ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಶಾಲೆ ಪ್ರಾಂಶುಪಾಲರಿಗೆ ಸಿಂಗಾಪುರ್‌ ಪ್ರವಾಸ ಭಾಗ್ಯ

ಪ್ರವಾಸ ಹೊರಟಿರುವ ಪ್ರಾಂಶುಪಾಲರು ಫೆಬ್ರವರಿ 6 ರಿಂದ 10 ರವರೆಗೆ ಸಿಂಗಾಪುರದಲ್ಲಿ ವೃತ್ತಿಪರ ಶಿಕ್ಷಕರ ತರಬೇತಿ ಸೆಮಿನಾರ್‌ನಲ್ಲಿ ಭಾಗವಹಿಸಲಿದ್ದಾರೆ.

|
Google Oneindia Kannada News

ಚಂಡೀಗಢ, ಫೆಬ್ರವರಿ 4: ಸದಾ ಹೊಸ ಯೋಜನೆ, ಆಡಳಿತ ವಿಧಾನಗಳಿಗೆ ಹೆಸರುವಾಸಿಯಾಗಿರುವ ಪಂಜಾಬ್‌ ಸಿಎಂ ಭಗವಂತ ಮಾನ್‌ ಅವರು ಸರ್ಕಾರಿ ಶಾಲಾ ಪ್ರಾಂಶುಪಾಲರಿಗೆ ಸಿಂಗಾಪುರಕ್ಕೆ ಪ್ರವಾಸ ಭಾಗ್ಯವನ್ನು ನೀಡಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ವೃತ್ತಿಪರ ತರಬೇತಿಗಾಗಿ ಸಿಂಗಾಪುರಕ್ಕೆ ಭೇಟಿ ನೀಡಲಿರುವ 36 ಸರ್ಕಾರಿ ಶಾಲಾ ಪ್ರಾಂಶುಪಾಲರ ಮೊದಲ ಬ್ಯಾಚ್‌ಗೆ ಶನಿವಾರ ಚಾಲನೆ ನೀಡಿದ್ದಾರೆ. ಪ್ರವಾಸ ಹೊರಟಿರುವ ಪ್ರಾಂಶುಪಾಲರು ಫೆಬ್ರವರಿ 6 ರಿಂದ 10 ರವರೆಗೆ ಸಿಂಗಾಪುರದಲ್ಲಿ ವೃತ್ತಿಪರ ಶಿಕ್ಷಕರ ತರಬೇತಿ ಸೆಮಿನಾರ್‌ನಲ್ಲಿ ಭಾಗವಹಿಸಲಿದ್ದಾರೆ.

ಪಂಜಾಬ್‌ನಲ್ಲಿ 400 ಮೊಹಲ್ಲಾ ಕ್ಲಿನಿಕ್‌ಗಳ ಲೋಕಾರ್ಪಣೆಪಂಜಾಬ್‌ನಲ್ಲಿ 400 ಮೊಹಲ್ಲಾ ಕ್ಲಿನಿಕ್‌ಗಳ ಲೋಕಾರ್ಪಣೆ

ಕಳೆದ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷವು ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿವರ್ತಿಸಲಾಗುವುದು ಎಂದು ಜನರಿಗೆ ಭರವಸೆ ನೀಡಿತ್ತು. ಇಂದು, 36 ಶಾಲಾ ಮುಖ್ಯಸ್ಥರ ಮೊದಲ ಬ್ಯಾಚ್ ಸಿಂಗಾಪುರಕ್ಕೆ ಹೋಗುತ್ತಿದ್ದು, ಅವರು ಐದು ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಸಿಂಗಾಪುರದ ಪ್ರಿನ್ಸಿಪಾಲ್ ಅಕಾಡೆಮಿಯಲ್ಲಿ ಅವರು ಶಿಕ್ಷಣ ಕ್ಷೇತ್ರದ ಆಧುನಿಕ ವಿಧಾನಗಳನ್ನು ಕಲಿಯುತ್ತಾರೆ ಎಂದು ಸುದ್ದಿಗಾರರಿಗೆ ಮುಖ್ಯಮಂತ್ರಿ ಹೇಳಿದರು.

Singapore trip for Punjab government school principals

ಮೊದಲ ಬ್ಯಾಚ್ ಫೆಬ್ರವರಿ 11ರಂದು ಹಿಂತಿರುಗಲಿದ್ದು, ಅವರು ತಮ್ಮ ಅನುಭವವನ್ನು ತಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದ ಅವರು, ಅರವಿಂದ್ ಕೇಜ್ರಿವಾಲ್ ಆಡಳಿತದಿಂದ ದೆಹಲಿ ಸರ್ಕಾರ ಹೇಗೆ ರೂಪುಗೊಂಡಿದೆ. ಪಂಜಾಬ್ ಅದೇ ಪರಿವರ್ತನಾ ಪ್ರಕ್ರಿಯೆಗೆ ಸಾಕ್ಷಿಯಾಗಲಿದೆ ಎಂದು ಮಾನ್ ಹೇಳಿದರು.

Singapore trip for Punjab government school principals

ನಮ್ಮಲ್ಲಿ ಪ್ರತಿಭಾವಂತ ಶಿಕ್ಷಕರಿದ್ದಾರೆ. ಹಾಗಾಗಿ ಅವರನ್ನು ಪ್ರಸ್ತುತ ಸ್ಥಿತಿಗೆ ಬದಲಾಯಿಸುವ ಅಗತ್ಯವಿದೆ. (ಇತ್ತೀಚಿನ ಬೋಧನಾ ತಂತ್ರಗಳ ಬಗ್ಗೆ), ಅದರ ಪ್ರಕ್ರಿಯೆಯು ಇಂದು ಪ್ರಾರಂಭವಾಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ತಮ್ಮ ಸರ್ಕಾರದ ಆದ್ಯತೆಯಾಗಿದೆ. ನಾವು ಶಿಕ್ಷಕರನ್ನು ಫಿನ್‌ಲ್ಯಾಂಡ್‌ಗೂ ಕಳುಹಿಸುತ್ತೇವೆ. ಕಲಿಯಲು ಹೊಸ ಮತ್ತು ಇತ್ತೀಚಿನ ಬೋಧನಾ ವಿಧಾನಗಳು ಲಭ್ಯವಿರುವ ಸ್ಥಳಗಳಿಗೆ ನಾವು ಶಿಕ್ಷಕರನ್ನು ತರಬೇತಿಗೆ ಕಳುಹಿಸುತ್ತೇವೆ. ಮುಂಬರುವ ರಾಜ್ಯ ಬಜೆಟ್‌ನಲ್ಲಿ ನಾವು ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡುತ್ತೇವೆ ಎಂದು ಅವರು ಹೇಳಿದರು.

English summary
Punjab Chief Minister Bhagwant Mann on Saturday flagged off the first batch of 36 government school principals who will visit Singapore for professional training.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X