿಸರ ಅಸೆಂಬ್ಲಿಯಲ್ಲಿ ಭಾರತ 2022ರ ವೇಳೆಗೆ ಏಕಬಳಕೆ ಪ್ಲಾಸ್ಟಿಕ್ ಉತ್ಪನ್ನಗಳಿಂದ ಉಂಟಾಗುವ ಮಾಲಿನ್ಯವನ್ನು ಬಗೆಹರಿಸುವ ನಿರ್ಣಯ ಮಂಡಿಸಿತ್ತು. ಆಗ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಕರೆ ನೀಡಿದ್ದರು.

Single Use Plastic Products To Be Prohibited From July 1, 2022

ದೇಶದಲ್ಲಿ ಏಕಬಳಕೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಪ್ಲಾಸ್ಟಿಕ್ ಪರಿಸರಕ್ಕೆ ಅತ್ಯಂತ ಹಾನಿಕರವಾಗಿದ್ದು, ನದಿ, ಸಮುದ್ರಗಳಲ್ಲಿ ಸೇರಿ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ವರ್ಷ ಜುಲೈ 22ರಿಂದ ಏಕಬಳಕೆ ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಕಡ್ಡಿಯಿರುವ ಇಯರ್ ಬಡ್, ಬಲೂನ್‌ನ ಪ್ಲಾಅಸ್ಟಿಕ್ ಕಡ್ಡಿ, ಪ್ಲಾಸ್ಟಿಕ್ ಧ್ವಜ, ಐಸ್‌ಕ್ರೀಂ ಕ್ಯಾಂಡಿ ಪ್ಲಾಸ್ಟಿಕ್ ಕಡ್ಡಿ, ಜ್ಯೂಸ್ ಸ್ಟ್ರಾ, ಬಾಟಲಿ ಸೇರಿ ಹಲವು ಏಕಬಳಕೆ ಪ್ಲಾಸ್ಟಿಕ್ ವಸ್ತುಗಳು ನಿಷೇಧವಾಗುತ್ತಿವೆ. 100 ಮೈಕ್ರಾನ್‌ಗೂ ಕಡಿಮೆಯಿರುವ ಪ್ಲಾಸ್ಟಿಕ್‌ನ ಆಲಂಕಾರಿಕ ವಸ್ತುಗಳು, ಚಮಚೆಗಳು, ಚಾಕು, ಟ್ರೇ, ಸ್ವೀಟ್‌ ಬಾಕ್ಸ್‌ಗಳಿಗೆ ಬಳಸುವ ಪ್ಲಾಸ್ಟಿಕ್ ಕಾರ್ಡ್, ಆಮಂತ್ರಣ ಪತ್ರಿಕೆ, ಸಿಗರೇಟ್ ಪ್ಯಾಕ್‌ಗಳು, ಪಿವಿಸಿ ಬ್ಯಾನರ್‌ಗಳನ್ನು ನಿಷೇಧಿಸಲಾಗುತ್ತಿದೆ.

ಇದರೊಂದಿಗೆ ಪಾಲಿಥೀನ್ ಚೀಲಗಳ ಪ್ರಮಾಣವನ್ನು 50 ಮೈಕ್ರಾನ್‌ನಿಂದ 150 ಮೈಕ್ರಾನ್‌ಗೆ ಏರಿಸಲಾಗಿದೆ. ಎರಡು ಹಂತಗಳಲ್ಲಿ ಇದನ್ನು ಜಾರಿಗೊಳಿಸಲಾಗುತ್ತಿದೆ. ಮೊದಲ ಹಂತ ಈ ಸೆಪ್ಟೆಂಬರ್ 30ರಿಂದ ಆರಂಭಗೊಳ್ಳುತ್ತಿದೆ. 75 ಮೈಕ್ರಾನ್‌ಗಳಿಗಿಂತ ಕಡಿಮೆ ಇರುವ ಪಾಲಿಥೀನ್‌ ಚೀಲಗಳ ಮೇಲೆ ನಿಷೇಧ ಹೇರಲಾಗುತ್ತಿದೆ. ಮುಂದಿನ ವರ್ಷ ಡಿಸೆಂಬರ್ 31ರಿಂದ 120 ಮೈಕ್ರಾನ್‌ಗಳಿಗಿಂತ ಕಡಿಮೆ ಪಾಲಿಥೀನ್ ಬ್ಯಾಗ್ ನಿಷೇಧಿಸಲಾಗುತ್ತದೆ.

ಪ್ಲಾಸ್ಟಿಕ್ ಉತ್ಪಾದಕ ಕಂಪನಿಗಳು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಗಿ ಪಡೆಯಬೇಕಿದೆ. ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆಯಲ್ಲಿ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ತೆರಬೇಕಾಗುತ್ತದೆ. ಜೊತೆಗೆ ಪರವಾನಗಿ ರದ್ದಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಕಾನಾನು 2016ರ ಪ್ರಕಾರ, ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳಲ್ಲಿ ಗುರುತಿಸಲಾಗದು. ಅದನ್ನು ಉತ್ಪಾದಕರು, ಆಮದುದಾರರು ಮತ್ತು ಬ್ರ್ಯಾಂಡ್ ಮಾಲೀಕರ ಜವಾಬ್ದಾರಿ ಮೂಲಕ ಸುಸ್ಥಿರ ಪರಿಸರದ ನಿಟ್ಟಿನಲ್ಲಿ ನಿರ್ವಹಣೆ ಮಾಡಬೇಕಾಗಿದೆ. ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ತಿದ್ದುಪಡಿ ಕಾನೂನುಗಳ ಮೂಲಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪರಿಸರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಜೊತೆಗೆ ಇದು ಕಾಂಪೋಸ್ಟ್‌ ಮಾಡಬಹುದಾದ ಪ್ಲಾಸ್ಟಿಕ್‌ನಿಂದ ತಯಾರಿಸದ ಚೀಲಗಳಿಗೆ ಅನ್ವಯವಾಗುವುದಿಲ್ಲ. ತ್ಯಾಜ್ಯ ವಿಂಗಡಣೆ, ವಿಲೇವಾರಿ ಖಚಿತಪಡಿಸಿಕೊಳ್ಳಲು ಸ್ಥಳೀಯ ಸಂಸ್ಥೆಗಳು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳು ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಜವಾಬ್ದಾರಿ ಹೊಂದಿರುತ್ತವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮುಂದಿನ ದಿನಗಳಲ್ಲಿ ಸಂಪೂರ್ಣ ನಿಷೇಧದ ಕುರಿತು ಚಿಂತನೆ ಮಾಡಲಾಗಿದೆ ಎಂದು ಪರಿಸರ ಇಲಾಖೆ ತಿಳಿಸಿದೆ.

English summary
Several single use plastic products to be prohibited from July 1, 2022,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X