ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಈ 2 ಲಸಿಕೆಗಳ ಕೇವಲ 1 ಡೋಸ್‌ ಡೆಲ್ಟಾ ವಿರುದ್ದ ಪರಿಣಾಮಕಾರಿಯಲ್ಲ': ಅಧ್ಯಯನದಿಂದ ಬಹಿರಂಗ

|
Google Oneindia Kannada News

ನವದೆಹಲಿ, ಜು.09: ''ಹೊಸ ಸಂಶೋಧನೆಯ ಪ್ರಕಾರ, Sars-Cov-2 ಸೋಂಕಿಗೆ ಒಳಗಾಗದ ವ್ಯಕ್ತಿಗಳು ಕೋವಿಡ್‌ ಸೋಂಕಿನ ಡೆಲ್ಟಾ ರೂಪಾಂತರದ ವಿರುದ್ಧ ಹೋರಾಡಲು ಫೈಜರ್‌-ಬಯೋಟೆಕ್ ಅಥವಾ ಅಸ್ಟ್ರಾಜೆನೆಕಾ ಲಸಿಕೆಗಳ ಕೇವಲ ಒಂದು ಡೋಸ್‌ ಯಾವುದೇ ಪ್ರಯೋಜನ ಉಂಟು ಮಾಡುವುದಿಲ್ಲ, ಈ ಲಸಿಕೆಯ ಒಂದು ಡೋಸ್‌ ಪರಿಣಾಮಕಾರಿಯಲ್ಲ,'' ಎಂದು ಅಧ್ಯಯನವೊಂದು ಬಹಿರಂಗ ಮಾಡಿದೆ.

ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಡೆಲ್ಟಾ ರೂಪಾಂತರವು ವಿಶ್ವದಾದ್ಯಂತ ವೇಗವಾಗಿ ಪ್ರಬಲವಾಗುತ್ತಿರುವುದರಿಂದ ಕೊರೊನಾವೈರಸ್ ರೂಪಾಂತರಗಳಿಂದ ಉಂಟಾಗುವ ಪರಿಣಾಮಗಳನ್ನು ವಿವರಿಸಿದೆ.

 'ನಮ್ಮ ಒಂದು ಡೋಸ್‌ ಲಸಿಕೆ ಡೆಲ್ಟಾ ವಿರುದ್ದ ಪರಿಣಾಮಕಾರಿ': ಜಾನ್ಸನ್ & ಜಾನ್ಸನ್‌ 'ನಮ್ಮ ಒಂದು ಡೋಸ್‌ ಲಸಿಕೆ ಡೆಲ್ಟಾ ವಿರುದ್ದ ಪರಿಣಾಮಕಾರಿ': ಜಾನ್ಸನ್ & ಜಾನ್ಸನ್‌

ಹಾಗೆಯೇ ''ಈ ಡೆಲ್ಟಾ ರೂಪಾಂತರದ ವಿರುದ್ದ ಫೈಜರ್‌-ಬಯೋಟೆಕ್ ಅಥವಾ ಅಸ್ಟ್ರಾಜೆನೆಕಾ ಲಸಿಕೆಗಳ ಕೇವಲ ಒಂದು ಡೋಸ್‌ ಪ್ರತಿಕಾಯಗಳನ್ನು ಹುಟ್ಟು ಹಾಕಲು ಹೆಚ್ಚು ಪರಿಣಾಮಕಾರಿಯಲ್ಲ,'' ಎಂದು ಹೇಳಿದೆ.

