ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರಾಜಿತಾಳನ್ನು ಜೀವಂತ ಉಳಿಸಲು ಅಮ್ಮ ಏನು ಮಾಡಲೂ ಸಿದ್ಧ

Google Oneindia Kannada News

ಹೆಣ್ಣಾಗಿ ಹುಟ್ಟುವುದೇ ಒಂದು ಶಾಪ ಎಂದು ಕೆಲವರು ಅಂದುಕೊಂಡಿರುತ್ತಾರೆ. ಅದು ಕಟುಸತ್ಯ. ಗಂಡು ಹೆಣ್ಣೆಂದು ತಾರತಮ್ಯ ಮಾಡುವುದು ಎಷ್ಟೇ ಕಡಿಮೆಯಾದರೂ ಇದು ಇದ್ದೇ ಇದೆ. ಪರಿಸ್ಥಿತಿ ಹೀಗಿರುವಾಗ, ಹೆಣ್ಣು ಹೆತ್ತಿದ್ದಕ್ಕೆ ಸೊಸೆಯನ್ನೇ ಮನೆಯಿಂದ ಹೊರಹಾಕಿದರೆ ಆ ಮಹಿಳೆಗೆ ಹೇಗಾಗಿರಬೇಡ. ಇಷ್ಟು ಸಾಲದೆಂಬಂತೆ, ಹೆತ್ತ ಮಗುವಿಗೆ ಹೃದಯದ ಸಮಸ್ಯೆಯೂ ಇದ್ದರೆ... ಛೆ, ಇಂಥ ಹೃದಯವಿದ್ರಾವಕ ಕಥೆ ಮುಂದಿದೆ ಓದಿ, ದಯವಿಟ್ಟು ಆ ಹೆಣ್ಣುಮಗಳಿಗೆ ಸಹಾಯ ಮಾಡಿ.

ಹೆಣ್ಣು ಮಗುವನ್ನು ಹೆತ್ತಿದ್ದಕ್ಕಾಗಿ ಗಂಡನ ಮನೆಯವರು ಅಂಕಿತಾಳನ್ನು ಮನೆಯಿಂದ ಹೊರಹಾಕಿದರು. ಇದರಿಂದ ಅವಳು ನೊಂದುಕೊಂಡಿದ್ದು ಅಷ್ಟಿಷ್ಟಲ್ಲ. ಆದರೆ ಅವಳ ನವಜಾತ ಮಗುವಿಗೆ ಹೃದಯದ ಸಮಸ್ಯೆ ಇದ್ದುದರಿಂದ ಅವಳು ಅದಕ್ಕಾಗಿ ಹಣವನ್ನು ತಾನೇ ಹೊಂದಿಸಲು ಕಷ್ಟಪಡುತ್ತಿದ್ದಾಳೆ. ಈಗ ಅವಳ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ.

ಈ ಸಮಾಜವೂ ಕೂಡ ಅವಳ ಸಮಸ್ಯೆಯನ್ನು ಸಾಮಾನ್ಯವೆಂಬಂತೆ ಪರಿಗಣಿಸಿಬಿಟ್ಟಿತು. ಅವಳ ಅತ್ತೆ ಮಾವಂದಿರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ. ಅವಳು ಎಲ್ಲರ ಮುಂದೆ ಮಾತನಾಡಲು ಭಯಪಟ್ಟುಕೊಂಡು ಅಸಹಾಯಕಳಂತೆ ಜೀವನವನ್ನು ನಡೆಸುತಿದ್ದಳು. ಅವಳು ತನ್ನ ಕುಟುಂಬಕ್ಕೆ ಕೆಟ್ಟ ಹೆಸರು ತರಬಾರದು ಎಂದು ಸುಮ್ಮನೆ ಇರುತ್ತಿದ್ದಳು. ಅವಳು ನೋವಿನಿಂದ ನರಳುತ್ತಾ ಹಲವು ರಾತ್ರಿಗಳನ್ನು ಕಳೆದಳು.

