ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕಕಾಲಕ್ಕೆ ಲೋಕಸಭೆ, ವಿಧಾನಸಭೆ ಚುನಾವಣೆಗೆ ಬೇಕು 5 ಸಂವಿಧಾನ ತಿದ್ದುಪಡಿ

By Sachhidananda Acharya
|
Google Oneindia Kannada News

ನವದೆಹಲಿ, ಫೆಬ್ರವರಿ 5: ಪ್ರಧಾನಿ ನರೇಂದ್ರ ಮೋದಿ ಏಕಕಾಲಕ್ಕೆ ದೇಶದ ಚುನಾವಣೆ ಮತ್ತು ರಾಜ್ಯದ ಚುನಾವಣೆಗಳು ನಡೆಯಬೇಕು ಎಂಬುದನ್ನು ಪ್ರತಿಪಾದಿಸಲು ಆರಂಭಿಸಿದ ನಂತರ ಈ ಕೋರಿಕೆಗೆ ಮತ್ತಷ್ಟು ಬಲ ಬಂದಿದೆ. ಏಕಕಾಲಕ್ಕೆ ಚುನಾವಣೆ ನಡೆಯಬೇಕು ಎಂಬ ವಾದಕ್ಕೆ ಚುನಾವಣಾ ಆಯೋಗವೂ ಬೆಂಬಲ ನೀಡಿದೆ. ಆದರೆ ಇದಕ್ಕೆ ಸಾಂವಿಧಾನಿಕ ಅಡೆತಡೆಗಳು ಎದುರಾಗಿವೆ.

ಏಕಕಾಲಕ್ಕೆ ಚುನಾವಣೆ ನಡೆಸುವ ಸಂಬಂಧ ಚುನಾವಣಾ ಆಯೋಗ ಅಭಿಪ್ರಾಯ ಕೇಳಿ ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಚಿವಾಲಯ ಏಕಕಾಲಕ್ಕೆ ಚುನಾವಣೆ ನಡೆಸಲು ಸಂವಿಧಾನಕ್ಕೆ ಕನಿಷ್ಠ 5 ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ ಎಂದು ತನ್ನ ಆಂತರಿಕ ಪತ್ರ ವ್ಯವಹಾರದಲ್ಲಿ ಹೇಳಿದೆ.

ಚುನಾವಣಾ ಸಿದ್ಧತೆ ಪರಿಶೀಲನೆಗಾಗಿ ರಾಜ್ಯಕ್ಕೆ ಮುಖ್ಯ ಚುನಾವಣಾ ಆಯುಕ್ತರ ಭೇಟಿಚುನಾವಣಾ ಸಿದ್ಧತೆ ಪರಿಶೀಲನೆಗಾಗಿ ರಾಜ್ಯಕ್ಕೆ ಮುಖ್ಯ ಚುನಾವಣಾ ಆಯುಕ್ತರ ಭೇಟಿ

ಲೋಕಸಭೆ ಮತ್ತು ವಿಧಾನಸಭೆಗಳ ಅವಧಿ, ವಿಸರ್ಜನೆಗೆ ಸಂಬಂಧಿಸಿದ ಅನುಚ್ಛೇದಗಳನ್ನು ತಿದ್ದುಪಡಿ ಮಾಡಬೇಕು ಎಂದು ಸಚಿವಾಲಯ ಹೇಳಿದೆ.

 Simultaneous polls needs 5 amendments to the constitution: Law ministry

ಲೋಕಸಭೆ ಚುನಾವಣೆ ಜತೆ ರಾಜ್ಯ ವಿಧಾನಸಭೆಗಳಿಗೂ ಚುನಾವಣೆ ಹೊಂದಾಣಿಕೆ ಮಾಡಬೇಕಾದಲ್ಲಿ ವಿಧಾನಸಭೆಗಳ ಅವಧಿಯನ್ನು ವಿಸ್ತರಣೆ ಮಾಡಬೇಕಾಗುತ್ತದೆ ಅಥವಾ ಕಡಿತ ಮಾಡಬೇಕಾಗುತ್ತದೆ. ಇದಕ್ಕಾಗಿ ಸಂಸತ್ತಿನ ಅವಧಿಗೆ ಸಂಬಂಧಿಸಿದ ಸಂವಿಧಾನದ ಆರ್ಟಿಕಲ್ 83ಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ.