 ಈ ಲಸಿಕೆ ಪಡೆದವರಿಗೆ ಡೆಲ್ಟಾ ಬಂದರೆ ಪ್ರತಿಕಾಯಗಳ ನಾಶ ತಪ್ಪಿದ್ದಲ್ಲ

ಈ ಲಸಿಕೆ ಪಡೆದವರಿಗೆ ಡೆಲ್ಟಾ ಬಂದರೆ ಪ್ರತಿಕಾಯಗಳ ನಾಶ ತಪ್ಪಿದ್ದಲ್ಲ

ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ರೂಪಾಂತರವು ಈಗ ರೂಪಾಂತರವನ್ನು ಹುಟ್ಟುಹಾಕಿದೆ ಎಂದು ಆತಂಕ ವ್ಯಕ್ತಪಡಿಸಿರುವ ಸಂಶೋಧಕರು ಇದೇ ವೇಳೆ, ಫೈಜರ್‌-ಬಯೋಟೆಕ್ ಅಥವಾ ಅಸ್ಟ್ರಾಜೆನೆಕಾ ಲಸಿಕೆಗಳು ಡೆಲ್ಟಾ ಬಂದಾಗ ''ಪ್ರತಿಕಾಯಗಳ ನಾಶಕ್ಕೆ ಬ್ರೇಕ್‌ ಹಾಕಲ್ಲ'' ಎಂದು ಹೇಳಿದ್ದಾರೆ. ''SARS-CoV-2 ನ ಡೆಲ್ಟಾ ರೂಪಾಂತರವು ಹೆಚ್ಚು ಹರಡಬಲ್ಲದು ಹಾಗೂ ಕೊರೊನಾ ಸೋಂಕು ಬಂದ ಬಳಿಕ ದೇಹದಲ್ಲಿ ಸೃಷ್ಟಿಯಾಗಿರುವ ಪ್ರತಿಕಾಯವನ್ನು ಡೆಲ್ಟಾ ರೂಪಾಂತರ ಶೇ. 60 ರಷ್ಟು ಕಡಿಮೆ ಮಾಡಬಹುದು,'' ಎಂದು ಇಂಪೀರಿಯಲ್ ಕಾಲೇಜು ಲಂಡನ್ ಮತ್ತು ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯದ INSACOG ನ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಈ ಅಧ್ಯಯನದಂತೆ ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ''ಫೈಜರ್‌-ಬಯೋಟೆಕ್ ಅಥವಾ ಅಸ್ಟ್ರಾಜೆನೆಕಾ ಲಸಿಕೆಗಳು ಡೆಲ್ಟಾ ಬಂದಾಗ ಪ್ರತಿಕಾಯಗಳ ನಾಶದ ವಿರುದ್ದ ಯಾವುದೇ ಪರಿಣಾಮ ಬೀರುವುದಿಲ್ಲ'' ಎಂದು ಉಲ್ಲೇಖಿಸಿದೆ. ಹಾಗೆಯೇ ''ಈ ಎರಡು ಲಸಿಕೆಗಳ ಎರಡೂ ಡೋಸ್‌ ಲಸಿಕೆ ಪಡೆದರೆ ಡೆಲ್ಟಾ ವಿರುದ್ದ ಪರಿಣಾಮಕಾರಿಯಾಗುತ್ತದೆ,'' ಎಂದು ಅಧ್ಯಯನ ಸೂಚಿಸಿದೆ.

 ಡೆಲ್ಟಾವನ್ನು ಕಾಳಜಿಯ ರೂಪಾಂತರ: ವಿಶ್ವ ಆರೋಗ್ಯ ಸಂಸ್ಥೆ

ಡೆಲ್ಟಾವನ್ನು ಕಾಳಜಿಯ ರೂಪಾಂತರ: ವಿಶ್ವ ಆರೋಗ್ಯ ಸಂಸ್ಥೆ

ಬಿ .1.617 ವಂಶಾವಳಿಯ ಉಪವಿಭಾಗವಾದ ಡೆಲ್ಟಾ ರೂಪಾಂತರವು ವಿಶ್ವಾದ್ಯಂತ ಸಾಂಕ್ರಾಮಿಕ ಬೆದರಿಕೆಯನ್ನು ಒಡ್ಡಿರುವ ಸಂದರ್ಭದಲ್ಲಿ ಇತ್ತೀಚಿನ ಸಂಶೋಧನೆಗಳು ಫೈಜರ್‌-ಬಯೋನೆಟೆಕ್ ಅಥವಾ ಅಸ್ಟ್ರಾಜೆನೆಕಾ ಲಸಿಕೆಯ ಎರಡೂ ಡೋಸ್‌ ಲಸಿಕೆ ಪಡೆಯಲು ಶಿಫಾರಸು ಮಾಡಿದೆ. ಭಾರತದ ಎರಡನೇ ಕೊರೊನಾ ಅಲೆಗೆ ಸಂದರ್ಭ ದೇಶದಲ್ಲಿ ಹೆಚ್ಚಾಗಿ ಡೆಲ್ಟಾ ರೂಪಾಂತರ ಹರಡಿದೆ ಎಂದು ನಂಬಲಾಗಿದೆ. ವಿಶ್ವದಾದ್ಯಂತ ಮತ್ತೆ ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾದ ಈ ಡೆಲ್ಟಾ ರೂಪಾಂತರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಈ ರೂಪಾಂತರವು ''ಕಾಳಜಿಯ ರೂಪಾಂತರ'' ಎಂದು ಹೇಳಿದೆ.