Single Mother Fights Against Society To Save Her Baby Girl Aparajitha

ಮಗು ಹುಟ್ಟಿದ ಮೇಲೆ ಮಾತ್ರವಲ್ಲ ಮದುವೆ ಆದಾಗಿನಿಂದ ಅಂಕಿತಾ ಕಷ್ಟ ಅನುಭವಿಸುತ್ತಲೇ ಬಂದಿದ್ದಾಳೆ. ಅಂಕಿತಾ ಎಲ್ಲಾ ನಿಂದನೆಗಳಿಗೂ ಬಲಿಪಶುವಾಗಿದ್ದಳು. ಆದರೆ ಈ ಎಲ್ಲಾ ಕಷ್ಟಗಳ ಮಧ್ಯೆಯೂ ಅವಳು ಒಳ್ಳೆಯಾಗುತ್ತದೆ ಎಂಬ ಭರವಸೆ ಅವಳಿಗೆ ಇದ್ದೇ ಇತ್ತು. ಮಗುವಾದ ಮೇಲಾದರೂ ಒಳ್ಳೆಯದಾಗುತ್ತದೆ ಎಂದು ಕಾತುರದಿಂದ ಕಾದಿದ್ದಳು.

ಸ್ವಲ್ಪ ದಿನಗಳ ನಂತರ ಎಲ್ಲಾ ಸಮಸ್ಯೆಗಳು ಕಳೆದು ಅವಳಿಗೆ ಒಳ್ಳೆಯದಾಗುತ್ತದೆ, ಎಲ್ಲಾ ಕಷ್ಟಗಳಿಗೂ ಕೊನೆಯಾಗುತ್ತದೆ ಎಂದು ಅವಳು ನಂಬಿಕೊಂಡಿದ್ದಳು. ಅದಕ್ಕೆ ಸರಿಯಾಗಿ ಅವಳು ಗರ್ಭವತಿಯಾದಳು. ಇನ್ನು ಮುಂದೆಯಾದರೂ ನಾನು ನೆಮ್ಮದಿಯ ಜೀವನ ನಡೆಸಬಹುದು ಎಂದುಕೊಂಡಿದ್ದಳು. ಆದರೆ ಅದರಿಂದ ಇನ್ನೂ ತೊಂದರೆಗಳಾಗುತ್ತವೆ ಎಂದು ಅವಳು ಕನಸುಮನಸಿನಲ್ಲಿಯೂ ಭಾವಿಸಿರಲಿಲ್ಲ.

"ನನ್ನ ಗಂಡ ಮತ್ತು ಅವನ ಮನೆಯವರು ನಾನು ಗರ್ಭಿಣಿ ಎಂಬ ವಿಷಯ ತಿಳಿದು ತುಂಬಾ ಸಂತೋಷವಾಗಿದ್ದರು. ಆದರೆ ಆ ಸಂತೋಷ ಕೆಲವು ದಿನಗಳು ಮಾತ್ರವೇ ಎಂಬ ವಿಷಯ ನನಗೆ ತಿಳಿದಿರಲಿಲ್ಲ" ಎಂದು ಅಂಕಿತ ಪ್ರಲಾಪಿಸುತ್ತಾಳೆ.

Single Mother Fights Against Society To Save Her Baby Girl Aparajitha

ಅವಳು 5 ತಿಂಗಳ ಗರ್ಭಿಣಿಯಾಗಿದ್ದಾಗ ಸ್ಕ್ಯಾನಿಂಗ್ ನಿಂದ ತಿಳಿದ ವಿಷಯವೇನೆಂದರೆ ಅವಳ ಹೊಟ್ಟೆಯಲ್ಲಿದ್ದ ಮಗುವಿಗೆ ಹೃದಯದ ತೊಂದರೆ ಇದೆ ಎಂದು. ಅವಳ ಗಂಡ ಮತ್ತು ಅತ್ತೆ ಮಾವ ಈ ವಿಷಯ ತಿಳಿದರೂ ಕೂಡ ಅವಳಿಗೆ ಬೆಂಬಲವಾಗಿಯೇ ನಿಂತಿದ್ದರು. ಅವರು ಆ ಮಗುವಿನ ಜೀವನಕ್ಕಾಗಿ ಹೋರಾಡಲು ಸಿದ್ಧವಾಗಿದ್ದರು. ಅವಳ ದುರಾದೃಷ್ಟಕ್ಕೆ ಹೆಣ್ಣು ಮಗು ಹುಟ್ಟಿದ್ದಕ್ಕೆ ಅವಳ ಗಂಡನ ಮನೆಯಲ್ಲಿ ಎಲ್ಲರ ವರ್ತನೆಯಲ್ಲೂ ಬದಲಾಯಿತು. ಇದರ ಜೊತೆಗೆ ಆ ಮುಗುವಿಗೆ ಹೃದಯದ ಕಾಯಿಲೆ ಇದೆ ಅದಕ್ಕೆ ಖರ್ಚು ಬೇರೆ ಮಾಡಬೇಕು ಎಂಬ ಕಾರಣವೂ ಅವರಿಗೆ ಪುಷ್ಟಿಯನ್ನು ನೀಡಿತ್ತು.