ಇನ್ನು ಲೋಕಸಭೆಯನ್ನು ರಾಷ್ಟ್ರಪತಿಗಳು ವಿಸರ್ಜನೆ ಮಾಡುವುದರ ಬಗ್ಗೆ ಉಲ್ಲೇಖವಿರುವ ಆರ್ಟಿಕಲ್ 85 ಮತ್ತು ರಾಜ್ಯ ವಿಧಾನಸಭೆಗಳ ಅವಧಿಯನ್ನು ವಿವರಿಸುವ ಆರ್ಟಿಕಲ್ 172, ವಿಧಾನಸಭೆಗಳ ವಿಸರ್ಜನೆಗೆ ಸಂಬಂಧಿಸಿದ ಆರ್ಟಿಕಲ್ 174 ಮತ್ತು ಆರ್ಟಿಕಲ್ 356ಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ ಎಂದು ಕಾನೂನು ಸಚಿವಾಲಯ ಹೇಳಿದೆ.

ಜತೆಗೆ ಈ ತಿದ್ದುಪಡಿಗಳಿಗೆ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳ ಸಮ್ಮತಿಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂದು ಕಾನೂನು ಸಚಿವಾಲಯ ಅಭಿಪ್ರಾಯ ದಾಖಲಿಸಿದೆ. ಇದಲ್ಲದೆ ಏಕಕಾಲಕ್ಕೆ ಚುನಾವಣೆ ನಡೆಸಲು ಹೆಚ್ಚುವರಿ ಇವಿಎಂ ಮತ್ತು ವಿವಿಪ್ಯಾಟ್ ಗಳ ಅಗತ್ಯ ಬೀಳಲಿದೆ. ಇದಕ್ಕೆ ಹೆಚ್ಚುವರಿಯಾಗಿ 2,000 ಕೋಟಿ ಹಣ ಬೇಕು. ಇನ್ನು ಈ ಮೆಷಿನ್ ಗಳ ಜೀವಿತಾವಧಿ 15 ವರ್ಷಗಳಾಗಿರುವುದರಿಂದ ಕೇವಲ 3-4 ಚುನಾವಣೆಗಳಲ್ಲಿ ಮಾತ್ರ ಬಳಸಬಹುದಾಗಿದೆ. ಪ್ರತಿ 15 ವರ್ಷದ ನಂತರ ಇವಿಎಂಗಳನ್ನು ಬದಲಾಯಿಸಲು ಭಾರೀ ಹಣ ಖರ್ಚಾಗಲಿದೆ ಎಂದು ಚುನಾವಣಾ ಆಯೋಗ ತನ್ನ ಹೇಳಿದೆ.

ಆದರೆ ಚುನಾವಣಾ ಆಯೋಗ ಏಕಕಾಲದ ಚುನಾವಣೆಗೆ ಬೆಂಬಲ ಸೂಚಿಸಿದೆ ಎಂದು ತಿಳಿದು ಬಂದಿದೆ. ಇದಲ್ಲದೆ ರಾಜಕೀಯ ಕಾರಣಗಳಿಗೆ ಲೋಕಸಭೆ ಮತ್ತು ವಿಧಾನಸಭೆಗಳು ಅವಧಿಗೂ ಮುನ್ನ ವಿಸರ್ಜನೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಆಯೋಗ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

"ಇನ್ನು ಯಾವುದೇ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಂದರ್ಭದಲ್ಲೇ ಸರಕಾರದ ಪರ 'ವಿಶ್ವಾಸಮತ ನಿರ್ಣಯ' ಎಂಬ ಆಯ್ಕೆಯೂ ಇರಬೇಕು," ಎಂದು ಚುನಾವಣೆ ಆಯೋಗ ತನ್ನ ಅಭಿಪ್ರಾಯ ತಿಳಿಸಿದೆ.

English summary
Internal note of the Union law ministry has spoken about the constitutional challenges to paving the way for simultaneous polls in the nation. It said simultaneous polls may need amendments to not less than five Articles of the Constitution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X