ಡೆಲ್ಟಾದಿಂದಾಗಿ ಶೇ.60 ರಷ್ಟು ಕೋವಿಡ್‌ ಪ್ರತಿಕಾಯ ನಾಶ: ದೆಹಲಿ ಅಧ್ಯಯನ ವರದಿಡೆಲ್ಟಾದಿಂದಾಗಿ ಶೇ.60 ರಷ್ಟು ಕೋವಿಡ್‌ ಪ್ರತಿಕಾಯ ನಾಶ: ದೆಹಲಿ ಅಧ್ಯಯನ ವರದಿ

 ದೇಶದಲ್ಲಿ ಶೇ.5 ಕ್ಕಿಂತ ಕಡಿಮೆ ಜನರಿಗೆ ಸಂಪೂರ್ಣ ಲಸಿಕೆ!

ದೇಶದಲ್ಲಿ ಶೇ.5 ಕ್ಕಿಂತ ಕಡಿಮೆ ಜನರಿಗೆ ಸಂಪೂರ್ಣ ಲಸಿಕೆ!

ಭಾರತದಲ್ಲಿ, ಜನಸಂಖ್ಯೆಯ ಶೇ.5 ಕ್ಕಿಂತ ಕಡಿಮೆ ಜನರಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ. ಈ ಅಧ್ಯಯನದ ಪ್ರಕಾರ ಈ ಹಿನ್ನೆಲೆ ದೇಶದಲ್ಲಿ ಡೆಲ್ಟಾ ರೂಪಾಂತರದ ಹರಡುವಿಕೆಯು ಹೆಚ್ಚಾಗಿದೆ ಹಾಗೂ ಅಪಾಯ ಅಧಿಕವಾಗಿದೆ ಎಂದು ಸೂಚಿಸುತ್ತದೆ. ಕಳೆದ ಕೆಲವು ದಿನಗಳಲ್ಲಿ ಭಾರತವು ಲಸಿಕೆ ಅಭಿಯಾನವನ್ನು ಹೆಚ್ಚಿಸಿಕೊಂಡಿದೆ. ಆದರೆ ತಜ್ಞರ ಪ್ರಕಾರ ಕೋವಿಡ್‌ ಸೋಂಕಿನ ಮೂರನೇ ಅಲೆಯು ಅಕ್ಟೋಬರ್‌ನಲ್ಲಿ ಅಧಿಕವಾಗುವ ಕಾರಣ ದೇಶದಲ್ಲಿ ಒಟ್ಟಾರೆ ಲಸಿಕೆ ನೀಡಿಕೆ ವ್ಯಾಪ್ತಿಯು ಅಧಿಕವಾಗಬೇಕಿದೆ. ''ಈಗ ನೀಡುತ್ತಿರುವ ಲಸಿಕೆ ವೇಗವೂ ಸಾಲುತ್ತಿಲ್ಲ,'' ಎಂಬುದು ತಜ್ಞರ ಅಭಿಪ್ರಾಯವಾಗಿದೆ.

 ಲಾಕ್‌ಡೌನ್‌ ತೆರೆಯುವಾಗ ಎಚ್ಚರವಾಗಿರಿ

ಲಾಕ್‌ಡೌನ್‌ ತೆರೆಯುವಾಗ ಎಚ್ಚರವಾಗಿರಿ

ಹಲವಾರು ರಾಜ್ಯಗಳಲ್ಲಿ ವಾರಗಳ ಲಾಕ್‌ಡೌನ್ ತರಹದ ನಿರ್ಬಂಧಗಳ ನಂತರ, ಕೋವಿಡ್ -19 ಪ್ರಕರಣಗಳ ಕುಸಿತದ ನಡುವೆ ಅಧಿಕಾರಿಗಳು ಕ್ರಮೇಣ ಕಠಿಣ ಕ್ರಮಗಳನ್ನು ಕೈಬಿಡಲು ಪ್ರಾರಂಭಿಸಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತುರ್ತು ಕಾರ್ಯಕ್ರಮದ ಮುಖ್ಯಸ್ಥ ಮೈಕೆಲ್ ರಯಾನ್, ಆರ್ಥಿಕತೆಯನ್ನು ಪುನಃ ತೆರೆಯುವಾಗ ದೇಶಗಳು ತೀವ್ರ ಎಚ್ಚರಿಕೆ ವಹಿಸಬೇಕೆಂದು ಬುಧವಾರ ಒತ್ತಾಯಿಸಿದ್ದಾರೆ. "ರೂಪಾಂತರಗಳ ಉಪಸ್ಥಿತಿಯಲ್ಲಿ ಕಡಿಮೆ ಮಟ್ಟದ ಲಸಿಕೆ ವ್ಯಾಪ್ತಿಯನ್ನು ಹೊಂದಿರುವ ದೇಶಗಳು ಲಾಕ್‌ಡೌನ್‌ ತೆಗೆಯುವುದು ನಿಮ್ಮ ಆಸ್ಪತ್ರೆಗಳು ಮತ್ತೆ ಭರ್ತಿಯಾಗಲು ಮಾಡಿಕೊಟ್ಟ ದಾರಿಯಂತಾಗಿದೆ. ಇದು ಸಂಪೂರ್ಣವಾಗಿ ತಪ್ಪಿಸಬೇಕಾದ ವಿಷಯ," ಎಂದು ಜಿನೀವಾದಲ್ಲಿ ಸುದ್ದಿಗೋಷ್ಠಿಯಲ್ಲಿ ರಿಯಾನ್ ಹೇಳಿದ್ದಾರೆ.