"ಇಡೀ ಪ್ರಪಂಚದ ವಿರುದ್ಧವಾಗಿ ನಾನು ಮತ್ತು ನನ್ನ ಮಗಳು ನಿಂತಿದ್ದೆವು. ನನ್ನ ಗಂಡ ಮತ್ತು ಅವನ ಮನೆಯವರು ಈ ಮಗುವನ್ನು ಸಾಕಬೇಕೆಂಬ ಕಾರಣಕ್ಕೆ ನನ್ನನ್ನು ಮನೆಯಿಂದ ಹೊರಗೆ ಹಾಕಿದರು. ಅವರ ಪ್ರಕಾರ ನಾನೊಂದು ಪಾಪ ಕೃತ್ಯವನ್ನು ಮಾಡಿದ್ದೇನೆ ಹಾಗೂ ಅದಕ್ಕೆ ಕ್ಷಮೆಯೇ ಇಲ್ಲವೇನೋ ಎನ್ನುವಂತೆ ನನ್ನನ್ನು ನೋಡುತ್ತಾ ಇದ್ದರು. ಸ್ವಲ್ಪವೂ ಯೋಚಿಸದೆ ನನ್ನನ್ನು ಹೊರಗೆ ಹಾಕಿದರು. ನಾನು ಅವಳನ್ನು ಒಬ್ಬಳೇ ಬೆಳೆಸಬೇಕೆಂದು ನಿರ್ಧಾರ ಮಾಡಿದೆ. ಅವಳನ್ನು ಜೀವಂತವಾಗಿ ಉಳಿಸಲು ಏನು ಬೇಕಾದರೂ ಮಾಡುತ್ತೇನೆ ಎಂಬ ದೃಢವಾದ ನಿರ್ಧಾರವನ್ನು ನಾನು ಮಾಡಿದೆ" ಹೀಗೆ ತನ್ನ ಲೋಕವನ್ನು ತೆರೆದಿಡುತ್ತಾರೆ ಅಂಕಿತಾ.

Single Mother Fights Against Society To Save Her Baby Girl Aparajitha

ಅಂಕಿತ ತನ್ನ ತಾಯಿಯ ಮನೆಗೆ ತನ್ನ ಮಗುವನ್ನು ಕರೆದುಕೊಂಡು ಹೋದಳು. ಆಸ್ಪತ್ರೆಗೆ ಹೋಗುವುದು ಅವಳಿಗೆ ದಿನಚರಿಯೇ ಆಯಿತು. ಅವಳು ತನ್ನ ಮಗುವನ್ನು ಬದುಕಿಸಿಕೊಳ್ಳಲು ಇದಾಗಲೇ ಒಂದು ಲಕ್ಷದವರೆಗೂ ಖರ್ಚು ಮಾಡಿದ್ದಾಳೆ. ಆಸ್ಪತ್ರೆಯಲ್ಲೇ ಎಷ್ಟು ದಿನಗಳನ್ನು ಕಳೆದಿದ್ದಾಳೆ ಎಂಬುದು ಅವಳಿಗೂ ಕೂಡ ಗೊತ್ತಿಲ್ಲ. ಮಗುವಿನ ಎಲ್ಲಾ ಖರ್ಚನ್ನು ಅವಳೊಬ್ಬಳೆ ನಿರ್ವಹಿಸಬೇಕಾಗಿದೆ. ಅವಳ ತಂದೆ ತಾಯಿಗೂ ಕೂಡ ಅದಾಗಲೇ ಬಹಳ ವಯಸ್ಸಾಗಿದೆ. ತನಗೆ ಮದುವೆಯ ನಂತರವೂ ಆಶ್ರಯ ಕೊಟ್ಟದ್ದಕ್ಕೆ ಅವಳು ಅವರಿಗೆ ಋಣಿಯಾಗಿದ್ದಾಳೆ. ಆದ್ದರಿಂದ ಅವರ ಬಳಿ ದುಡ್ಡನ್ನು ಅವಳು ಕೇಳುವುದು ತಪ್ಪು ಎಂಬ ಭಾವನೆ ಅವಳಿಗಿದೆ.