ಸಂಪೂರ್ಣ ಲಸಿಕೆ ಪಡೆದ ಪ್ರಯಾಣಿಕರು ಪರೀಕ್ಷೆ, ಕ್ವಾರಂಟೈನ್‌ಗೆ ಒಳಗಾಗಬೇಕಿಲ್ಲ: ತಜ್ಞರುಸಂಪೂರ್ಣ ಲಸಿಕೆ ಪಡೆದ ಪ್ರಯಾಣಿಕರು ಪರೀಕ್ಷೆ, ಕ್ವಾರಂಟೈನ್‌ಗೆ ಒಳಗಾಗಬೇಕಿಲ್ಲ: ತಜ್ಞರು

Array

Array

ಜಾನ್ಸನ್ & ಜಾನ್ಸನ್ ಸಂಸ್ಥೆಯ ಕೊರೊನಾವೈರಸ್‌ ಲಸಿಕೆಯು ಪಡೆದ ಎಂಟು ತಿಂಗಳ ನಂತರವೂ ಹೆಚ್ಚು ಸಾಂಕ್ರಾಮಿಕವಾಗಿರುವ ''ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿ'' ಯಾಗಿದೆ ಎಂದು ಈ ಹಿಂದೆ ಸಂಸ್ಥೆಯು ತಿಳಿಸಿದೆ. ''ಈ ಲಸಿಕೆಯು ಮೂಲ ವೈರಸ್ ವಿರುದ್ಧದ ಪರಿಣಾಮಕಾರಿತ್ವಕ್ಕೆ ಹೋಲಿಸಿದರೆ, ರೂಪಾಂತರದ ವಿರುದ್ದದ ಪರಿಣಾಮವು ಕೊಂಚ ಕುಸಿತಕಂಡಿದೆ.ಆದರೆ ಈ ಲಸಿಕೆಯು ಕೊರೊನಾ ಸೋಂಕಿನ ರೂಪಾಂತರಗಳ ವಿರುದ್ದ ಶೇ.85 ರಷ್ಟು ಪರಿಣಾಮಕಾರಿಯಾಗಿದೆ. ಈ ಲಸಿಕೆ ಪಡೆದವರಿಗೆ ಕೊರೊನಾ ರೂಪಾಂತರ ತಗುಲಿದರೆ ಆಸ್ಪತ್ರೆಗೆ ದಾಖಲಾಗುವುದನ್ನು ಹಾಗೂ ಸಾವನ್ನು ತಡೆಯಲು ಸಹಕಾರಿಯಾಗುತ್ತದೆ,'' ಎಂದು ಹೇಳಿಕೊಂಡಿದೆ. "ಎಂಟು ತಿಂಗಳ ಪ್ರಸ್ತುತ ದತ್ತಾಂಶದ ಆಧಾರದಲ್ಲಿ ಇಲ್ಲಿಯವರೆಗೆ ಅಧ್ಯಯನ ಮಾಡಿದ ಪ್ರಕಾರ ಒಂದು ಡೋಸ್‌ ಜಾನ್ಸನ್ & ಜಾನ್ಸನ್‌ ಕೋವಿಡ್‌ ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿದ್ದು, ಬಲವಾದ ಪ್ರತಿಕಾಯವನ್ನು ಸೃಷ್ಟಿ ಮಾಡುತ್ತದೆ. ಆ ಪ್ರತಿಕಾಯವು ಕ್ಷೀಣಿಸುವುದಿಲ್ಲ, ಬದಲಾಗಿ ಕಾಲ ಕಳೆದಂತೆ ಅದರಲ್ಲಿ ಸುಧಾರಣೆಯನ್ನು ನಾವು ಗಮನಿಸಬಹುದು," ಎಂದು ಜೆ & ಜೆ ಔಷಧಿಗಳ ವ್ಯವಹಾರದ ಸಂಶೋಧನೆ ಮತ್ತು ಅಭಿವೃದ್ಧಿಯ ಮುಖ್ಯಸ್ಥ ಮಾಥಯ್‌ ಮಾಮೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Single shot of Pfizer, AstraZeneca barely work against Delta variant, reveals new study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X