ಇದರ ನಡುವೆ ಅಪರಾಜಿತಾಳ ಸ್ಥಿತಿ ಕೂಡ ತುಂಬಾ ಹದಗೆಡುತ್ತಾ ಇದೆ. ಅವಳಿಗೆ ಉಸಿರಾಡಲು ಕೂಡ ಕಷ್ಟವಾಗುತ್ತಿದೆ. ಅಳಲು ಕೂಡ ಆ ಮಗುವಿಗೆ ಶಕ್ತಿಯೇ ಇಲ್ಲ. ಆಹಾರವನ್ನು ತೆಗೆದುಕೊಳ್ಳಲು ಮತ್ತು ಉಸಿರಾಡಲೂ ಕೂಡ ಮಗುವಿಗೆ ಕಷ್ಟವಾಗಿದೆ. ವೈದ್ಯರ ಪ್ರಕಾರ ಹೃದಯದ ಶಸ್ತ್ರ ಚಿಕಿತ್ಸೆಯೊಂದೇ ಇದಕ್ಕೆ ಪರಿಹಾರ.

"ಶಸ್ತ್ರಚಿಕಿತ್ಸೆ ಮಾಡಿಸಲು ನನಗೆ ಇನ್ನೂ 3.5 ಲಕ್ಷ ಹಣದ ಅವಶ್ಯಕತೆ ಇದೆ. ತಂದೆ ಇಲ್ಲದ ಆ ಮಗುವಿನ ಜೀವವನ್ನು ಉಳಿಸಲು ಎಷ್ಟು ಕಷ್ಟವಾದರೂ ಮತ್ತು ಎಷ್ಟು ಸಮಯ ಹಿಡಿದರೂ ನಾನು ಒದ್ದಾಡಲು ಸಿದ್ಧವಿದ್ದೇನೆ. ನನಗಾಗಿ ಯಾರೂ ಇಲ್ಲ. ನನ್ನ ಮಗಳಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಎಷ್ಟೋ ಬಾರಿ ಆಸ್ಪತ್ರೆಯ ಮುಂದೆ ನಾನು ಅಳುತ್ತಾ ಕುಸಿದು ಬಿದ್ದಿದ್ದೇನೆ. ನಿಮ್ಮಂತಹ ಕೆಲವು ಹೃದಯವಂತ ಮನುಷ್ಯರು ನನಗೆ ಅವರ ಸಮಯವನ್ನು ಕೊಟ್ಟು ನನ್ನನ್ನು ಸಮಾಧಾನ ಮಾಡಿದ್ದಾರೆ. ಅಪರಾಜಿತಾಳ ಅದೃಷ್ಟವನ್ನು ನಾನು ನಿಮ್ಮ ಮುಂದೆ ಇಟ್ಟಿದ್ದೇನೆ. ನಿಮ್ಮ ದಯೆಯಿಂದ ಅವಳು ಬದುಕುತ್ತಾಳೆ ಎಂಬ ನಂಬಿಕೆ ನನಗೆ ಇದೆ" ಎಂದು ಅಂಕಿತ ಹೇಳಿದ್ದಾಳೆ.

ಮನುಷ್ಯತ್ವವನ್ನು ಸಾಕಾರಗೊಳಿಸಲು ನಾವೆಲ್ಲರೂ ಕೈಗೂಡಿ ಅವರಿಗೆ ಸಹಾಯ ಮಾಡೋಣ. ನಿಮ್ಮ ಕಡೆಯಿಂದ ಬರುವ ಒಂದು ಚಿಕ್ಕ ಸಹಾಯವು ಕೂಡ ಆ ಮಗುವಿನ ಜೀವನವನ್ನು ಉಳಿಸುವುದರಲ್ಲಿ ಸಹಕಾರಿಯಾಗುತ್ತದೆ. ಅಂಕಿತಾ ತನ್ನ ಮಗುವನ್ನು ಉಳಿಸಿಕೊಳ್ಳಲು ಅವಳಿಗೆ ಸಹಾಯ ಮಾಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X